ಬೈಕಿಗೆ ಪ್ಯಾಲಿಸ್ತೀನ್ ಧ್ವಜ ಕಟ್ಟಿ ಓಡಾಟ- ವಿಡಿಯೋ ವೈರಲ್
ಚಿಕ್ಕಮಗಳೂರು ಸೆಪ್ಟೆಂಬರ್ 15: ಚಿಕ್ಕಮಗಳೂರು-ಕಡೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕಿಗೆ ಪ್ಯಾಲಿಸ್ತೀನ್ ಧ್ವಜ ಕಟ್ಟಿ ಮುಸ್ಲಿಂ ಯುವಕರು ಓಡಾಡಿದ ಘಟನೆ ನಡೆದಿದೆ. ನಿನ್ನೆಯಿಂದ ಬಾವುಟ ಕಟ್ಟಿಕೊಂಡು ಓಡಾಡುತ್ತಿರುವ ಯುವಕರು ಘೋಷಣೆ ಕೂಗುತ್ತಿದ್ದು ಹಿಂದೂ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಬೈಕಿಗೆ ಪ್ಯಾಲಿಸ್ತೀನ್ ಧ್ವಜ ಕಟ್ಟಿ ಓಡಾಡುವುದನ್ನು ಖಂಡಿಸಿ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗೆ ಹಿಂದೂಪರ ಸಂಘಟನೆಗಳು ದೂರು ನೀಡಿವೆ. ಪೊಲೀಸ್ ಠಾಣೆ ಮುಂದೆ 30ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರು ಜಮಾಯಿಸಿ ಪ್ಯಾಲಿಸ್ತೀನ್ ಧ್ವಜ ಹಾರಿಸಿದ ಯುವಕರ ಬಂಧನಕ್ಕೆ ಆಗ್ರಹಿಸಿದ್ದಾರೆ.

ಪ್ಯಾಲಿಸ್ತೀನ್ ಧ್ವಜ ಹಾರಿಸಿದ ದೇಶದ್ರೋಹಿಗಳನ್ನು ಬಂಧಿಸದಿದ್ದರೆ ಮತ್ತಷ್ಟು ಹೋರಾಟದ ಎಚ್ಚರಿಕೆ ನೀಡಿದರು. ರಾಜ್ಯದಲ್ಲಿ ಪ್ಯಾಲಿಸ್ತೀನ್ ಧ್ವಜ ಹಾರಿಸುತ್ತಿರುವುದು ಇದೇ ಮೊದಲಲ್ಲ. ಆಗಾಗ ಇಂತಹ ಪುಂಡಾಟ ನಡೆಯುತ್ತಲೇ ಇರುತ್ತವೆ.
ಆಗಸ್ಟ್ 15ರಂದು ಪ್ಯಾಲಿಸ್ತೀನ್ ಬಾವುಟ ಹಾರಿಸಲಾಗಿತ್ತು..
ಸ್ವಾತಂತ್ರ್ಯ ದಿನಾಚರಣೆ ದಿನದಂದು (ಆಗಸ್ಟ್ 15,2024) ದೇಶಾದ್ಯಂತ ತ್ರಿವರ್ಣ ಧ್ವಜ ಹಾರಿಸಿ ಸಂಭ್ರಮಿಸುತ್ತಿರುವ ಸಂದರ್ಭದಲ್ಲಿ ತುಮಕೂರು ಜಿಲ್ಲೆಯ ಕುಣಿಗಲ್‌ನಲ್ಲಿ ಕೆಲ ಯುವಕರು ಪ್ಯಾಲಿಸ್ತೀನ್ ಬಾವುಟ (Palestine Flag) ಹಾರಿಸಲು ಯತ್ನಿಸಿರುವುದು ಕಂಡುಬಂದಿತ್ತು. ಇದಕ್ಕೆ ಸ್ಥಳೀಯ ಯುವಕರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದರು.

ಕುಣಿಗಲ್ ಪಟ್ಟಣದ ಸರ್ಕಾರಿ ಶಾಲಾ ಮೈದಾನದಲ್ಲಿ ತಾಲೂಕು ಆಡಳಿತದಿಂದ ಧ್ವಜಾರೋಹಣ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಮತ್ತೊಂದು ಕಡೆ ಕೆಲ ಯುವಕರ ಗುಂಪು ಪ್ಯಾಲಿಸ್ತೀನ್ ಬಾವುಟ ಹಾರಿಸಲು ಯತ್ನಿಸಿತ್ತು. ಅದಕ್ಕೆ ಮತ್ತೊಂದು ಯುವಕರ ತಂಡ ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದು, ಇವತ್ತು ಪ್ಯಾಲೇಸ್ತೀನ್ ಧ್ವಜ ಹಾರಿಸುತ್ತಾರೆ, ನಾಳೆ ಪಾಕಿಸ್ತಾನ ಧ್ವಜ ಹಾರಿಸುತ್ತಾರೆ. ಹಾರಿಸುವುದರೆ ಭಾರತ ಧ್ವಜ ಹಾರಿಸಿ, ಇಲ್ಲದಿದ್ದರೆ ವಿವಾದವಾಗಲಿದೆ ಎಂದು ಯುವಕರಿಗೆ ಬುದ್ಧಿ ಹೇಳಿದ್ದಾರೆ. ಆಗ ಯುವಕರು ಸುಮ್ಮನಾಗಿದ್ದಾರೆ ಎಮದು ತಿಳಿದು ಬಂದಿತ್ತು.












Click it and Unblock the Notifications