ಮಹಿಷ ದಸರಾ ಆಚರಣೆ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದಿನಿಂದ ಅಕ್ಟೋಬರ್ 24ರವರೆಗೆ ನಿಷೇಧಾಜ್ಞೆ ಜಾರಿ
ಚಿಕ್ಕಮಗಳೂರು, ಅಕ್ಟೋಬರ್, 19: ಮಹಿಷ ದಸರಾ ಆಚರಣೆಗೆ ಸಂಬಂಧಿಸಿದಂತೆ ಅಕ್ಟೋಬರ್ 19ರಿಂದ ಅಕ್ಟೋಬರ್ 24ರವರೆಗೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ಆದೇಶ ಹೊರಡಿಸಿದ್ದಾರೆ.
ಮಹಿಷ ದಸರಾ ಆಚರಣೆಗೆ ಸಂಬಂಧ ಯಾವುದೇ ಪೋಸ್ಟರ್, ಬ್ಯಾನರ್, ಬಂಟಿಂಗ್ಸ್ ಆಳವಡಿಸುವುದು, ಪ್ರತಿಭಟನೆ, ಮೆರವಣಿಗೆಗಳನ್ನು, ಅವಹೇಳನಕಾರಿಯಂತಹ ಯಾವುದೇ ಘೋಷಣೆಗಳು, ಭಾಷಣಗಳು ಪ್ರಕಟಣೆಗಳು, ಅವಾಚ್ಯ ಶಬ್ದಗಳ ಬಳಕೆ, ಪ್ರಚೋದನಕಾರಿ ಭಾಷಣ, ಗಾಯನ ಇತ್ಯಾದಿ ಚಟುವಟಿಕೆಗಳನ್ನು ನಿಷೇಧಿಸಿದೆ. ಶಸ್ತ್ರಗಳು, ದೊಣ್ಣೆಗಳು, ಕತ್ತಿಗಳು, ಈಟಿಗಳು, ಗದ್ದೆಗಳು, ಬಂದೂಕುಗಳು, ಚಾಕುಗಳು, ಕೋಲುಗಳು, ಲಾಟಿಗಳನ್ನು ಅಥವಾ ದೈಹಿಕ ಹಿಂಸೆಯನ್ನುಂಟು ಮಾಡುವ ಇತರೆ ಯಾವುದೇ ವಸ್ತುಗಳನ್ನು ಒಯ್ಯುವುದನ್ನು ನಿಷೇಧಿಸಿದೆ.

ಪಟಾಕಿಗಳನ್ನು ಸಿಡಿಸುವುದು, ಯಾವುದೇ ಕ್ಷಾರಕ ಪದಾರ್ಥ ಅಥವಾ ಸ್ಪೋಟಕಗಳನ್ನು ಒಯ್ಯುವುದನ್ನು ನಿಷೇಧಿಸಿದೆ. ಕಲ್ಲುಗಳನ್ನು ಅಥವಾ ಕ್ಷೀಪಣಿಗಳನ್ನು ಎಸೆಯುವ ಅಥವಾ ವೇಗದಿಂದ ಒಗೆಯುವ ಸಾಧನಗಳ ಅಥವಾ ಉಪಕರಣಗಳ ಒಯ್ಯುವಿಕೆಯನ್ನು ಶೇಖರಿಸುವುದನ್ನು ಮತ್ತು ತಯಾರಿಸುವುದನ್ನು ನಿಷೇಧಿಸಿದೆ.
ಪ್ರಚೋದಿಸಬಹುದಾದಂತಹ ಬಹಿರಂಗ ಘೋಷಣೆಗಳನ್ನು ಮಾಡುವುದು, ಹಾಡುಗಳನ್ನು ಹಾಡುವುದು, ಸಂಗೀತವನ್ನು ನುಡಿಸುವುದು, ಆವೇಶಭರಿತ ಭಾಷಣ ಮಾಡುವುದು, ಇಂಗಿತ ಸೂಚನೆಗಳ ಅಥವಾ ಅಂಕ ನಿರೂಪಣೆಗಳನ್ನು ಪ್ರಯೋಗ ಮಾಡುವುದು ಮತ್ತು ಚಿತ್ರಗಳನ್ನು, ಸಂಕೇತಗಳನ್ನು, ಭಿತ್ತಿ ಪತ್ರಗಳನ್ನು ಅಥವಾ ಇತರೆ ಯಾವುದೇ ವಸ್ತು ಅಥವಾ ಪದಾರ್ಥಗಳನ್ನು ತಯಾರಿಸುವುದು, ಪ್ರದರ್ಶಿಸುವುದು ಅಥವಾ ಪ್ರಸಾರ ಮಾಡುವುದನ್ನು ನಿಷೇಧಿಸಿದೆ.
ಯಾವುದೇ ವ್ಯಕ್ತಿಯು ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ಧ ನಿಯಮಾನುಸಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಯುವ ದಸರಾಗೆ ಮೆರಗು ತಂದ ಸ್ಯಾಂಡಲ್‌ವುಡ್ ಬಳಗ
ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಯುವ ದಸರಾಗೆ ಬುಧುವಾರ ವಿಧ್ತುಕ್ತ ಚಾಲನೆ ದೊರೆಕಿತು. ಮಹಾರಾಜ ಕಾಲೇಜು ಮೈದಾನದಲ್ಲಿ ಬುಧವಾರ (ಅಕ್ಟೋಬರ್ 18) ಆರಂಭವಾದ ನಾಲ್ಕು ದಿನದ ಕಾರ್ಯಕ್ರಮಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಚಾಲನೆ ನೀಡಿದರು.
ನಂತರ ಮಾತನಾಡಿದ ಶಿವರಾಜ್ ಕುಮಾರ್, ನವರಾತ್ರಿ ಶುರುವಾಗಿದೆ. ಎಲ್ಲರೂ ಖುಷಿಪಡಿ. ಘೋಸ್ಟ್ ಸಿನಿಮಾ ನಾಳೆ ಬಿಡುಗಡೆ ಆಗಲಿದೆ. ಓದುವಾಗ ಓದಿ, ಜಾಲಿ ಆಗಿರುವಾಗ ಜಾಲಿ ಆಗಿರಿ. ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಬಳಿಕ ಶಿವರಾಜ್ ಕುಮಾರ್ ಅವರು " ಕಾಲ್‌ಮಿ ಓಜಿ ಒರಿಜಿನಲ್ ಗ್ಯಾಂಗ್ ಸ್ಟಾರ್" ಡೈಲಾಗ್ ಹೊಡೆದು ಚಪ್ಪಾಳೆ ಗಿಟ್ಟಿಸಿದರು. "ಆಕಾಶವೇ ಬೀಳಲಿ ಎಂದು ನಾನೆಂದು ನಿನ್ನವನು" ಗೀತೆ ಹಾಡಿ ರಂಜಿಸಿದರು. ನಂತರ ಆನಂದ ಸಿನಿಮಾದ "ಟುವ್ವಿ ಟುವ್ವಿ ಎಂದು ಹಾಡುವ ಹೊಸ ಹಕ್ಕಿಯ ನೋಡಿದೆ" ಎಂಬ ಗೀತೆ ಹಾಡಿದರು.
ಇದಕ್ಕೂ ಮುನ್ನ ನಟ ಶರಣ್ ಗೀತಾ ಸಿನಿಮಾದ ಜೊತೆಯಲಿ ಜೊತೆಜೊತೆಯಲಿ ಹಾಗೂ ಅಧ್ಯಕ್ಷ ಸಿನಿಮಾ ಟೈಟಲ್ ಸಾಂಗ್ ಮತ್ತು ರ‍್ಯಾಂಬೋ ಸಿನಿಮಾದ ಚುಟು ಚುಟು ಗೀತೆ ಹಾಡಿದರು. ಈ ವೇಳೆ ನಟರಾದ ಅಜಯ್ ರಾವ್, ರಿಷಿ ಭಾಗವಹಸಿದ್ದರು.
ಗಾಯಕಿ ಐಶ್ವರ್ಯ ರಂಗರಾಜನ್ ಅವರು ಏಕ್ ಲವ್ ಏ ಸಿನಿಮಾದಿಂದ "ಡೇಟ್ ಮಾಡೋಣ ಮೀಟ್ ಮಾಡೋಣ" ಹಾಡು ಆಡಿ ಸಭಿಕರನ್ನು ರಂಜಿಸಿದರು. ದಿವ್ಯ ರಾಮಚಂದ್ರನ್ ಅವರು 'ಜೋಕೆ ನಾನು ಬಳ್ಳಿಯ ಮಿಂಚು' ಗೀತೆ ಹಾಡಿದರು. ಗಾಯಕ ವ್ಯಾಸರಾಜ್ ಸೋಸಲೆ ಬಂದ ಚಕ್ರವರ್ತಿ' ಗೀತೆಗೆ ಯುವಸಮೂಹ ಹುಚ್ಚೆದ್ದು ಕುಣಿದರು. ಸ್ಯಾಂಡಲ್‌ವುಡ್ ಸಂಗೀತ ನಿರ್ದೇಶಕ ಸಾಧುಕೋಕಿಲ ತಮ್ಮ ಹಾಸ್ಯ ಕಾರ್ಯಕ್ರಮದ ಮೂಲಕ ನಗೆಯ ಕಚಕುಳಿ ಇಟ್ಟರು.
ರಾಧಿಕಾ ನಾರಾಯಣ್ ತಂಡದಿಂದ ಪುಷ್ಪಕ ವಿಮಾನ ಸಿನಿಮಾದ "ಜಿಲ್ಕ ಜಿಲ್ಕ" ಗೀತೆಗೆ ನೃತ್ಯ ಪ್ರದರ್ಶನ ನೀಡಿ ಧೂಳೆಬ್ಬಿಸಿತು. ನಾನು ವಿದ್ಯಾವಿಕಾಸ ಕಾಲೇಜಿನಲ್ಲಿ ಓದಿರುವ ಬಗ್ಗೆ ಬಿಗ್ ಬಾಸ್ ಖ್ಯಾತಿಯ ಕಿಶನ್ ಕಾಂತಾರ, ಜೇಮ್ಸ್, ಯುವರತ್ನ ಸಿನಿಮಾಗಳ ವಿವಿಧ ಗೀತೆಗಳಿಗೆ ನೃತ್ಯ ನೀಡಿ ಸಭಿಕರನ್ನು ಕುಣಿಯುವಂತೆ ಮಾಡಿದರು. ಬಳಿಕ ನಟ ಪುನೀತ್ ರಾಜ್‌ಕುಮಾರ್ ಭಾವಚಿತ್ರ ಪ್ರದರ್ಶಿಸಿ ಗೊಂಬೆ ಹೇಳುತ್ತೈತೆ ಗೀತೆಗೆ ನೃತ್ಯ ಪ್ರದರ್ಶನ ನೀಡಿ ಗಮನ ಸೆಳೆದರು.
ಬರ ಹಾಗೂ ಸಾಂಪ್ರದಾಯಿಕ ದಸರಾ ಹಿನ್ನೆಲೆಯಲ್ಲಿ ವೇದಿಕೆ ನಿರ್ಮಾಣ ಬಿಟ್ಟರೆ ಸಾರ್ವಜನಿಕರು ಕೂರಲು ತೆರೆದ ಆಸನ ವ್ಯವಸ್ಥೆ ಮಾಡಲಾಗಿತ್ತು. ವಿವಿಐಪಿ, ವಿಐಪಿ ಹಾಗೂ ಸಾರ್ವಜನಿಕರಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಮಾಡಲಾಗಿತ್ತು. 6 ಗಂಟೆಯಿಂದ ಉದ್ಘಾಟನೆ ಕಾರ್ಯಕ್ರಮದವರೆಗೂ ಶೇಕಡಾ ಅರ್ಧದಷ್ಟು ಆಸನಗಳು ಭರ್ತಿಯಾಗಿರಲಿಲ್ಲ. ಆದರೆ, ಸಾಧುಕೋಕಿಲ ತಂಡದ ಕಾರ್ಯಕ್ರಮ ಆರಂಭಗೊಂಡಾಗ ಆಸನಗಳು ಸಂಪೂರ್ಣ ಭರ್ತಿಯಾಗಿದ್ದವು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಯುವಶಕ್ತಿ ದೇಶದ ದೊಡ್ಡ ಶಕ್ತಿ. ಯುವಸಮೂಹದ ಮೇಲೆ ಸಾಕಷ್ಟು ಜವಾಬ್ದಾರಿ ಇರುತ್ತದೆ. ಅದನ್ನು ಅರಿತುಕೊಳ್ಳಬೇಕು. ಸೌಹಾರ್ದತೆ ಹಾಗೂ ಬಹುತ್ವ ಉಳಿವಿಗೆ ಯುವಜನತೆ ಶ್ರಮಿಬೇಕು ಎಂದರು. ಈ ವೇಳೆ ಶಾಸಕರಾದ ಹರೀಶ್ ಗೌಡ, ತನ್ವೀರ್ ಸೇಠ್, ಮೇಯರ್ ಶಿವಕುಮಾರ್, ಡಿಸಿ ಡಾ.ಕೆ.ವಿ.ರಾಜೇಂದ್ರ, ಎಸ್ಪಿ ಸೀಮಾ ಲಾಟ್ಕರ್ ಸೇರಿದಂತೆ ಇತರರು ಇದ್ದರು.












Click it and Unblock the Notifications