ಹಾಲ್ ಟಿಕೆಟ್ ಸಿಕ್ಕಿಲ್ಲ: ಚಿಕ್ಕಮಗಳೂರಿನಲ್ಲಿ ವಿದ್ಯಾರ್ಥಿಗಳ ಗೊಂದಲ
ಚಿಕ್ಕಮಗಳೂರು, ಜೂನ್ 25: ಇಂದಿನಿಂದ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪ್ರಾರಂಭವಾಗಿದೆ. ಚಿಕ್ಕಮಗಳೂರಿನಲ್ಲಿ ಹಾಲ್ ಟಿಕೆಟ್ ಸಿಕ್ಕಿಲ್ಲ ಎಂದು ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗಿದೆ.
ಚಿಕ್ಕಮಗಳೂರಿನ ಮೂಡಿಗೆರೆ ಪಟ್ಟಣದ ಜ್ಯೂನಿಯರ್ ಕಾಲೇಜಿನಲ್ಲಿ ಶಾಲೆಯ ಮುಂದೆ ಹಾಲ್ ಟಿಕೆಟ್‌ಗಾಗಿ ವಿದ್ಯಾರ್ಥಿಗಳಲ್ಲಿ ಕಾಯುತ್ತಿದ್ದಾರೆ. ಪರೀಕ್ಷೆಯ ಒತ್ತಡದ ನಡುವೆ ಹಾಲ್ ಟಿಕೆಟ್ ಗೊಂದಲ ಉಂಟಾಗಿದೆ. ಕೆಲಕಾಲ ವಿದ್ಯಾರ್ಥಿಗಳಲ್ಲಿ ಇದು ಆತಂಕ ಮೂಡಿಸಿದೆ. ಹಾಲ್ ಟಿಕೆಟ್ ಕೊಡುವುದಾಗಿ ಶಿಕ್ಷಕರು ಭರವಸೆ ನೀಡಿದ್ದು, ಗೊಂದಲದಲ್ಲೇ ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳು ತೆರಳಿದ್ದಾರೆ.
ಕೊರೊನಾ ಪಾಸಿಟಿವ್ ಬಂದು ನಂತರ ನೆಗೆಟಿವ್ ವರದಿ ಬಂದ ಎಸ್ಎಸ್ಎಲ್ ಸಿ ವಿದ್ಯಾರ್ಥಿಗೆ ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಜಿಲ್ಲೆಯ 7 ಸೀಲ್ ಡೌನ್ ಪ್ರದೇಶಗಳ ವಿದ್ಯಾರ್ಥಿಗಳಿಗೂ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ.

ಜಿಲ್ಲೆಯಲ್ಲಿ 58 ಕೇಂದ್ರಗಳಲ್ಲಿ 13924 ವಿದ್ಯಾರ್ಥಿಗಳು ಇಂದು ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲೆಯಾದ್ಯಂತ 136 ರೂಟ್‌ಗಳನ್ನು ಮಾಡಲಾಗಿದ್ದು ಉಚಿತ ಸರ್ಕಾರಿ, ಖಾಸಗಿ ಬಸ್‌ಗಳನ್ನ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಕೇಂದ್ರಗಳಲ್ಲೂ ಸ್ಯಾನಿಟೈಸರ್, ಮಾಸ್ಕ್ ಕೊಡಲಾಗುತ್ತಿದ್ದು, ದೈಹಿಕ ಅಂತರದ ಬಗ್ಗೆ ಅಗತ್ಯ ಮಾರ್ಗದರ್ಶನ ನೀಡಲಾಗುತ್ತಿದೆ.












Click it and Unblock the Notifications