ಮಲೆನಾಡಿನ ಹಸಿರಿನ ಮಧ್ಯೆ ಪಾತರಗಿತ್ತಿಗಳ ಚಿತ್ತಾರ ಲೋಕ

ಚಿಕ್ಕಮಗಳೂರು, ಜನವರಿ 25: ತನ್ನೊಡಲೊಳಗೆ ಅಗಾಧ ಪ್ರಾಕೃತಿಕ ಸಂಪತ್ತನ್ನು ಹೊಂದಿರುವ ಮಲೆನಾಡಿನ ಚಿಕ್ಕಮಗಳೂರಿನಲ್ಲಿ ಚಿಟ್ಟೆಯ ಲೋಕವೊಂದು ಸೃಷ್ಟಿಯಾಗಿದೆ.

ಚಿಕ್ಕಮಗಳೂರಿನಿಂದ ಬಾಳೆಹೊನ್ನೂರಿಗೆ ಸಾಗುವ ದಾರಿಯಲ್ಲಿ ಅರೆನೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಈ ಚಿಟ್ಟೆಗಳ ಚಿತ್ತಾರ ಎಲ್ಲರ ಕಣ್ಮನ ಸೆಳೆಯುವಂತಿದೆ. ಅರೆನೂರು ಗ್ರಾಮದಿಂದ ಅರಣ್ಯ ಪ್ರದೇಶದೊಳಗೆ ಐದಾರು ಕಿ.ಮೀ ನಡೆದುಕೊಂಡು ಹೋದರೆ ಲಕ್ಷಾಂತರ ಚಿಟ್ಟೆಗಳು ಎತ್ತರದ ಮರಗಳ ರೆಂಬೆ, ಕೊಂಬೆಗಳ ಮೇಲೆ ಕೂತು ಚಿತ್ತಾರ ಬಿಡಿಸಿದಂತೆ ಗೋಚರವಾಗುತ್ತಿವೆ.

"ಡಾರ್ಕ್ ಬ್ಲೂ ಟೈಗರ್' ಎಂದೇ ಕರೆಸಿಕೊಳ್ಳುವ ಈ ಚಿಟ್ಟೆಗಳು ಪ್ರತಿವರ್ಷ ಡಿಸೆಂಬರ್ ತಿಂಗಳಿನಿಂದ ಆರಂಭವಾಗಿ ಜನವರಿ ಅಂತ್ಯದ ವರೆಗೂ ಇಲ್ಲಿ ಕಾಣಸಿಗುತ್ತವೆ. ಚಿಟ್ಟೆಗಳ ಸಂತಾನೋತ್ಪತ್ತಿಗೆ ಮಲೆನಾಡಿನ ಈ ಭಾಗದ ಕಾಡು ಸಹಾಯಕವಾಗಿದೆ. ಮಲೆನಾಡು ನೈಸರ್ಗಿಕ ಹಸಿರು ಸಂಪತ್ತನ್ನು ಒಳಗೊಂಡಿರುವುದರಿಂದ ಈ ಚಿಟ್ಟೆಗಳು ಇಲ್ಲಿ ಪ್ರತಿ‌ವರ್ಷ‌ ಬಂದು‌ ಸಂತಾನ ವೃದ್ಧಿಮಾಡಿಕೊಂಡು ಹೊರಡುತ್ತವೆ.

Butterflies World In Arenuru Village near Balehonnuru

ಹಸಿರಿನ ಮಧ್ಯೆ ಪಾತರಗಿತ್ತಿಗಳ ವೈಯಾರ

ದಟ್ಟವಾದ ಹಸಿರ ಕಾನನದ ಮಧ್ಯೆ ದೊಡ್ಡ ದೊಡ್ಡ ಮರಗಳ‌ ರಂಬೆ ಕೊಂಬೆ, ಬಳ್ಳಿಗಳ ಮೇಲೆಲ್ಲಾ ಈ ಚಿಟ್ಟೆಗಳು ಚಿತ್ತಾರ ಬಿಡಿಸಿದಂತೆ ಭಾಸವಾಗುತ್ತವೆ. ನುಣುಪಾದ ಚಿಟ್ಟೆಗಳ ರೆಕ್ಕೆಯ ಮೇಲಿನ ಬಣ್ಣಗಳು ಇಡೀ ಅರಣ್ಯ ಪ್ರದೇಶವನ್ನು ನೀಲಿ ಬಣ್ಣಕ್ಕೆ ತಿರಿಗಿಸಿವೆಯೇನೋ ಅನ್ನಿಸುತ್ತದೆ.

Butterflies World In Arenuru Village near Balehonnuru

ನೋಡುಗರ ಕಣ್ಮನಗಳಿಗೆ ಆಹ್ಲಾದಕರವನ್ನು ನೀಡುತ್ತಿವೆ. ಇನ್ನು ಈ ಚಿಟ್ಟೆಗಳು ಆಗಾಗ ಒಮ್ಮೆಲೆ‌ ಮೇಲೆ ಹಾರಿ ಮತ್ತೆ ಬಂದು ರೆಂಬೆಗಳ ಮೇಲೆ ಕೂರುವುದು ನೋಡುಗರಿಗೆ ಮತ್ತಷ್ಟು ಸೊಗಸು ನೀಡುತ್ತಿವೆ.

Butterflies World In Arenuru Village near Balehonnuru

ಒಟ್ಟಾರೆ ಈ ಭಾಗದ ಕಾಡಿನ ಅದೆಷ್ಟೋ ಹೂಗಳ ಸುಗಂಧವನ್ನು ಹೀರುತ್ತಾ ಪಾತರಗಿತ್ತಿಗಳು ಹೊಸದೊಂದು ಲೋಕವನ್ನು ಸೃಷ್ಟಿ ಮಾಡಿದ್ದು ನೋಡುಗರ ಮನಸ್ಸಿಗೆ ಆನಂದ ಮೂಡಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+