• search
  • Live TV
ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ರವಾಹ ಸಂತ್ರಸ್ಥರನ್ನು ನಿಂದಿಸಿದ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ!

By ಚಿಕ್ಕಮಗಳೂರು ಪ್ರತಿನಿಧಿ
|

ಚಿಕ್ಕಮಗಳೂರು, ಆಗಸ್ಟ್ 11 : ಚಿಕ್ಕಮಗಳೂರು ಜಿಲ್ಲೆಯ ಜನರು ಪ್ರವಾಹದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೂಡಿಗೆರೆ ಕ್ಷೇತ್ರದ ಬಿಜೆಪಿ ಶಾಸಕರು ಸಂತ್ರಸ್ತರು ಸಹಾಯ ಕೇಳಿದರೆ ಕೋಪಗೊಂಡು ಅವರನ್ನು ನಿಂದಿಸಿದ್ದಾರೆ.

In Pics: ಕರ್ನಾಟಕದಲ್ಲಿ ಮಹಾ ಮಳೆ

ಮೂಡಿಗೆರೆ ಶಾಸಕ ಎಂ. ಪಿ. ಕುಮಾರಸ್ವಾಮಿ ಪ್ರವಾಹ ಸಂತ್ರಸ್ತ ಯುವಕನ ಜೊತೆ ಮಾತನಾಡಿರುವ ಆಡಿಯೋ ವೈರಲ್ ಆಗಿದೆ. ಮಳೆಯಲ್ಲಿ ಮನೆ ಕೊಚ್ಚಿ ಹೋಗಿದೆ ಸಹಾಯ ಮಾಡಿ ಎಂದು ಕೇಳಿದ ಯುವಕನನ್ನು ಶಾಸಕರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಳೆಗೆ ಮತ್ತೆ ನಾಲ್ವರ ಬಲಿ

ಎಂ. ಪಿ. ಕುಮಾರಸ್ವಾಮಿ ಮೂಡಿಗೆರೆ ತಾಲೂಕಿನ‌‌ ಮದುಗುಂಡಿ ಗ್ರಾಮದ ಯುವಕನ ಜೊತೆ ಅವಾಚ್ಯ ಶಬ್ದಗಳಿಂದ ಮಾತನಾಡಿದ್ದಾರೆ. "ಡಿಸಿ, ಎಸ್ಪಿನೇ ಬರೋಕೆ ಆಗ್ತಾ ಇಲ್ಲ, ನಾನೇನು ಮಾಡಲಿ" ಎಂದು ಕೋಪಗೊಂಡು ಸಂತ್ರಸ್ತರನ್ನು ಶಾಸಕರು ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಚಿಕ್ಕಮಗಳೂರಿನಲ್ಲಿ ರಣ ಮಳೆ; ಆಗಸ್ಟ್ 1ರಿಂದ 10 ರವರೆಗೆ ಕ್ವಿಕ್ ರಿಪೋರ್ಟ್

ಮದುಗುಂಡಿ ಗ್ರಾಮದ 20 ಹೆಚ್ಚು ಮನೆಗಳು ಮಳೆಯಿಂದಾಗಿ ಹಾನಿಗೀಡಾಗಿವೆ. ಮರುಸೂಣಿಗೆ ಹೊಳೆ ಅಬ್ಬರ ಹಾಗೂ ಗುಡ್ಡ ಕುಸಿತದಿಂದ ಅತಂತ್ರವಾಗಿರುವ ಜನರು ಸಹಾಯ ಮಾಡುವಂತೆ ಶಾಸಕರಿಗೆ ಕರೆ ಮಾಡಿದ್ದಾರೆ.

ಆಗಸ್ಟ್ 14ರವರೆಗೂ ಚಾರ್ಮಾಡಿ ಘಾಟ್ ಸಂಚಾರ ಸ್ಥಗಿತ

ಮುಂದುವರೆದ ಮಳೆಯ ಅಬ್ಬರ : ಕಾಫಿ ನಾಡಿನಲ್ಲಿ ಮಳೆಯ ರುದ್ರ ನರ್ತನ ಮುಂದುವರೆದಿದೆ. ಮನೆ ಮತ್ತು ತೋಟದ ಮೇಲೆ ಬೃಹತ್ ಗುಡ್ಡಗಳು ಕುಸಿದ ಘಟನೆ

ಚಿಕ್ಕಮಗಳೂರಿನ ಸಿರಿವಾಸೆ ಸಮೀಪದ ಅಡಲುಗದ್ದೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿತೀಶ್ ಹಾಗೂ ನಂದೀಶ್ ಮನೆ ಮೇಲೆ ಗುಡ್ಡ ಕುಸಿದಿದೆ. ಮನೆಯಲ್ಲಿದ್ದ ಕುಟುಂಬದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇಡೀ ಗ್ರಾಮವನ್ನೇ ಜನರು ತೊರೆದಿದ್ದು, ಸಿರಿವಾಸೆ ಗ್ರಾಮದಲ್ಲಿ ಎಲ್ಲರೂ ಆಶ್ರಯ ಪಡೆದಿದ್ದಾರೆ. ಸಿರಿವಾಸೆ-ಅಡಲುಗದ್ದೆ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಗ್ರಾಮಸ್ಥರು ಆತಂಕದಲ್ಲಿದ್ದಾರೆ.

English summary
Chikkamagaluru district Mudigere constituency BJP MLA M.P. Kumaraswamy upset with flood victim. MLA telephone conversation with youth goes viral on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X