ವಿಡಿಯೋ; ಚಾಲಕನಿಲ್ಲದೇ ಓಡಿದ ಕಾರು, ಅನಾಹುತ ತಪ್ಪಿಸಿದ ಬೈಕ್ ಸವಾರ

ಚಿಕ್ಕಮಗಳೂರು, ಜುಲೈ 11: ಚಾಲಕನಿಲ್ಲದೇ ಏಕಾಏಕಿ ಚಲಿಸಲು ಆರಂಭಿಸಿದ ಕಾರನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಬೈಕ್ ಚಾಲಕರೊಬ್ಬರು ತಮ್ಮ ಸಮಯ ಪ್ರಜ್ಞೆಯಿಂದ, ಸಂಭವಿಸಬಹುದಾದ ಅನಾಹುತವೊಂದನ್ನು ತಪ್ಪಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಪಟ್ಟಣದಲ್ಲಿ ನಡೆದಿದೆ.

Recommended Video

      Who is Vikas Dubey ? | ಯಾರು ಈ ವಿಕಾಸ್ ದೂಬೆ ? | Oneindia Kannada

      ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬರು ರಸ್ತೆ ಪಕ್ಕ ಕಾರು ನಿಲ್ಲಿಸಿ ಅಂಗಡಿಗೆ ತೆರಳಿದ್ದಾರೆ. ಅದೇ ಕಾರಿನ ಮುಂಭಾಗದ ಸೀಟಿನಲ್ಲಿ ಕುಳಿತಿದ್ದ ಯುವತಿ ಕೂಡ ಕೆಲವೇ ನಿಮಿಷಗಳಲ್ಲಿ ಕಾರಿನಿಂದ ಕೆಳಗಿಳಿದಿದ್ದಾರೆ. ಆಕೆ ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆ, ನಿಂತಿದ್ದ ಕಾರು ಚಾಲಕನಿಲ್ಲದೇ ತಾನಾಗೇ ಚಲಿಸಲು ಆರಂಭಿಸಿದೆ. ನೋಡನೋಡುತ್ತಿದ್ದಂತೆ ಕಾರು ಮುಂದಕ್ಕೆ ಚಲಿಸುತ್ತಲೇ ಇದೆ.

      Bike Driver Controlled Running Car And Avoid Accident In Chikkamagaluru

      ಅದೇ ವೇಳೆಗೆ ತಕ್ಷಣ ಕಾರಿನ ಹಿಂಭಾಗದಲ್ಲಿ ಸ್ಕೂಟಿ ಪಾರ್ಕ್ ಮಾಡುತ್ತಿದ್ದ ಸವಾರರೊಬ್ಬರು ಥಟ್ಟನೆ ಓಡಿ ಬಂದು ಕಾರಿನ ಬಾಗಿಲು ತೆರೆದು ಡ್ರೈವರ್ ಸೀಟಲ್ಲಿ ಕೂತು ಕಾರಿನ ಬ್ರೇಕ್ ಹಿಡಿದು ನಿಯಂತ್ರಿಸಿದ್ದಾರೆ.

      ಅದೇ ರಸ್ತೆಯಲ್ಲಿ ಸಣ್ಣ ಮಕ್ಕಳು ಸೇರಿದಂತೆ ಹಲವು ಜನರು ಸೇರಿದ್ದರು. ಬೈಕ್ ಸವಾರನ ಸಮಯ ಪ್ರಜ್ಞೆಯಿಂದ ಸಂಭವಿಸಬಹುದಾದ ಅನಾಹುತವು ತಪ್ಪಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+