ಜೋರಾಗಿ ಶಬ್ದ ಆಯ್ತು, ಕಣ್ಣು ಬಿಟ್ಟಾಗ ಸಾವು ನೋವು: ಪ್ರತ್ಯಕ್ಷದರ್ಶಿಯ ಸಹೋದರನ ಮಾತು

ಚಿಕ್ಕಮಗಳೂರು, ಜೂನ್‌ 03: ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಸಂಭವಿಸಿದ ಭೀಕರ ರೈಲು ದುರಂತದಲ್ಲಿ 233 ಮೃತಪಟ್ಟಿದ್ದು, 900ಕ್ಕೂ ಹೆಚ್ಚು ಜನ ಗಂಭೀರ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಕೋರಮಂಡಲ್​​ ಎಕ್ಸಪ್ರೆಸ್​​, ಬೈಯಪ್ಪನಹಳ್ಳಿ ಸರ್‌​​ಎಂ ವಿಶ್ವೇಶ್ವರಯ್ಯ ಟರ್ಮಿನಲ್​-ಹೌರಾ ಎಕ್ಸಪ್ರೆಸ್​​ ಮತ್ತು ಗೂಡ್ಸ್​​ ರೈಲುಗಳ ಮಧ್ಯೆ ಸಂಭವಿಸಿದೆ. ಬೈಯಪ್ಪನಹಳ್ಳಿ ಸರ್‌​​ಎಂ ವಿಶ್ವೇಶ್ವರಯ್ಯ ಟರ್ಮಿನಲ್​-ಹೌರಾ ಎಕ್ಸಪ್ರೆಸ್‌ನಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ 110 ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Odisha Train Accident

ಈ ಬಗ್ಗೆ ರೈಲಿನಲ್ಲಿದ್ದ ಚಿಕ್ಕಮಗಳೂರು ಮೂಲದ ವ್ಯಕ್ತಿಯ ಸಹೋದರ ಮಾತನಾಡಿದ್ದು, ಮೇ.31 ರಂದು ಶೃಂಗೇರಿ, ಹೊರನಾಡಿನಿಂದ ಜೈನ ಸಮಾಜದ 110 ಮಂದಿ ಶಿಕರ್ಜಿ ಕ್ಷೇತ್ರಕ್ಕೆ ಹೊರಟಿದ್ದರು. ಅಜಿತ್ ಕುಮಾರ್ ಜೈನ್ ನೇತೃತ್ವದಲ್ಲಿ ಶ್ರಾವಕ ಶ್ರಾವಕಿಯರು ಯಾತ್ರೆಗೆ ತೆರಳಿದ್ದರು. ಬೆಳಗ್ಗೆ 4 ಗಂಟೆಗೆ ಬೆಂಗಳೂರು ತಲುಪಿದರು. ನನ್ನ ಅಣ್ಣ ಮಾಳ ಪ್ರಕಾಶ್ ಜೈನ್, ಅತ್ತಿಗೆ ಲಾವಣ್ಯ 110 ಯಾತ್ರಿಕರೊಂದಿಗೆ ತೆರಳಿದ್ದರು. ಅಂದು ರೈಲು ಎರಡು ಗಂಟೆ ತಡವಾಗಿ ಹೊರಟಿತು ಎಂದರು.

ಎಸ್-5, ಎಸ್-6 ಮತ್ತು ಎಸ್-7 ಕೊನೆಯ ಮೂರು ಬೋಗಿಗಳಲ್ಲಿ 110 ಜನ ಪ್ರಯಾಣಿಸುತ್ತಿದ್ದರು. ಇಂಜಿನ್ ಚೇಂಜ್ ಆದಾಗ ಕೊನೆಯಲ್ಲಿ ಮೂರು ಬೋಗಿಗಳು ಮೊದಲ ಮೂರು ಬೋಗಿಗಳಾದವು. ಜೋರಾಗಿ ಶಬ್ದವಾಯಿತು, ಆನಂತರ ರೈಲಿನಲ್ಲಿ ಮೇಲೆ ಮಲಗಿದ್ದವರು. ಕೆಳಗೆ ಬಿದ್ದರು ಎಂದು ನನ್ನ ಅತ್ತಿಗೆ ತಿಳಿಸಿದ್ದಾರೆ. ಹೊರಗೆ ಬಂದು ನೋಡಿದಾಗ ಅಪಾರ ಸಾವು ನೋವು ಉಂಟಾಗಿತ್ತು ಎಂದು ನನ್ನ ಅತ್ತಿಗೆ ಹೇಳಿದರು ಎಂದು ಮಾಳ ಪ್ರಕಾಶ್ ಜೈನ್ ಸಹೋದರ ಮಾಳ ಹರ್ಷವರ್ಧನ್ ಜೈನ್ ಹೇಳಿದರು.

Odisha Train Accident

ಕಳಸದಿಂದ 110 ಮಂದಿಯೂ ಸುರಕ್ಷಿತವಾಗಿದ್ದಾರೆ. ಯಾರಿಗೂ ಒಂದು ಸಣ್ಣ ಪುಟ್ಟ ಗಾಯಗಳಾಗಿಲ್ಲ. ಉಳಿದ ಬೋಗಿಗಳನ್ನು ಬೇರ್ಪಡಿಸಿ ಯಾತ್ರೆ ಮುಂದುರಿಸಿದ್ದಾರೆ. ಈಗ ಶಿಕರ್ಜಿಯತ್ತ ಎಲ್ಲರೂ ಪ್ರಯಾಣ ಬೆಳೆಸಿದ್ದಾರೆ ಎಂದುಮಾಳ ಹರ್ಷವರ್ಧನ್ ಜೈನ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+