ಕೊಟ್ಟಿಗೆಹಾರದಲ್ಲಿ ಮೂಷಿಕನನ್ನು ಕೊಲ್ಲಲು ಹೊರಟವ ಮಾಡಿದ್ದೇ ಬೇರೆ?!

ಚಿಕ್ಕಮಗಳೂರು, ಜನವರಿ 02: ಬೋನಿನಲ್ಲಿ ಇಲಿಯೊಂದು ನಾಲ್ಕು ಮರಿಗಳಿಗೆ ಜನ್ಮ ನೀಡಿದೆ. ಅರೆ, ಇದರಲ್ಲೇನಿದೆ ವಿಷಯ, ಅಚ್ಚರಿ ಅಂತೀರಾ? ವಿಷಯ ಇರುವುದೇ ಅಲ್ಲಿ. ಎಲ್ಲಾ ಇಲಿಗಳ ಹಾಗೆ ಇದು ತನ್ನ ಮರಿಗಳಿಗೆ ಜನ್ಮ ನೀಡಿತು, ಆದರೆ ಅದು ಅಲ್ಲೇ ಅಂದರೆ ಬೋನಿನಲ್ಲಿ ಜನ್ಮ ನೀಡಲು ಕಾರಣವೇನು ಎಂದು ಕೇಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಅದೇನೆಂದು ತಿಳಿಯಲು ಈ ಸುದ್ದಿಯನ್ನು ಒಮ್ಮೆ ಪೂರ್ತಿಯಾಗಿ ಓದಿ...

ಈ ಘಟನೆ ನಡೆದದ್ದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ‌ ಕೊಟ್ಟಿಗೆಹಾರದಲ್ಲಿ. ಇಲ್ಲಿನ ತನು ಎಂಬುವವರ ಮೊಬೈಲ್ ಶಾಪ್ ನಲ್ಲಿ ಇಲಿಯೊಂದು ಪ್ರತಿನಿತ್ಯ ಆಹಾರ ಅರಸಿಬಂದು ವೈರ್ ಗಳನ್ನು ಕಟ್ ಮಾಡಿ ಅಂಗಡಿ ಮಾಲೀಕನಿಗೆ ಕಿರಿಕಿರಿ ನೀಡುತ್ತಿತ್ತು.

Interesting incident happened in Kottigehara

ಇದರಿಂದ ಬೇಸತ್ತು ಈ ಇಲಿಯನ್ನು ಕೊಲ್ಲುವ ಸಲುವಾಗಿ ಅಂಗಡಿಯಲ್ಲಿ ಬೋನಿಟ್ಟು, ಬೋನಿನಲ್ಲಿ ಬೊಂಡಾವನ್ನು ಇಡಲಾಗಿತ್ತು. ಹೀಗೆ ಬೊಂಡಾವನ್ನು ಸವಿಯಲು ಬಂದ ಮೂಷಿಕ ಬೋನಿನಲ್ಲಿ ಬಂಧಿಯಾಗಿ ನಾಲ್ಕು ಮರಿಗಳಿಗೆ ಜನ್ಮ ನೀಡಿದೆ.

Interesting incident happened in Kottigehara

ಬೆಳಗ್ಗೆ ಅಂಗಡಿ ಮಾಲೀಕ ಇದನ್ನು ನೋಡಿದಾಗ ಮನ‌ ಕರಗಿ ಇಲಿಗೆ ಆಹಾರವನ್ನು ನೀಡಿದ್ದಾರೆ.‌ ನಂತರ ಅದನ್ನು ಊರಿನಿಂದ ಹೊರಗೆ ಹೋಗಿ ಬಿಟ್ಟು ಬಂದು ಮಾನವೀಯತೆ ಮೆರೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+