ಸ್ಮಾರ್ಟ್ ಸ್ಟೆತಾಸ್ಕೋಪ್ ಸಂಶೋಧಿಸಿದ ಕಾಫಿನಾಡಿನ ಯುವಕ

ಚಿಕ್ಕಮಗಳೂರು, ಏಪ್ರಿಲ್ 29: ಜನರ ಆರೋಗ್ಯ ಕಾಪಾಡಲು, ಅವರನ್ನು ಮಾರಣಾಂತಿಕ ರೋಗದಿಂದ ಗುಣಪಡಿಸಬೇಕೆಂದು ಹಗಲಿರುಳು ಶ್ರಮಿಸುತ್ತಿರುವ ವೈದ್ಯರ ಕಾರ್ಯವನ್ನು ಎಷ್ಟು ಬಣ್ಣಿಸಿದರೂ ಸಾಲದು. ಈ ವೈದ್ಯರಿಗಾಗಿ ಚಿಕ್ಕಮಗಳೂರಿನ ಯುವಕನೊಬ್ಬ ಸ್ಮಾರ್ಟ್​ ಸ್ಟೆತಾಸ್ಕೋಪ್ ಕಂಡುಹಿಡಿದಿದ್ದು, ಇದರಿಂದ ರೋಗಿಗಳನ್ನು ಮುಟ್ಟದೇ, ವೈದ್ಯರು ಕುಳಿತಲ್ಲಿಯೇ ಎಲ್ಲೋ ಇರುವ ರೋಗಿಗಳ ಪರೀಕ್ಷೆ ಮಾಡಬಹುದು.

Recommended Video

      ಚಿಕ್ಕಮಗಳೂರು ನಗರಸಭೆಯವರಿಗೆ ಕಣ್ಣಿಲ್ವಾ? ಈ ಬಡಪಾಯಿಗಳ ಬದುಕನ್ನೇ ಅತಂತ್ರ ಮಾಡ್ಬಿಟ್ರಲ್ಲಾ!

      ಕೊರೊನಾ ವೈರಸ್ ರೋಗಿಗಳಿಂದ ದೇಶದ ಅನೇಕ ವೈದ್ಯರಿಗೂ ಸೋಂಕು ತಗುಲಿದ ಘಟನೆಗಳು ನಡೆದಿವೆ. ಇದರಿಂದಾಗಿ ಅನೇಕ ವೈದ್ಯರು ಜೀವಭಯದಿಂದ ರಾಜೀನಾಮೆ ನೀಡಲು ಕೂಡ ಮುಂದಾಗಿದ್ದರು.

       Koppa Young Man Invented Smart Stethoscope

      ರೋಗಿಗಳಿಂದ ವೈದ್ಯರಿಗೆ ಕೊರೋನಾ ಸೋಂಕು ತಗುಲದಿರಲಿ ಎಂಬ ಕಾರಣಕ್ಕೆ ಚಿಕ್ಕಮಗಳೂರಿನ ಯುವಕ ಸ್ಮಾರ್ಟ್ ಸ್ಟೆತಾಸ್ಕೋಪ್ ಕಂಡುಹಿಡಿದಿದ್ದಾರೆ. ಈ ಮೂಲಕ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಯುವಕ ಆದರ್ಶ್ ವೈದ್ಯಕೀಯ ಲೋಕದಲ್ಲಿ ಮಹಾ ಆವಿಷ್ಕಾರಕ್ಕೆ ನಾಂದಿ ಹಾಡಿದ್ದಾರೆ.

       Koppa Young Man Invented Smart Stethoscope

      ಇದರಿಂದಾಗಿ ಕೊರೊನಾ ವೈರಸ್ ಸೋಂಕಿತರ ಪರೀಕ್ಷೆ ಈಗ ಇನ್ನಷ್ಟು ಸುಲಭವಾಗಿದೆ. ಈ ಸ್ಮಾರ್ಟ್​ ಸ್ಟೆತಾಸ್ಕೋಪ್​ನಿಂದಾಗಿ ವೈದ್ಯರು ಕುಳಿತಲ್ಲಿಯೇ ರೋಗಿಗಳ ಪರೀಕ್ಷೆ ಮಾಡಬಹುದು. ಮುಂಬೈನ ಐಐಟಿ ಲ್ಯಾಬ್ ರಿಸರ್ಚರ್ ಆಗಿ ಕೆಲಸ ನಿರ್ವಹಿಸುತ್ತಿರುವ ಆದರ್ಶ್ ಈ ಸಂಶೋಧನೆ ಮಾಡಿದ್ದಾರೆ.

       Koppa Young Man Invented Smart Stethoscope

      ಈ ಸ್ಟೆತಾಸ್ಕೋಪ್ ಬಳಸಿ ಮೊಬೈಲ್, ಲ್ಯಾಪ್​ಟಾಪ್ ಮೂಲಕ ರೋಗಿಗಳ ಹೃದಯಬಡಿತ, ಉಸಿರಾಟದ ಪರೀಕ್ಷೆ ಮಾಡಬಹುದು. ಕೊರೊನಾ ವಿರುದ್ಧ ಹೋರಾಡಲು ಹೊಸ ಅಸ್ತ್ರ ಸಿಕ್ಕಂತಾಗಿದೆ. ಸ್ಮಾರ್ಟ್ ಸ್ಟೆತಾಸ್ಕೋಪ್​ನ ಬ್ಲೂಟೂತ್ ಸಹಾಯದಿಂದ ಕುಳಿತಲ್ಲೇ ತಪಾಸಣೆ ಮಾಡಬಹುದು. ಕೊರೊನಾ ರೋಗಿಯ ಬಳಿ ಸುಳಿಯದೇ ರೋಗದ ಲಕ್ಷಣವನ್ನು ಗ್ರಹಿಸಲು ಇದರಿಂದ ಸಾಧ್ಯವಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+