ಕೋಳಿ, ಕುರಿ, ಬಿಯರ್, ಈರುಳ್ಳಿ ಬಹುಮಾನ; ಕ್ರಿಕೆಟ್ ಪಂದ್ಯ ರದ್ದು!

ಚಿಕ್ಕಮಗಳೂರು, ಜನವರಿ 28; ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಬಳಿಯ ಕಡಬಗೆರೆಯಲ್ಲಿ ಆಯೋಜಿಸಿದ್ದ ಕ್ರಿಕೆಟ್ ಟೂರ್ನಿಯನ್ನು ಆಯೋಜಕರು ರದ್ದು ಮಾಡಿದ್ದಾರೆ. ವಿಶೇಷ ಕಾರಣಕ್ಕಾಗಿ ಈ ಟೂರ್ನಿ ಗಮನಸೆಳೆದಿತ್ತು.

'ಖಾಂಡ್ಯ ಕ್ರಿಕೆಟ್ ಹಬ್ಬ' ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ 2021 ರದ್ದಾಗಿದೆ. ಫೆಬ್ರವರಿ 9ರ ಮಂಗಳವಾರ ಕ್ರಿಕೆಟ್ ಟೂರ್ನಿಯನ್ನು ಆಯೋಜನೆ ಮಾಡಲಾಗಿತ್ತು. ಕಡಬಗೆರೆಯ ಗಾಂಧಿ ಮೈದಾನದಲ್ಲಿ ಪಂದ್ಯಾವಳಿ ನಡೆಸುವುದಾಗಿ ಘೋಷಣೆ ಮಾಡಲಾಗಿತ್ತು.

ಖ್ಯಾಂಡ್ಯ ಪ್ರೀಮಿಯರ್ ಲೀಗ್‌ನ ಪ್ರತಿ ಪಂದ್ಯ 3 ಓವರ್‌ಗಳಿಗೆ ಸೀಮಿತವಾಗಿತ್ತು. ಸ್ಥಳೀಯ ತಂಡಗಳಿಗೆ ಮಾತ್ರ ಭಾಗವಹಿಸಲು ಅವಕಾಶ ಎಂದು ಘೋಷಿಸಲಾಗಿದ್ದು, 1000 ರೂ. ಪವೇಶ ಶುಲ್ಕವನ್ನು ನಿಗದಿ ಮಾಡಲಾಗಿತ್ತು.

 Cricket Match Cancelled In Kadabagere Balehonnur

ರಾಜ್ಯದ ಬೇರೆ-ಬೇರೆ ಕಡೆಯಿಂದ ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಜನರು ಕರೆ ಮಾಡುತ್ತಿದ್ದರು. ಪಂದ್ಯದಲ್ಲಿ ಭಾಗವಹಿಸಲು ತಂಡಗಳು ಮುಗಿಬಿದ್ದ ಕಾರಣ ಪಂದ್ಯಾವಳಿಯನ್ನು ರದ್ದುಗೊಳಿಸಲಾಗಿದೆ.

ಗಮನ ಸೆಳೆದಿದ್ದು ಬಹುಮಾನ; ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗೆದ್ದವರಿಗೆ ನೀಡುವ ಬಹುಮಾನಗಳು ಗಮನ ಸೆಳೆದಿತ್ತು. ಜನರು ಸಹ ಕ್ರಿಕೆಟ್ ಪಂದ್ಯಾವಳಿ ಕರಪತ್ರಗಳನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದರು.

ಮೊದಲ ಬಹುಮಾನವಾಗಿ 30 ಕೆಜಿ ಇಡಿ ಕುರಿ, 1 ಬಾಟಲ್ ಎಂಸಿ ವಿಸ್ಕಿ, 1 ಕೇಸ್ ಬಿಯರ್ ಇತ್ತು. 2ನೇ ಬಹುಮಾನವಾಗಿ 6 ನಾಟಿ ಕೋಳಿ, 1 ಬಾಟೆಲ್ ಬಿ.ಪಿ. ಮತ್ತು 1 ಕೇಸ್ ಬಿಯರ್ ಇತ್ತು. ಸಮಾಧಾನಕರ ಬಹುಮಾನವಾಗಿ ಎಲ್ಲಾ ತಂಡಗಳಿಗೆ 7 ಅಪ್ ಉಚಿತವಾಗಿತ್ತು.

ಮ್ಯಾನ್ ಆಫ್‌ ದಿ ಸೀರಿಸ್‌ಗೆ 5 ಕೆಜಿ ಈರುಳ್ಳಿ, ಬೆಸ್ಟ್ ಬ್ಯಾಟ್ಸ್‌ಮನ್‌ಗೆ 1 ಕೆಜಿ ಖಾರದ ಪುಡಿ, ಬೆಸ್ಟ್ ಬೌಲರ್‌ಗೆ 2 ಲೀಟರ್ ಸನ್ ಫ್ಲವರ್ ಆಯಿಲ್ ಬಹುಮಾನ ಘೋಷಣೆಯಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+