ಚಿಕ್ಕಮಗಳೂರು; ಮದುವೆಯಲ್ಲಿ ತಾಂಬೂಲದ ಬದಲು ಮಾಸ್ಕ್ ವಿತರಣೆ

ಚಿಕ್ಕಮಗಳೂರು, ಮೇ 27: ಮದುವೆ ಮನೆಯಲ್ಲಿ ಊಟದ ಬಳಿಕ ತಾಂಬೂಲ ಕೊಡುವ ಬದಲು ಮಾಸ್ಕ್ ಹಂಚಿಕೆ ಮಾಡಿ ಜನಸಾಮಾನ್ಯರಿಗೆ ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸುವ ಮೂಲಕ ವಿಭಿನ್ನವಾಗಿ ಮದುವೆ ನಡೆದಿದೆ.

ಚಿಕ್ಕಮಗಳೂರು ತಾಲೂಕಿನ ಮೂಡಿಗೆರೆ ರಸ್ತೆಯ ಕಬ್ಬಿಣ ಸೇತುವೆ ಸಮೀಪದ ಕೆಳಗೂರು ಗ್ರಾಮದಲ್ಲಿ ಯೊಗೀಶ್ ಆಚಾರ್ ಅವರ ಮಗಳು ಆಶಾ ಅವರ ಮದುವೆ ತೀರ್ಥಹಳ್ಳಿ ಮೂಲದ ರಮೇಶ್ ಎಂಬ ಯುವಕನ ಜೊತೆ ನಿಗದಿಯಾಗಿತ್ತು.

ನಿಗದಿಯಂತೆ ಇಂದು ಸರ್ಕಾರದ ಆದೇಶದ ಪ್ರಕಾರ ಸರಳವಾಗಿ ಮದುವೆ ನಡೆದಿದೆ. ಮದುವೆಯಲ್ಲಿ ಹುಡುಗ ಹಾಗೂ ಹುಡುಗಿಯ ತೀರಾ ಆಪ್ತರು ಸೇರಿದಂತೆ 40-50 ಜನರು ಭಾಗಿಯಾಗಿ ನೂತನ ವಧುವರರಿಗೆ ಶುಭ ಹಾರೈಸಿದ್ದಾರೆ. ಈ ವೇಳೆ, ಹುಡುಗ-ಹುಡುಗಿ, ಅರ್ಚಕರು, ಮದುವೆಯಲ್ಲಿ ಪಾಲ್ಗೊಂಡವರೆಲ್ಲಾ ಮಾಸ್ಕ್ ಹಾಕಿ ಸಾಮಾಜಿಕ ಅಂತರದ ಮೂಲಕ ಮದುವೆ ಕಾರ್ಯ ಮುಗಿಸಿದ್ದಾರೆ.

 Distribution Of Masks Instead Of Tambula In Marriage At Chikkamagaluru

ಊಟದ ಬಳಿಕ ಮದುವೆಗಳಲ್ಲಿ ಅರಿಶಿನ-ಕುಂಕುಮ, ಕಾಯಿ ಸೇರಿದ ತಾಂಬೂಲ ನೀಡುವುದು ಸಂಪ್ರದಾಯ. ಆದರೆ ಈ ಮದುವೆಯಲ್ಲಿ ತಾಂಬೂಲದ ಜೊತೆ ಮದುವೆಗೆ ಬಂದ ಎಲ್ಲರಿಗೂ ಮಾಸ್ಕ್ ಹಂಚಲಾಗಿದೆ. ಈ ಕಾರ್ಯಕ್ಕೆ ಮದುವೆಗೆ ಆಗಮಿಸಿದ್ದ ಬಂಧುಮಿತ್ರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+