ಮುತ್ತೋಡಿಯಲ್ಲಿ ಕಾಣಿಸಿಕೊಂಡ ಅಪರೂಪದ ಕಾಡೆಮ್ಮೆ
ಚಿಕ್ಕಮಗಳೂರು, ಜುಲೈ 27: ತಾಲ್ಲೂಕಿನ ಮುತ್ತೋಡಿಯ ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬಂಗಾರದ ಬಣ್ಣದ ಕಾಡೆಮ್ಮೆಯೊಂದು ಇಂದು ಕಂಡು ಬಂದಿದೆ.
Recommended Video
EMISAT ಪ್ರಕಾರ India China Border ನಲ್ಲಿ ಇನ್ನು ಬೆಂಕಿ ಆರಿಲ್ಲ | Oneindia Kannada
ಅಪರೂಪವೆನಿಸಿರುವ ಈ ಬಂಗಾರದ ಬಣ್ಣದ ಕಾಡೆಮ್ಮೆ ನೋಡುಗರ ಗಮನ ಸೆಳೆದಿದೆ. ಕಾಡೆಮ್ಮೆಗಳು ಬಹುತೇಕ ಕಪ್ಪು ಬಣ್ಣದಿಂದ ಕೂಡಿರುತ್ತವೆ. ಆದರೆ ಕಾಟಿ ತಳಿಯ ಈ ಕಾಡೆಮ್ಮೆ ಹೊಂಬಣ್ಣದಿಂದ ಕೂಡಿದೆ. ಈ ಅಪರೂಪದ ಕಾಡೆಮ್ಮೆ ಬಣ್ಣ ಹಾಗೂ ಮೈಕಟ್ಟಿನಿಂದ ನೋಡುಗರಲ್ಲಿ ಅಚ್ಚರಿ ಮೂಡಿಸಿದೆ. 80-90ರ ದಶಕದಲ್ಲಿ ಈ ತಳಿಯ ಕಾಡೆಮ್ಮೆಗಳು ಕಾಫಿನಾಡ ಅರಣ್ಯದಲ್ಲಿ ಇದ್ದ ಬಗ್ಗೆ ಸಾಕ್ಷ್ಯಗಳಿವೆ. ಆದರೆ ನಂತರದಲ್ಲಿ ಈ ತಳಿ ನಾಶವಾಗಿತ್ತು ಎನ್ನಲಾಗಿದೆ.

ಹಿಂದಿನ ಆರ್ ಎಫ್ ಒ ಒಬ್ಬರು ಈ ಕಾಡೆಮ್ಮೆಯನ್ನು ಮುತೋಡಿ ವಲಯದ ಹಿಪ್ಲಾ ಭಾಗದಲ್ಲಿ ಕರು ಹಾಕಿದ್ದ ಸಂದರ್ಭ ನೋಡಿದ್ದಾಗಿ ಹೇಳಿದ್ದಾರೆ. ಇದೇ ರೀತಿಯ ಅನೇಕ ಬೇರೆ ಬೇರೆ ಪ್ರಾಣಿಗಳು ಮುತ್ತೋಡಿ ಭದ್ರಾ ಅಭಯಾರಣ್ಯದಲ್ಲಿವೆ ಎಂದು ಅರಣ್ಯ ಇಲಾಖೆಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.












Click it and Unblock the Notifications