ಎರಡು ದಶಕಗಳ ಬಳಿಕ ಸಿಟಿ ರವಿ ತವರು ಜಿಲ್ಲೆ ಚಿಕ್ಕಮಗಳೂರಿನಲ್ಲಿ ಮರುಕಳಿಸಿದ ಕಾಂಗ್ರೆಸ್ ವೈಭವ- ಕೇಸರಿಗೆ 'ಕೈ' ಕೊಟ್ಟ ಜನ
ಚಿಕ್ಕಮಗಳೂರು, ಮೇ 15: ಎರಡು ದಶಕಗಳ ನಂತರ ಚಿಕ್ಕಮಗಳೂರಿನಲ್ಲಿ ಕಳೆದುಕೊಂಡಿದ್ದ ವೈಭವವನ್ನು ಕಾಂಗ್ರೆಸ್ ಮರಳಿ ಪಡೆದಿದೆ. ಸುಮಾರು ಎರಡು ದಶಕಗಳ ನಂತರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕ್ಲೀನ್ ಸ್ವೀಪ್ ಮಾಡಿ ಹಳೆಯ ವೈಭವವನ್ನು ಮೆರೆದಿದೆ. ಇದು ಪರಾಭವಗೊಂಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರ ತವರು ಜಿಲ್ಲೆಯಾಗಿದೆ.
2018 ರ ವಿಧಾನಸಭಾ ಚುನಾವಣೆಯ ಬಳಿಕ ಚಿಕ್ಕಮಗಳೂರಿನಿಂದ ಸಿ ಟಿ ರವಿ, ಮೂಡಿಗೆರೆಯಿಂದ ಎಂ ಪಿ ಕುಮಾರಸ್ವಾಮಿ, ಕಡೂರಿನಿಂದ ಬೆಳ್ಳಿ ಪ್ರಕಾಶ್ ಮತ್ತು ತರೀಕೆರೆಯಿಂದ ಡಿ ಎಸ್ ಸುರೇಶ್ ಅವರು ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದರು. ಈ ಜಿಲ್ಲೆಯಲ್ಲಿ ಐದು ತಾಲ್ಲೂಕುಗಳಿವೆ.

1989 ರಿಂದ 1999 ರ ವರೆಗೆ ಸಿ ಆರ್ ಸಗೀರ್ ಅಹ್ಮದ್ ಚಿಕ್ಕಮಗಳೂರಿನಿಂದ ಸತತವಾಗಿ ಗೆದ್ದು ಎರಡು ಬಾರಿ ಸಚಿವರಾಗಿದ್ದರು. 1999 ರಲ್ಲಿ, ಸಿ ಆರ್ ಸಗೀರ್ ಅಹ್ಮದ್, ಡಿ ಬಿ ಚಂದ್ರೇಗೌಡ ಮತ್ತು ಮೋಟಮ್ಮ ಅವರು ಎಸ್ ಎಂ ಕೃಷ್ಣ ಸಚಿವ ಸಂಪುಟದಲ್ಲಿ ಸಚಿವರಾಗಿದ್ದರು. ಇವರೆಲ್ಲರೂ ಕಾಂಗ್ರೆಸ್ ಶಾಸಕರಾಗಿದ್ದರು.
ಮಾಜಿ ಪ್ರಧಾನಿ ಇಂದಿರಾಗಾಂಧಿ 1979ರಲ್ಲಿ ಚಿಕ್ಕಮಗಳೂರಿನಿಂದ ಸ್ಪರ್ಧಿಸಿ ಗೆದ್ದ ನಂತರ ಜಿಲ್ಲೆ ಕಾಂಗ್ರೆಸ್‌ನ ಪ್ರಬಲ ಭದ್ರಕೋಟೆಯಾಗಿ ಮಾರ್ಪಟ್ಟು ಇಂದಿರಾಗಾಂಧಿ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿತು.
2004ರಿಂದ ಕಾಂಗ್ರೆಸ್, ಜೆಡಿಎಸ್ ಹಾಗೂ ಸ್ವತಂತ್ರ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದ್ದ ಜಿಲ್ಲೆಯಲ್ಲಿ ಬಿಜೆಪಿ ಹಿಡಿತ ಸಾಧಿಸಿತು. ದತ್ತಪೀಠ ವಿಮೋಚನಾ ಆಂದೋಲನ, ದತ್ತಮಾಲಾ ಅಭಿಯಾನ, ಶೋಭಾ ಯಾತ್ರೆ, ಧರ್ಮ ಸಂಸದ್ ಚಿಕ್ಕಮಗಳೂರು, ಮೂಡಿಗೆರೆ, ಕಡೂರಿನಲ್ಲಿ ಬಿಜೆಪಿ ಮತಗಳನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಯಿತು.

ಆದರೆ, 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೀರಸವಾದ ಪ್ರದರ್ಶನ ನೀಡಿದೆ. ಬಿಜೆಪಿ ಅಭ್ಯರ್ಥಿಗಳಾದ ಸಿಟಿ ರವಿ ಮತ್ತು ಬೆಳ್ಳಿ ಪ್ರಕಾಶ್ ಗೆಲುವಿನ ವಿಶ್ವಾಸದಲ್ಲಿದ್ದರು. ಒಂದು ಲಕ್ಷಕ್ಕೂ ಅಧಿಕ ಮತಗಳನ್ನು ಗಳಿಸಿ 35 ಸಾವಿರ ಮತಗಳಿಂದ ಗೆಲ್ಲುತ್ತೇನೆ ಎಂದು ರವಿ ಶುಕ್ರವಾರ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಕಾಂಗ್ರೆಸ್ ಅಲೆ ಬೀಸಿದ್ದರಿಂದ ಜಿಲ್ಲೆಯಲ್ಲಿ ಐವರು ಬಿಜೆಪಿ ಅಭ್ಯರ್ಥಿಗಳು ಸೋಲು ಅನುಭವಿಸಿದ್ದಾರೆ.
ಬಿಜೆಪಿಯ ಹಾಲಿ ಶಾಸಕರಾದ ಸಿ ಟಿ ರವಿ, ಬೆಳ್ಳಿ ಪ್ರಕಾಶ್ ಮತ್ತು ಡಿ ಎಸ್ ಸುರೇಶ್ ಅವರು ಕ್ರಮವಾಗಿ ಎಚ್ ಡಿ ತಮ್ಮಯ್ಯ, ಕೆ ಎಸ್ ಆನಂದ್ ಮತ್ತು ಮಾಜಿ ಶಾಸಕ ಜಿ ಎಚ್ ಶ್ರೀನಿವಾಸ್ ವಿರುದ್ಧ ಸೋಲು ಕಂಡಿದ್ದಾರೆ. ಬಿಜೆಪಿ ಶಾಸಕ ಎಂಪಿ ಕುಮಾರಸ್ವಾಮಿ ಅವರಿಗೆ ಟಿಕೆಟ್ ನಿರಾಕರಿಸಿದ್ದರಿಂದ ಅವರು ಪಕ್ಷ ತೊರೆದು ಜೆಡಿಎಸ್ ಸೇರಿದ್ದಾರೆ. ಅವರು ಜೆಡಿಎಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದರೂ ಮೂರನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಜೆಪಿ ಅಭ್ಯರ್ಥಿ ದೀಪಕ್ ದೊಡ್ಡಯ್ಯ ಅವರು ಕಾಂಗ್ರೆಸ್ ಅಭ್ಯರ್ಥಿ ಮಾಜಿ ಶಾಸಕಿ ಮೋಟಮ್ಮ ಅವರ ಪುತ್ರಿ ನಯನಾ ವಿರುದ್ಧ ಸೋತಿದ್ದಾರೆ. ತರೀಕೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿಎಸ್ ಸುರೇಶ್ ಅವರನ್ನು ಮಾಜಿ ಶಾಸಕ ಜಿ ಎಚ್ ಶ್ರೀನಿವಾಸ್ ಸೋಲಿಸಿದ್ದಾರೆ. ಆದರೆ ಕಾಂಗ್ರೆಸ್ ಬಂಡಾಯ ಎಚ್ ಎಂ ಗೋಪಾಲಕೃಷ್ಣ ಪಕ್ಷದ ಮತಗಳನ್ನು ವಿಭಜಿಸಿದ್ದಾರೆ.

ಕಳೆದ ಬಾರಿ ಸೋತಿದ್ದ ಕಾಂಗ್ರೆಸ್ ಅಭ್ಯರ್ಥಿ ಕೆ ಎಸ್ ಆನಂದ್ ಅವರು ಬೆಳ್ಳಿ ಪ್ರಕಾಶ್ ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ. ಶೃಂಗೇರಿಯಲ್ಲಿ ನೆಕ್ ಟು ನೆಕ್ ಫೈಟ್ ನಡೆದಿದೆ. ಅಂತಿಮವಾಗಿ ಕಾಂಗ್ರೆಸ್ ಅಭ್ಯರ್ಥಿ ಟಿ ಡಿ ರಾಜೇಗೌಡರು ಜಯಭೇರಿ ಭಾರಿಸಿದ್ದಾರೆ. ರಾಜೇಗೌಡ ಅವರು ಡಿ ಎನ್ ಜೀವರಾಜ್ ಅವರನ್ನು 153 ಮತಗಳಿಂದ ಸೋಲಿಸಿದ್ದಾರೆ.
ಬಿಜೆಪಿಯ ಕೊಡಗು ಕೋಟೆಯನ್ನು ಛಿದ್ರಗೊಳಿಸಿದ ಕಾಂಗ್ರೆಸ್
ಕೊಡಗು ಜಿಲ್ಲೆಯಲ್ಲಿ ಬಿಜೆಪಿಯ ಎರಡು ದಶಕಗಳ ಹಿಡಿತವನ್ನು ಕಾಂಗ್ರೆಸ್ ಛಿದ್ರಗೊಳಿಸಿದೆ. ಬಿಜೆಪಿಯ ಭದ್ರ ಕೋಟೆಯಾಗಿದ್ದ ಮಡಿಕೇರಿ ಮತ್ತು ವಿರಾಜಪೇಟೆ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು 4,000ಕ್ಕೂ ಹೆಚ್ಚು ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ. ಮಡಿಕೇರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಮಂತರ್ ಗೌಡ ಗೆಲುವು ಸಾಧಿಸಿದ್ದಾರೆ. ಸಾಧಿಸಿದ್ದಾರೆ. ವಿರರಾಜಪೇಟೆಯಲ್ಲಿ ಕಾಂಗ್ರೆಸ್‌ನ ಪೊಣ್ಣನ್ನ ಅವರು ಬಿಜೆಪಿ ವಿರುದ್ದ ಗೆಲುವು ಸಾಧಿಸಿದ್ದಾರೆ.












Click it and Unblock the Notifications