'ಗೋ ಬ್ಯಾಕ್ ಶೋಭಕ್ಕ' ಅಭಿಯಾನ; ಸಿ. ಟಿ. ರವಿ ಮನವಿ ಏನು?

ಚಿಕ್ಕಮಗಳೂರು, ಮಾರ್ಚ್ 10: ಲೋಕಸಭೆ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಟಿಕೆಟ್ ಯಾರಿಗೆ?. ಹಾಲಿ ಸಂಸದೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಟಿಕೆಟ್ ಸಿಗುವುದಿಲ್ಲವೇ? ಈ ಚರ್ಚೆಗಳು ಜೋರಾಗಿವೆ.

ಈ ಬಾರಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ಟಿಕೆಟ್ ನೀಡಬಾರದು ಎಂದು 'ಗೋ ಬ್ಯಾಕ್ ಶೋಭಕ್ಕ' ಎಂಬ ಅಭಿಯಾನ ನಡೆಯುತ್ತಿದೆ. ಬಿಜೆಪಿ ಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ. ಅಭ್ಯರ್ಥಿ ಯಾರು? ಎಂಬುದು ಸಹ ನಿಗೂಢವಾಗಿಯೇ ಉಳಿದಿದೆ.

Go Back Campaign Against Shobha Karandlaje CT Ravi Statement

ಮಾಜಿ ಸಚಿವ ಸಿ. ಟಿ. ರವಿ 'ಗೋ ಬ್ಯಾಕ್ ಶೋಭಕ್ಕ' ಅಭಿಯಾನದ ಕುರಿತು ಮಾತನಾಡಿದ್ದಾರೆ. ಭಾನುವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಯಾರೇ ಅಭ್ಯರ್ಥಿಯಾದರೂ ನರೇಂದ್ರ ಮೋದಿ ನಮ್ಮ ಅಭ್ಯರ್ಥಿ ಎಂದು ಕೆಲಸ ಮಾಡಬೇಕು" ಎಂದು ಬಿಜೆಪಿ ಕಾರ್ಯಕರ್ತರಿಗೆ ಮನವಿ ಮಾಡಿದರು.

"ಕಾರ್ಯಕರ್ತರೇ ದೇಶ. ದೇಶದ ನಾಯಕತ್ವ ನೋಡಿ, ಯಾರೇ ಅಭ್ಯರ್ಥಿಯಾದರೂ ಮೋದಿ ನಮ್ಮ ಅಭ್ಯರ್ಥಿ ಎಂದು ನಾವು ಕೆಲಸ ಮಾಡಬೇಕು. ಕಾರ್ಯಕರ್ತರ ವೈಮನಸ್ಸು ದೇಶಕ್ಕೆ ಆಪತ್ತು ತರಬಾರದು. ನಾವೆಲ್ಲರೂ ಒಂದೇ ಧ್ವನಿಯಾಗಿ ಕೆಲಸ ಮಾಡಬೇಕು" ಎಂದು ಕರೆ ನೀಡಿದರು.

"ನನ್ನ ಬಳಿ ವೈಯಕ್ತಿಕವಾಗಿ ಮಾತನಾಡಿದವರಿಗೂ ಇದನ್ನೇ ಹೇಳಿದ್ದೇನೆ. ಮೋದಿ ಮತ್ತೊಮ್ಮೆ, ಎಲ್ಲರೂ ಒಂದೇ ಗುರಿಯಲ್ಲಿ ಕೆಲಸ ಮಾಡಬೇಕು. ನಿಮ್ಮ ಭಾವನೆ ತಿಳಿಸುವುದಕ್ಕೆ ಬೇರೆ ಮಾರ್ಗಗಳು ಇವೆ" ಎಂದು ಗೋ ಬ್ಯಾಕ್ ಶೋಭಕ್ಕ ಅಭಿಯಾನ ಕೈಗೊಂಡ ಕಾರ್ಯಕರ್ತರಿಗೆ ಸಿ. ಟಿ. ರವಿ ಮನವಿ ಮಾಡಿದ್ದಾರೆ.

'ಗೋ ಬ್ಯಾಕ್ ಶೋಭಕ್ಕ' ಎಂಬ ಅಭಿಯಾನ ಕಳೆದ ಚುನಾವಣೆಯ ಸಂದರ್ಭದಲ್ಲಿಯೂ ನಡೆದಿತ್ತು. ಆದರೆ ಶೋಭಾ ಕರಂದ್ಲಾಜೆಗೆ ಟಿಕೆಟ್ ಸಿಕ್ಕಿತ್ತು. ಅವರು ಚುನಾವಣೆ ಗೆದ್ದು ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವರು ಸಹ ಆದರು. ಈ ಬಾರಿ ಶೋಭಾ ಕರಂದ್ಲಾಜೆ ಬದಲು ಸಿ. ಟಿ. ರವಿ, ಪ್ರಮೋದ್ ಮಧ್ವರಾಜ್ ಅಥವ ಬೇರೆ ನಾಯಕರಿಗೆ ಟಿಕೆಟ್ ನೀಡಬೇಕು ಎಂಬ ಒತ್ತಾಯವಿದೆ.

ಸಚಿವೆ ಶೋಭಾ ಕರಂದ್ಲಾಜೆ 'ಗೋ ಬ್ಯಾಕ್ ಶೋಭಕ್ಕ' ಅಭಿಯಾನಕ್ಕೆ ತಲೆಕೆಡಿಸಿಕೊಳ್ಳದೇ ಚುನಾವಣಾ ತಯಾರಿಯಲ್ಲಿ ತೊಡಗಿದ್ದಾರೆ. ಕರ್ನಾಟಕದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ. ಶೋಭಾ ಕರಂದ್ಲಾಜೆ ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದಾರೆ.

ನನ್ನ ಗ್ರಹಚಾರ ಸರಿ ಇರಲಿಲ್ಲ ಸೋತೆ: ಸಿ. ಟಿ. ರವಿ 2023ರ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಸೋತ ಕುರಿತು ಸಹ ಮಾತನಾಡಿದರು. "ನನ್ನ ಗ್ರಹಚಾರ ಸರಿ ಇರಲಿಲ್ಲ, ಹಾಗಾಗಿ ನಾನು ವಿಧಾನಸಭೆ ಚುನಾವಣೆಯಲ್ಲಿ ಸೋತೆ, ಚುನಾವಣೆಯಲ್ಲಿ ಸೋಲಿಗೆ ನಂದೇ ತಪ್ಪು ಇರಬಹುದು ಎಂದು ಹೇಳಿದ್ದೆ" ಎಂದರು.

ಚಿಕ್ಕಮಗಳೂರಿನಲ್ಲಿ ಸಿ. ಟಿ. ರವಿ ಸೋಲಿಗೆ ಶೋಭಾ ಕರಂದ್ಲಾಜೆ ಕಾರಣ ಎಂಬ ಕಾರ್ಯಕರ್ತರ ಆಕ್ರೋಶದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, "ನನ್ನ ಅತಿ ವಿಶ್ವಾಸದಿಂದ ಸೋತಿದ್ದೇನೆ. ಅತಿ ವಿಶ್ವಾಸವೂ ಕೆಲವೊಮ್ಮೆ ಸೋಲಿಗೆ ಕಾರಣವಾಗುತ್ತೆ. ನಾನು ಮತ್ತೊಬ್ಬರ ಕಡೆ ಬೊಟ್ಟು ಮಾಡಲ್ಲ, ಅವರವರ ಕರ್ಮ ಅವರವರು ಅನುಭವಿಸಬೇಕು" ಎಂದು ಹೇಳಿದರು.

"ನಂದೆ ತಪ್ಪು ಇರಬಹುದು, ನನ್ನ ತಪ್ಪಿಂದಲೇ ಸೋತಿದ್ದೇನೆ ಎಂದು ಈಗಾಗಲೇ ಹೇಳಿಕೊಂಡಿದ್ದೇನೆ. ಯಾರಾದರೂ ಪಕ್ಷ ದ್ರೋಹ ಮಾಡಿದ್ದರೆ ಕರ್ಮ ಬೆಂಬಿಡದೆ ಕಾಡುತ್ತದೆ. ಮೆಡಿಕಲ್ ಕಾಲೇಜು, ಹೈವೆ, ಕೆರೆಗೆ ನೀರು ತುಂಬಿಸುವ ಯೋಜನೆ ಸೇರಿ ಸಾಕಷ್ಟು ಕೆಲಸ ಮಾಡಿದ್ದೇನೆ. ಜನ ನನ್ನ ಕೈ ಬಿಡಲ್ಲ ಅಂತ ಅತಿ ವಿಶ್ವಾಸವಿತ್ತು, ಅದರಿಂದ ಸೋತಿದ್ದೇನೆ" ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+