ಬಿಜೆಪಿ ಸರ್ಕಾರ ರಚನೆಯಾಗಿದ್ದು ಹೇಗೆನ್ನುವ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಮಲ್ಲಿಕಾರ್ಜುನ ಖರ್ಗೆ

ಚಿಕ್ಕಮಗಳೂರು, ಏಪ್ರಿಲ್‌, 24: ಬಹುಮತ ಕಡಿಮೆ ಆದರೆ, ಕಳ್ಳತನ ಹಾವಳಿಯೂ ಹೆಚ್ಚಾಗುತ್ತದೆ. ಅದೇ ರೀತಿ ನಮ್ಮ ಶಾಸಕರನ್ನು ಕಳ್ಳತನ ಮಾಡಿ ಇವರು ಸರ್ಕಾರ ರಚನೆ ಮಾಡಿದ್ದರು ಎಂದು ಬಿಜೆಪಿ ಸರ್ಕಾರದ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರು ಚಿಕ್ಕಮಗಳೂರಿನಲ್ಲಿ ಆರೋಪ ಮಾಡಿದ್ದಾರೆ.

ಬಿಜೆಪಿ ಸರ್ಕಾರ ತೆಗೆಯಬೇಕೆಂಬುದು ಜನರ ಬಯಕೆಯಾಗಿದೆ. ಕಾಂಗ್ರೆಸ್ ಕೂಡ ಈ ಬಗ್ಗೆ ಹೋರಾಡಿದೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ಸೇರಿದಂತೆ ಅನೇಕರು ಬಂದು ಹಲವು ಮಾತುಗಳನ್ನು ಹೇಳುತ್ತಾರೆ. ಆದರೆ, ರಾಜ್ಯಕ್ಕೆ ಅವರ ಕಾಲದಲ್ಲಿ ಯಾವ ಹೊಸ ಕೆಲಸವಾಗಿಲ್ಲ. 4 ಲೈನ್‌ ರಸ್ತೆಗೆ 2 ಸೇರಿಸಿ ಅಭಿವೃದ್ಧಿ ಅನ್ನುತ್ತಾರೆ. ಚಿಕ್ಕಮಗಳೂರು, ಕಡೂರಿನಲ್ಲಿ ಪೂರ್ತಿ ಕೆಲಸ ಮಾಡಿಸಿದ್ದೆ ನಾನು ಎಂದರು.

Karnataka election 2023: What did Mallikarjun Kharge say about BJP government formation?

ಇನ್ನು ಯಗಚಿ‌ ಡ್ಯಾಂ ಹಾಗೇ ಬಿದ್ದಿತ್ತು, ಆಸಕ್ತಿವಹಿಸಿ ಕೆಲಸ ಮಾಡಿಸಿದ್ದು, ಆಗ ನಾನು ಯಾವುದೇ ಕ್ರೆಡಿಟ್‌ ಕೇಳಲಿಲ್ಲ. ಆದರೆ ಬಿಜೆಪಿಯವರು ಲಂಚ ಹೊಡೆಯಲು ಕಾಯುತ್ತಿದ್ದಾರೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಚಿಕ್ಕಮಗಳೂರು ದೊಡ್ಡ ಸೆಂಟರ್ ಆಗಿದೆ. ನೈಸರ್ಗಿಕತೆಯನ್ನು ಬಳಸಿಕೊಂಡು ಅಭಿವೃದ್ಧಿ ಮಾಡಬಹುದು. ಡಬಲ್ ಇಂಜಿನ್ ಅಂತಾರೆ, 9 ವರ್ಷ ಕೇಂದ್ರದಲ್ಲಿ ಅವರದ್ದೇ ಸರ್ಕಾರ ಇತ್ತು. ಆದರೂ ಯಾಕೆ ಅಭಿವೃದ್ಧಿ ಮಾಡಿಲ್ಲ ಎಂದು ಹರಿಹಾಯ್ದರು.

ಬರೀ ಲೂಟಿ ಕೆಲಸ ಮಾಡಿದರೆ ಯಾವ ದೇಶ, ರಾಜ್ಯವೂ ಅಭಿವೃದ್ಧಿ ಆಗುವುದಿಲ್ಲ. ಆದ್ದರಿಂದ ಜನರು ರಾಜ್ಯದಲ್ಲಿ ಸರ್ಕಾರ ಬದಲಾಗಬೆಕೆಂದು ಬಯಸಿದ್ದಾರೆ. ಇದು ಕಳ್ಳತನ ಸರ್ಕಾರ, 150 ಸೀಟ್ ತರುವ ಬಯಕೆ‌ ನಮ್ಮದು. 120 ತಂದರೆ ನಾಲ್ಕೈದು ಜನರನ್ನು ಹೊತ್ತುಕೊಂಡು ಹೋಗಿ ಸರ್ಕಾರ ಮಾಡುವುದು ಬಿಜೆಪಿಯ ಕೆಲಸವಾಗಿದೆ. ಆದ್ದರಿಂದ ರಾಜ್ಯದ ಜನ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಆರ್ಶೀವಾದ ಮಾಡುತ್ತಾರೆ ಎನ್ನುವ ವಿಶ್ವಾಸ ಇದೆ ಎಂದರು.

ಹಾಗೆಯೆ 79ರಲ್ಲಿ ನಾನು, ಇಂದಿರಾಗಾಂಧಿ ಚುನಾವಣೆಗೆ ನಿಂತಾಗ ಇಲ್ಲಿಗೆ ಬಂದಿದ್ದೆವು. ಆ ಚುನಾಚಣೆಯಲ್ಲಿ ಗೆದ್ದ ಮೇಲೆ ದೇಶದ ಚಿತ್ರಣವೇ ಬದಲಾಗಿತ್ತು. ಈ ಮೂಲಕ ದೇಶದ ಚಿತ್ರಣ ಬದಲು ಮಾಡುವ ಶಕ್ತಿ ನೀಡಿದ್ದು ಕಾಫಿನಾಡು ಆಗಿದೆ. ಈ ಬಾರಿಯೂ ಮತ್ತೆ ಅಂತಹದ್ದೇ ಶಕ್ತಿ ಪಡೆಯುತ್ತೇವೆ. ರಾಜೇಗೌಡರು ಈ ಬಾರಿ ಲೀಡ್‌ನಲ್ಲಿ ಗೆದ್ದು ಬರಲಿದ್ದಾರೆ, ಹಾಗೆಯರ ಮತ್ತೊಂದೆಡೆ ಯಂಗಸ್ಟರ್ಸ್, ಮಹಿಳೆಗೆ ಟಿಕೆಟ್‌ ಕೊಡಬೇಕೆನ್ನುವ ಉದ್ದೇಶದಿಂದ ನಯನಾಗೆ ಟಿಕೆಟ್ ಕೊಟ್ಟಿದ್ದೇವೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+