ಕಡೂರು ತಾಲ್ಲೂಕಿನ ಶಾಲೆಯಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ!
ಚಿಕ್ಕಮಗಳೂರು, ಜನವರಿ 26: 71 ನೇ ಗಣರಾಜ್ಯೋತ್ಸವದ ವೇಳೆ ರಾಷ್ಟ್ರಧ್ವಜವನ್ನು ಉಲ್ಟಾ ಹಾರಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಡಿ.ಕಾರೇಹಳ್ಳಿಯಲ್ಲಿ ನಡೆದಿದೆ.
ಡಿ.ಕಾರೇಹಳ್ಳಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಬೆಳಿಗ್ಗೆ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನಡೆಸುವ ಸಂದರ್ಭದಲ್ಲಿ ಬಾವುಟ ಉಲ್ಟಾ ಹಾರಿಸಿದ್ದಾರೆ. ಈ ವೇಳೆ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗ್ರಾಮಸ್ಥರು ಬಾವುಟ ಉಲ್ಟಾ ಹಾರಿರುವ ಬಗ್ಗೆ ಶಾಲಾ ಶಿಕ್ಷಕರ ಗಮನಕ್ಕೆ ತಂದಿದ್ದಾರೆ.
ಗ್ರಾಮಸ್ಥರು ಕಾರೇಹಳ್ಳಿ ಪ್ರಾಥಮಿಕ ಶಾಲೆಯ ಶಿಕ್ಷಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ, ಶಿಕ್ಷಕರು ಬಾವುಟವನ್ನು ಕೆಳಗಿಳಿಸಿ ಸರಿಪಡಿಸಿ ಮತ್ತೆ ಬಾವುಟ ಹಾರಿಸಿದ್ದಾರೆ.

ಬಾವುಟ ಉಲ್ಟಾ ಹಾರುತ್ತಿದ್ದಂತೆ ಸಂಭ್ರಮದಿಂದ ಗಣರಾಜ್ಯೋತ್ಸವಕ್ಕೆ ಆಗಮಿಸಿದ್ದ ಶಾಲಾ ಮಕ್ಕಳು ಹಾಗೂ ಸ್ಥಳೀಯರಲ್ಲಿ ನಿರಾಸೆ ಉಂಟಾಗಿದ್ದಲ್ಲದೇ, ಕೆಲಕಾಲ ಆತಂಕ ವಾತಾವರಣ ಉಂಟಾಗಿತ್ತು.












Click it and Unblock the Notifications