ಕೊಪ್ಪ ಸಹಕಾರ ಸಾರಿಗೆ ಕಾರ್ಮಿಕರ ಮುಷ್ಕರ ಅಂತ್ಯ
ಚಿಕ್ಕಮಗಳೂರು, ಫೆಬ್ರವರಿ 24: ಮಲೆನಾಡಿನ ಜೀವ ನಾಡಿಯಾಗಿದ್ದ ಸಹಕಾರ ಸಾರಿಗೆ ಸೇವೆಯನ್ನು ರದ್ದುಗೊಳಿಸಿ, ಕಳೆದ ಎಂಟು ದಿನಗಳಿಂದ ಕೊಪ್ಪದ ಸಹಕಾರ ಸಾರಿಗೆ ಕಾರ್ಮಿಕರು ನಡೆಸುತ್ತಿದ್ದ ಮುಷ್ಕರ ಅಂತ್ಯಗೊಂಡಿದೆ.
ತೀವ್ರ ಆರ್ಥಿಕ ಸಂಕಷ್ಟದಿಂದ ಸಹಕಾರ ಸಾರಿಗೆ ಸೇವೆಯನ್ನು ರದ್ದುಗೊಳಿಸಿದ್ದರು. ಈಗ ಸರ್ಕಾರದಿಂದ ಸಹಕಾರ ನೀಡುವ ಭರವಸೆ ಹಿನ್ನೆಲೆಯಲ್ಲಿ ಮುಷ್ಕರವನ್ನು ವಾಪಸ್ ಪಡೆಯಲಾಗಿದೆ.
ಸಹಕಾರ ಸಾರಿಗೆ ಕಾರ್ಮಿಕರು ಮುಷ್ಕರ ನಡೆಸುತ್ತಿದ್ದರಿಂದ ಮಲೆನಾಡಲ್ಲಿ ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು. ಮುಷ್ಕರ ಕೈಬಿಟ್ಟ ಹಿನ್ನಲೆಯಲ್ಲಿ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.

ಪ್ರತಿಭಟನಾಕಾರರರನ್ನು ಮಾಜಿ ಸಚಿವ ಡಿ.ಎನ್.ಜೀವರಾಜ್ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಹಕಾರಿ ಕಾರ್ಮಿಕರೊಂದಿಗೆ ಮಾತುಕತೆ ನಡೆಸುವ ಮೂಲಕ ಮುಷ್ಕರ ವಾಪಸ್ ಪಡೆಯಲು ಕಾರಣರಾಗಿದ್ದಾರೆ.
ರಾಜ್ಯ ಸರ್ಕಾರ ಕೂಡಲೇ ಸಹಕಾರ ಸಾರಿಗೆ ನೆರವಿಗೆ ಬರಬೇಕೆಂದು ಖುದ್ದು ಸಿಎಂ ಬಿ.ಎಸ್.ಯಡಿಯೂರಪ್ಪರಲ್ಲಿ ಮನವಿ ಮಾಡಿಕೊಂಡಿದ್ದರು. ಅವರು ಅನುದಾನ ನೀಡಲು ಒಪ್ಪಿದ್ದರೂ ಹಣಕಾಸು ಇಲಾಖೆ ಈ ಮನವಿಯನ್ನು ತಿರಸ್ಕರಿಸಿತ್ತು.











Click it and Unblock the Notifications