ನನ್ನತ್ರ ಬ್ಲಾಕ್ ಮೇಲ್ ನಡೆಯಲ್ಲ ಎಂದು ಗರಂ ಆದ ಸಿ.ಟಿ.ರವಿ

Recommended Video

      ನನ್ನತ್ರ ಬ್ಲಾಕ್ ಮೇಲ್ ನಡೆಯೊಲ್ಲ ಎಂದು ಅವಾಜ್ ಹಾಕಿದ ಸಿ ಟಿ ರವಿ. | C T Ravi | Oneindia Kannada

      ಚಿಕ್ಕಮಗಳೂರು, ಸೆಪ್ಟೆಂಬರ್ 20: ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆದ ವಿಚಾರಕ್ಕೆ ಮಹಿಳೆಯೊಬ್ಬರು ಸಿ.ಟಿ. ರವಿ ಅವರ ಬಳಿ ಅಳಲು ತೋಡಿಕೊಂಡು, ವಿಷ ಕುಡಿಯುವುದಾಗಿ ಬೆದರಿಕೆ ಹಾಕಿದರು.

      ಇದಕ್ಕೆ ಪ್ರತಿಕ್ರಿಯಿಸಿರುವ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ, "ಸಮಸ್ಯೆ ಇದ್ದರೆ ಹೇಳಿ, ಆದರೆ ಬ್ಲಾಕ್ ಮೇಲೆಲ್ಲಾ ನನ್ನ ಹತ್ರ ನಡೆಯಲ್ಲ" ಎಂದು ಉತ್ತರಿಸಿದ್ದಾರೆ.

      ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ 17 ಮಹಿಳೆಯರನ್ನು ಕೆಲಸದಿಂದ ತೆಗೆದುಹಾಕಿದ್ದು, ಈ ವಿಚಾರವಾಗಿ, ಅಲ್ಲಿಗೆ ಭೇಟಿ ನೀಡಿದ್ದ ಸಿ.ಟಿ. ರವಿ ಅವರ ಬಳಿ ಮಹಿಳೆಯೊಬ್ಬರು ಅಳಲು ತೋಡಿಕೊಂಡಿದ್ದಾರೆ. ಹಾಗೆಯೇ, ಈ ಕೆಲಸವಾಗದಿದ್ದರೆ ವಿಷ ಕುಡಿದು ಸಾಯುತ್ತೇನೆ ಎಂದೂ ಬೆದರಿಕೆ ಹಾಕಿದ್ದಾರೆ.

      CT Ravi Warned Not To Blackmail In Chikkamagaluru

      ಇದಕ್ಕೆ ಕೋಪಗೊಂಡ ಸಚಿವ ಸಿಟಿ ರವಿ, "ಈ ರೀತಿಯ ಬ್ಲಾಕ್ ಮೇಲೆಲ್ಲಾ ನನ್ನ ಬಳಿ ನಡೆಯಲ್ಲ. ಅದನ್ನೆಲ್ಲ ನನ್ನತ್ರ ಇಟ್ಕೊಬೇಡಿ. ಹೇಳುವುದನ್ನು ಸರಿಯಾಗಿ ಹೇಳಿ" ಎಂದು ಉತ್ತರಿಸಿದ್ದಾರೆ. ನಂತರ ನಾನು ನಿಮ್ಮಂದಿಲೇ ಬೆಳೆದು ಬಂದವನು ಎಂದೂ ಹೇಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+