• search
  • Live TV
ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಿಕ್ಕಮಗಳೂರಿನ ಆಲೇಖಾನ್ ಬಳಿ ಮತ್ತೆ ಕುಸಿದ ಗುಡ್ಡ

By ಚಿಕ್ಕಮಗಳೂರು ಪ್ರತಿನಿಧಿ
|

ಚಿಕ್ಕಮಗಳೂರು, ಆಗಸ್ಟ್ 5: ಮೂಡಿಗೆರೆ ತಾಲೂಕಿನಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಮತ್ತೆ ಅಲ್ಲಲ್ಲಿ ಗುಡ್ಡ ಕುಸಿಯುವ ಘಟನೆಯೂ ನಡೆಯುತ್ತಿವೆ. ಆಲೇಖಾನ್ ಹೊರಟ್ಟಿ ಗೇಟ್ ಬಳಿ ಇಂದು ಮತ್ತೆ ಗುಡ್ಡ ಕುಸಿತ ಸಂಭವಿಸಿದೆ.

ಚಾರ್ಮಾಡಿಯಿಂದ ಆಲೇಖಾನ್ ಗೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯೆ ಗುಡ್ಡ ಕುಸಿತವಾಗಿದ್ದು, ಇದರಿಂದ ಆಲೇಖಾನ್ ಹೊರಟ್ಟಿ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ.

 ನಿನ್ನೆ ರಾತ್ರಿಯಿಂದ ಮೂಡಿಗೆರೆಯಲ್ಲಿ ಧಾರಾಕಾರ ಮಳೆ; ಅಲೇಖಾನ್ ಬಳಿ ಗುಡ್ಡ ಕುಸಿತ ನಿನ್ನೆ ರಾತ್ರಿಯಿಂದ ಮೂಡಿಗೆರೆಯಲ್ಲಿ ಧಾರಾಕಾರ ಮಳೆ; ಅಲೇಖಾನ್ ಬಳಿ ಗುಡ್ಡ ಕುಸಿತ

ಆಲೇಖಾನ್- ಹೊರಟ್ಟಿ ಗ್ರಾಮದ ನಡುವೆ 50ಕ್ಕೂ ಹೆಚ್ಚು ಮನೆಗಳಿದ್ದು, ಗುಡ್ಡ ಕುಸಿತದಿಂದ ಜನರು ಕಂಗಾಲಾಗಿದ್ದಾರೆ.

ಆಗಸ್ಟ್ 3ರಂದೂ ಕೊಟ್ಟಿಗೆಹಾರ, ಚಾರ್ಮಾಡಿ ಘಾಟಿಯಲ್ಲಿ ಭಾರೀ ಮಳೆಯಿಂದಾಗಿ ಚಾರ್ಮಾಡಿ ಘಾಟ್ ರಸ್ತೆಯ ಆಲೇಖಾನ್ ಬಳಿ ಗುಡ್ಡ ಕುಸಿತವಾಗಿತ್ತು. ಹೀಗಾಗಿ ಆಲೇಖಾನ್ ಗೆ ಸಂಪರ್ಕ ಕಲ್ಪಿಸೋ ದಾರಿ ಸಂಪೂರ್ಣ ಬಂದ್ ಆಗಿತ್ತು. ಇಂದು ಮತ್ತೆ ಅದೇ ಜಾಗದ ಸಮೀಪ ಗುಡ್ಡ ಕುಸಿದಿದೆ. ಇದರಿಂದ ವಾಹನ ಸವಾರರೂ ಪರದಾಡುವಂತಾಗಿದೆ.

English summary
Rain continues in Mudigere Taluk. Landslide happened again near Alekhan Gate today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X