ಬಿಜೆಪಿ ಜನನಾಯಕರು ಇರುವ ಪಕ್ಷ: ಹಾಗಾಗಿ ಸಿದ್ದರಾಮಯ್ಯಗೆ ಮುಕ್ತ ಆಹ್ವಾನ

ಚಿಕ್ಕಮಗಳೂರು, ಜೂನ್ 1: ರಾಜ್ಯ ಪ್ರವಾಸೋದ್ಯಮ ಇಲಾಖೆಯ ಸಚಿವ ಸಿ.ಟಿ.ರವಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಬಿಜೆಪಿ ಸೇರಲು ಮುಕ್ತ ಆಹ್ವಾನವನ್ನು ನೀಡಿದ್ದಾರೆ.

Recommended Video

      Padarayanapura corporator Imran Pasha shares special video from quaratine centre | Oneindia Kannada

      "ಸಿದ್ದರಾಮಯ್ಯನವರು ಕಾಂಗ್ರೆಸ್ ಮುಖಂಡರು. ಹಾಗಾಗಿ, ಬಿಜೆಪಿಯನ್ನು ಮತ್ತು ನಮ್ಮ ಸರಕಾರದ ಸಾಧನೆಯನ್ನು ಅವರಿಂದ ಹೊಗಳಲು ಸಾಧ್ಯವೇ" ಎಂದು ಪ್ರಶ್ನಿಸಿರುವ ಸಚಿವ ರವಿ, "ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯನವರು ಬಿಜೆಪಿಗೆ ಬರುವ ಬೆಳವಣಿಗೆ ನಡೆದರೂ ನಡೆಯಬಹುದು"ಎಂದು ಹೇಳಿದ್ದಾರೆ.

      "ಕಾಂಗ್ರೆಸ್ ನಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯನವರ ನಡುವೆ ಶೀತಲ ಸಮರ ನಡೆಯುತ್ತಿಲ್ಲವೇ. ಇದು ರಾಜಕೀಯ, ಹಾಗಾಗಿ ಮುಂದಿನ ದಿನಗಳಲ್ಲಿ ಏನು ಬೇಕಾದರೂ ರಾಜಕೀಯ ಬೆಳವಣಿಗೆ ನಡೆಯಬಹುದು"ಎಂದು ಸಿ.ಟಿ.ರವಿ ಹೇಳಿದ್ದಾರೆ.

      BJP Is Party With Peoples Leader: Minister C T Ravi Invited Siddaramaiah To BJP

      "ರಾಜ್ಯದಲ್ಲಿ ಕೆಲವೇ ಕೆಲವು ಜನನಾಯಕರೆಂದರೆ ಯಡಿಯೂರಪ್ಪ, ದೇವೇಗೌಡ್ರು ಮತ್ತು ಸಿದ್ದರಾಮಯ್ಯ. ಜನನಾಯಕರು ಇರಬೇಕಾಗಿರುವುದು ಬಿಜೆಪಿಯಲ್ಲಿ"ಎಂದು ಸಚಿವ ರವಿ ಹೇಳುವ ಮೂಲಕ, ಪರೋಕ್ಷವಾಗಿ ಗೌಡ್ರು ಮತ್ತು ಸಿದ್ದರಾಮಯ್ಯನವರನ್ನು ಬಿಜೆಪಿಗೆ ಆಹ್ವಾನಿಸಿದ್ದಾರೆ.

      "ಭಾರತದ ಅಸ್ತಿತ್ವ ಇರುವುದು ಹಳ್ಳಿಗಳಲ್ಲಿ. ಅಲ್ಲೆಲ್ಲ ಕಂಪ್ಯೂಟರ್-ಲ್ಯಾಪ್ ಟಾಪ್ -ಸ್ಮಾರ್ಟ್ ಪೋನ್‌ಗಳೆಲ್ಲಿಂದ ಬರಬೇಕು? ಪೋನ್ ಇದ್ದರೂ ನೆಟ್‌ವರ್ಕ್ ಎಲ್ಲಿದೆ? ಆನ್ ಲೈನ್ ಶಿಕ್ಷಣದಲ್ಲಿ ಹಳ್ಳಿ ವಿದ್ಯಾರ್ಥಿಗಳು ಪಾಲ್ಗೊಳ್ಳುವುದು ಹೇಗೆ? ದೇಶ ಆಳುವ ನಾಯಕರಿಗೆ ಈ ಪ್ರಾಥಮಿಕ ಜ್ಞಾನ ಬೇಡವೇ" ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.

      "ಸಿದ್ದರಾಮಯ್ಯನವರು ಬಿಜೆಪಿಯನ್ನು ಹೊಗಳಿದರು ಎಂದಾಗುವುದು, ಅದು ಅವರು ಬಿಜೆಪಿ ಸೇರಿದಾಗ ಮಾತ್ರ" ಎಂದು ಸಚಿವ ಸಿ.ಟಿ.ರವಿ ಲೇವಡಿ ಮಾಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+