Congress Candidates 4th List: ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಘೋಷಣೆ

ಚಿಕ್ಕಮಗಳೂರು, ಏಪ್ರಿಲ್‌, 18: ರಾಜ್ಯ ವಿಧಾನಸಭೆಗೆ ಮೇ 10ರಂದು ಚುನಾಚಣೆ ನಡೆಯಲಿದ್ದು, ಮೇ 13ಕ್ಕೆ ಫಲಿತಾಂಶ ಹೊರಬಿಳಲಿದ್ದು, ಈ ಹಿನ್ನೆಲೆ ಮಂಗಳವಾರ (ಏಪ್ರಿಲ್‌ 18) ಕಾಂಗ್ರೆಸ್ ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹಾಗೆಯೇ ಹೈ ವೋಲ್ಟೇಜ್‌ ಕ್ಷೇತ್ರವಾದ ಚಿಕ್ಕಮಗಳೂರು ಕ್ಷೇತ್ರದಿಂದ ಎಚ್‌.ಡಿ. ತಮ್ಮಯ್ಯ ಅವರನ್ನು ಕಣಕ್ಕಿಳಿಸಲಾಗಿದೆ.

Congress Candidates 4th List: Candidate Announcement for Chikkamagaluru Constituency

ನಾಲ್ಕನೇ ಪಟ್ಟಿಯಲ್ಲಿ ಕಾಂಗ್ರೆಸ್‌ ಏಳು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಇದರಲ್ಲಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಹಾಲಿ ಶಾಸಕ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ಸಿ.ಟಿ.ರವಿ ವಿರುದ್ಧ ಕಾಂಗ್ರೆಸ್ ಸೇರಿದ್ದ ಎಚ್‌.ಡಿ.ತಮ್ಮಯ್ಯ ಅವರನ್ನು ಅಖಾಡಕ್ಕೆ ಇಳಿಸಿದೆ.

ಶನಿವಾರ ಮೂರನೇ ಪಟ್ಟಿ ಬಿಡುಗಡೆ ಮಾಡಿದ್ದ ಕಾಂಗ್ರೆಸ್ 43 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿತ್ತು. ಸಿದ್ದರಾಮಯ್ಯ ಅವರು ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿರುವ ಕೋಲಾರ ಕ್ಷೇತ್ರದ ಟಿಕೆಟ್​ ಅನ್ನು ಕಾಂಗ್ರೆಸ್ ಬಾಕಿ ಇರಿಸಿಕೊಂಡಿದೆ. ಈ ಮಧ್ಯೆ, ಚಿಕ್ಕಮಗಳೂರಿನಲ್ಲಿ ಮೂಲ ಕಾಂಗ್ರೆಸ್ಸಿಗರ ವಿರೋಧದ ನಡುವೆಯೂ ಎಚ್.​​ಡಿ. ತಮ್ಮಯ್ಯ ಅವರಿಗೆ ಟಿಕೆಟ್ ನೀಡಲಾಗಿದೆ. ಇದರಿಂದಾಗಿ ಕಾಂಗ್ರೆಸ್​ಗೆ ಚಿಕ್ಕಮಗಳೂರಿನಲ್ಲಿ ಬಂಡಾಯದ ಬಿಸಿ ತಟ್ಟುವ ಸಾಧ್ಯತೆಯೂ ಇದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಲಿಂಗಾಯತ ಸಮುದಾಯದ ಮತಗಳನ್ನು ಸೆಳೆಯಲು ಕಾಂಗ್ರೆಸ್ ತಮ್ಮಯ್ಯಗೆ ಗಾಳ ಹಾಕಿದ್ದು, ಇದರಿಂದ ಕಾಫಿನಾಡಿನ ಕಾಂಗ್ರೆಸ್‌ನಲ್ಲಿ ಬಂಡಾಯ ಹೇಳುವ ಸಾಧ್ಯತೆಯೂ ಇದೆ. ಎರಡು ತಿಂಗಳ ಹಿಂದಷ್ಟೇ ಕಾಂಗ್ರೆಸ್‌ ಪಕ್ಷ ಸೇರಿದ್ದ ಎಚ್.ಡಿ. ತಮ್ಮಯ್ಯ ಇದೀಗ ಟಿಕೆಟ್‌ ಗಿಟ್ಟಿಸಿಕೊಂಡಿದ್ದಾರೆ. ಈ ಮೊದಲು ಎಚ್.ಡಿ. ತಮ್ಮಯ್ಯಗೆ ಟಿಕೆಟ್ ನೀಡಲು ಮೂಲ ಕಾಂಗ್ರೆಸ್ಸಿಗರು ಭಾರಿ ವಿರೋಧ ವ್ಯಕ್ತಪಡಿಸಿದ್ದರು.

ಕಾಂಗ್ರೆಸ್‌ ಟಿಕೆಟ್‌ಗೆ ಚಿಕ್ಕಮಗಳೂರು ಕ್ಷೇತ್ರದಿಂದ ಅರ್ಜಿ ಸಲ್ಲಿಸಿದ್ದ ಹಾಕಿರುವ ಆರು ಜನರ ಪೈಕಿ ಎಚ್‌.ಡಿ.ತಮ್ಮಯ್ಯಗೆ ಮಣೆ ಹಾಕಿದೆ. ಈ ಮೂಲಕ ಮೂಲ ಕಾಂಗ್ರೆಸ್ಸಿಗರನ್ನು ವಿರೋಧಿಸಿ ತಮ್ಮಯ್ಯಗೆ ಟಿಕೆಟ್‌ ಘೋಷಣೆ ಮಾಡಿದೆ.

ಕ್ಷೇತ್ರ ಮತ್ತು ಅಭ್ಯರ್ಥಿಗಳ ವಿವರ

1. ಹರಿಹರ ಕ್ಷೇತ್ರ- ನಂದಿಗಾವಿ ಶ್ರೀನಿವಾಸ್

2. ಶ್ರವಣಬೆಳಗೊಳ - ಎಂ. ಎಸ್. ಗೋಪಾಲಸ್ವಾಮಿ

3. ಹುಬ್ಬಳ್ಳಿ-ಧಾರವಾಡ ಪಶ್ಚಿಮ- ದೀಪಕ್ ಚಿಂಚೋರೆ

4. ಚಿಕ್ಕಮಗಳೂರು- ಎಚ್‌. ಡಿ. ತಮ್ಮಯ್ಯ

5. ಲಿಂಗಸಗೂರು- ದುರ್ಗಪ್ಪ ಎಸ್. ಹೂಲಗೇರಿ

6. ಶಿಗ್ಗಾಂವಿ -ಮೊಹಮ್ಮದ್ ಯೂಸೂಫ್

ನಾಮಪತ್ರ ಸಲ್ಲಿಸಿದ ವೈ.ಎಸ್‌.ವಿ ದತ್ತಾ

ದೇವೇಗೌಡರ ಮಾನಸ ಪುತ್ರ ಎಂದೇ ಕರೆಸಿಕೊಳ್ಳುವ ವೈಎಸ್‌ವಿ ದತ್ತಾ ಇಂದು(ಏಪ್ರಿಲ್‌ 18) ರಂದು ಕಡೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಜೆಡಿಎಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ, ಮಾಜಿ ಸಚಿವ ಎಚ್‌ ಡಿ.ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಭಾಗಿಯಾಗಿದ್ದಾರೆ.

ವೈಎಸ್‌ವಿ ದತ್ತಾ ನಾಮಪತ್ರ ಸಲ್ಲಿಕೆಗಾಗಿ ಸ್ವತಃ ದೇವೇಗೌಡರೇ ಕಡೂರಿಗೆ ಆಗಮಿಸಿದ್ದರು. ಬೃಹತ್‌ ಮೆರವಣಿಗೆ ನಡೆಸಿ ಚುನಾವಣಾ ಕಚೇರಿಗೆ ಬಂದ ವೈಎಸ್‌ವಿ ದತ್ತಾ ಅಧಿಕಾರಿ ಚುನಾವಣಾ ಕವಿರಾಜ್‌ಗೆ ನಾಮಪತ್ರ ಸಲ್ಲಿದ್ದಾರೆ. ಈ ವೇಳೆ ನಾಮಪತ್ರ ಸಲ್ಲಿಕೆಗೆ ದೇವೇಗೌಡರು ಹಣ ನೀಡಿದ್ದಾರೆ.

ನಾಮಪತ್ರ ಸಲ್ಲಿಕೆಗೂ ಮುನ್ನ ಕಡೂರಿನಲ್ಲಿ ಜೆಡಿಎಸ್‌ ಕಾರ್ಯಕರ್ತರ ಬೃಹತ್‌ ಮೆರವಣಿಗೆ ನಡೆದಿದ್ದು, ಸಾವಿರಾರು ಜೆಡಿಎಸ್ ಕಾರ್ಯಕರ್ತರು ಭಾಗಿಯಾಗಿದ್ದಾರೆ. ಎತ್ತಿನ ಗಾಡಿಯಲ್ಲಿ ವೈಎಸ್‌ವಿ ದತ್ತಾ ಅವರ ಮೆರವಣಿಗೆ ನಡೆದಿದ್ದು, ಎಚ್‌.ಡಿ ದೇವೇಗೌಡರು ಹಾಗೂ ಪ್ರಜ್ವಲ್ ರೇವಣ್ಣ ಭಾಗಿಯಾಗಿದ್ದರು. ಸುಡು ಬಿಸಿಲೆನ್ನದೇ ಹತ್ತು ಸಾವಿರ ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗಿಯಾಗಿದ್ದು, ದಾರಿಯೂದಕ್ಕೂ ಪುಪ್ಪ ವರ್ಷ ಸುರಿಸಿದ್ದಾರೆ.

ಕಳೆದ ನಾಲ್ಕೈದು ದಶಕಗಳಿಂದ ದೇವೇಗೌಡರಿಗೆ ಮಾನಸ ಪುತ್ರನಂತಿದ್ದ ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಮಾಜಿ ಶಾಸಕ ಶಾಸಕ ವೈ.ಎಸ್.ವಿ.ದತ್ತಾ ಜೆಡಿಎಸ್ ಸಖ್ಯ ಬಿಟ್ಟು ಕಾಂಗ್ರೆಸ್ ಸೇರಿದ್ದರು. ಕಡೂರು ಕಾಂಗ್ರೆಸ್ ಹಾಗೂ ದತ್ತಾ ಅವರ ಅಭಿಮಾನಿಗಳಿಗೆ ಆನೆ ಬಲ ಬಂದಿತ್ತು. ಆದರೆ ಕಾಂಗ್ರೆಸ್‌ ವರಿಷ್ಠರು ವೈ.ಎಸ್.ವಿ.ದತ್ತಾ ಅವರಿಗೆ ಟಿಕೆಟ್‌ ನೀಡದೇ ಕೆ.ಎಸ್.ಆನಂದ್‍ಗೆ ಮಣಿ ಹಾಕಿದ್ದರು. ಇದರಿಂದ ತೀವ್ರ ಬೇಸರಗೊಂಡ ವೈ.ಎಸ್.ವಿ.ದತ್ತಾ ಪಕ್ಷೇತರರಾಗಿ ಸ್ಪರ್ಧಿಸುವ ನಿರ್ಧಾರ ಮಾಡಿದ್ದರು. ಆದರೆ ಜೆಡಿಎಸ್‌ ಮುಖಂಡರ ಮನವೊಲಿಕೆಯ ಬಳಿಕ ಮತ್ತೆ ಮರಳಿ ಜೆಡಿಎಸ್‌ ಗೂಡು ಸೇರಿದ್ದರು. ಕಾಂಗ್ರೆಸ್‌ ತೊರೆದು ಬಂದ ವೈ.ಎಸ್.ವಿ.ದತ್ತಾ ಅವರಿಗೆ ಕಡೂರಿನ ಜೆಡಿಎಸ್‌ ಟಿಕೆಟ್‌ ನೀಡಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+