ಕಡೂರು: ಕೋಡಿಬಿದ್ದ ಐತಿಹಾಸಿಕ ಅಯ್ಯನಕೆರೆ
ಚಿಕ್ಕಮಗಳೂರು, ಆಗಸ್ಟ್, 04: ಚಂದ್ರದ್ರೋಣ ಪರ್ವತದ ತಪ್ಪಲಿನಲ್ಲಿ ಭಾರೀ ಮಳೆ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಬಳಿಯಿರುವ ಐತಿಹಾಸಿಕ ಅಯ್ಯನಕೆರೆಯ ಕೋಡಿ ಬಿದ್ದಿದೆ. ಇದರಿಂದ ಬಯಲುಸೀಮೆ ಭಾಗದ ರೈತರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ.
ಅಯ್ಯನ ಕೆರೆ ಕೋಡಿ ಬಿದ್ದಿರುವ ಹಿನ್ನೆಲೆ ಅಡಿಕೆ, ಬಾಳೆ, ತೆಂಗು ಸೇರಿದಂತೆ ಇತರೆ ಬೆಳೆಗಳಿಗೆ ಅನುಕೂಲ ಆದಂತಾಗಿದೆ. ಇನ್ನು ಈ ಕೋಡಿ ಬಿದ್ದ ನೀರು ವೇದಾವತಿ ನದಿ ಮೂಲಕ ಚಿತ್ರದುರ್ಗ ಜಿಲ್ಲೆಯ ವಾಣಿವಿಲಾಸ ಜಲಾಶಯಕ್ಕೆ ಹರಿದುಹೋಗುತ್ತದೆ.

ಕೋಡಿಬಿದ್ದ ಇತಿಹಾಸ ಪ್ರಸಿದ್ಧ ಕೆರೆ
ಕೆಲವು ದಿನಗಳ ಹಿಂದೆಯಷ್ಟೇ ಭಾರೀ ಮಳೆ ಹಿನ್ನೆಲೆ ರಾಜ್ಯದ ಹಲವೆಡೆ ನದಿ, ಹಳ್ಳ, ಕೆರೆಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದವು. ಅದೇ ರೀತಿ ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ಸುತ್ತಮುತ್ತ ಕಳೆದೊಂದು ವಾರದ ಹಿಂದೆ ಭಾರೀ ಮಳೆಯಾಗಿದ್ದು, ಈ ವೇಳೆ ಕಡೂರು ತಾಲೂಕಿನ ಇತಿಹಾಸ ಪ್ರಸಿದ್ದ ಮದಗದ ಕೆರೆ ಕೋಡಿ ಬಿದ್ದಿತ್ತು.
ಕಳೆದ ಒಂದೂವರೇ ತಿಂಗಳ ಹಿಂದೆ ಮದಗದ ಕೆರೆ ನೀರಿನಲ್ಲದೇ ಒಣಗಿ ಹೋಗಿತ್ತು. ಆದರೆ ಜುಲೈ ತಿಂಗಳ ಮಧ್ಯದಲ್ಲಿ ಗಿರಿ ಭಾಗದಲ್ಲಿ ಧಾರಾಕಾರವಾಗಿ ಸುರಿದ ಭಾರೀ ಮಳೆಯಿಂದಾಗಿ ಈ ಕೆರೆಗೆ ಅಪಾರ ಪ್ರಮಾಣದ ನೀರು ಹರಿದುಬಂದಿದೆ. ಕೆರೆ ಭರ್ತಿಯಾಗಿರುವ ಸುದ್ದಿಯಿಂದಾಗಿ ಸುತ್ತಮುತ್ತಲಿನ ಗ್ರಾಮಗಳ ಜನರು, ರೈತರು ಸಂತಸಗೊಂಡಿದ್ದರು.
ಈ ಕೆರೆ ಕೋಡಿಯ ನೀರು ಕಡೂರು ತಾಲೂಕಿನ ನೂರಾರು ಹಳ್ಳಿಗಳ ರೈತರಿಗೆ ಅನುಕೂಲ ಆಗಲಿದೆ. ಅಲ್ಲದೇ ಚಿತ್ರದುರ್ಗ ಜಿಲ್ಲೆಯ ವಾಣಿವಿಲಾಸ ಜಲಾಶಯಕ್ಕೂ ಈ ಕೆರೆಯ ನೀರು ನಾಲೆ ಮೂಲಕ ಸೇರುತ್ತದೆ.












Click it and Unblock the Notifications