ಚಿಕ್ಕಮಗಳೂರು; ಜಿಲ್ಲಾಧಿಕಾರಿ ಬಗಾದಿಯಿಂದ ಕಪಾಳಮೋಕ್ಷ; ಸ್ಪಷ್ಟನೆ ಕೊಟ್ಟ ಡಿಸಿ
ಚಿಕ್ಕಮಗಳೂರು, ಜನವರಿ 23: ಕೆಲವೇ ತಿಂಗಳ ಹಿಂದೆ ಚಿಕ್ಕಮಗಳೂರನ್ನು ಕಾಡಿದ್ದ ಪ್ರವಾಹ ಇಡೀ ಜಿಲ್ಲೆಯನ್ನೇ ತತ್ತರಿಸುವಂತೆ ಮಾಡಿತ್ತು. ಜನರು ನೆಲೆಯನ್ನು ಕಳೆದುಕೊಂಡು ಕಂಗಾಲಾಗಿದ್ದರು.
ಆದರೆ ಪ್ರವಾಹದ ಈ ಸಮಯದಲ್ಲಿ ವರ್ತಕರಿಂದ ಜಿಲ್ಲಾಡಳಿತ ಸಾಮಗ್ರಿಗಳನ್ನು ಖರೀದಿಸಿ ಅದರ ಹಣವನ್ನು ಇನ್ನೂ ಪಾವತಿಸಿಲ್ಲ. ಇಂದು ಹಿರೇಬೈಲಿಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಭೇಟಿ ನೀಡಿದ್ದು, ವರ್ತಕರು ಈ ಬಗ್ಗೆ ದೂರು ಒಪ್ಪಿಸಿದ್ದಾರೆ.
ವರ್ತಕರು ದೂರು ನೀಡುತ್ತಿದ್ದಂತೆ ಕೋಪಗೊಂಡ ಜಿಲ್ಲಾಧಿಕಾರಿ ಗೌತಮ್, ಆರ್ ಐಗೆ ಕಪಾಳಮೋಕ್ಷ ಮಾಡಿದ್ದಾರೆ. ಸಾರ್ವಜನಿಕರ ಎದುರಲ್ಲೇ ಆರ್.ಐ ಅಜ್ಜೇಗೌಡ ಅವರಿಗೆ ಸಾರ್ವಜನಿಕರ ಎದುರಲ್ಲೆ ಕೆನ್ನೆಗೆ ಹೊಡೆದು ಕತ್ತಿನ ಪಟ್ಟಿ ಹಿಡಿದಿದ್ದರು.

8 ತಿಂಗಳಾದ್ರೂ ವರ್ತಕರಿಗೆ ಹಣ ನೀಡಿಲ್ಲ ಎಂಬ ಆರೋಪ ಕೇಳುತ್ತಿದ್ದಂತೆ, ಸ್ಥಳದಲ್ಲಿಯೇ ಸಸ್ಪೆಂಡ್ ಮಾಡ್ತೀನಿ ಎಂದು ಆರ್ ಐ ವಿರುದ್ಧ ಹರಿಹಾಯ್ದಿದ್ದಾರೆ.
ಜಿಲ್ಲಾಧಿಕಾರಿ ಸ್ಪಷ್ಟನೆ: ಆದರೆ ತಾನು ಕಪಾಳ ಮೋಕ್ಷ ಮಾಡಿಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ ಜಿಲ್ಲಾಧಿಕಾರಿ. "ನಾನು ಯಾರಿಗೂ ಹೊಡೆದಿಲ್ಲ. ಮಾಧ್ಯಮಗಳು ಆಧಾರರಹಿತ ಸುದ್ದಿ ಪ್ರಸಾರ ಮಾಡಿವೆ" ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿ ಸ್ಪಷ್ಟೀಕರಣ ನೀಡಿದ್ದಾರೆ.












Click it and Unblock the Notifications