ಲಿಂಗೈಕ್ಯರಾದ ಕರಡಿ ಮಠದ ಶಂಕರಾನಂದ ಸ್ವಾಮೀಜಿ
ಚಿಕ್ಕಮಗಳೂರು, ನವೆಂಬರ್ 5: ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕರಡಿ ಮಠದ ಶಂಕರಾನಂದ (60) ಸ್ವಾಮೀಜಿ ಲಿಂಗೈಕ್ಯರಾಗಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಕರಡಿಗವಿ ಮಠದ ಸ್ವಾಮೀಜಿಯಾಗಿದ್ದ ಶಂಕರಾನಂದ ಸ್ವಾಮೀಜಿ ಕಳೆದ ಕೆಲ ಸಮಯದಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಎರಡು ತಿಂಗಳಿಂದ ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರನ್ನು ಮತ್ತೆ ಮಠಕ್ಕೆ ಇಂದು ಕರೆತರಲಾಗಿತ್ತು.

ಆದರೆ ಮಠಕ್ಕೆ ಕರೆತಂದ ಒಂದೇ ಗಂಟೆಯಲ್ಲಿ ವಿಧಿವಶರಾಗಿದ್ದಾರೆ.












Click it and Unblock the Notifications