Bhadra Dam: ಜೂನ್ 17ರಂದು ಭದ್ರಾ ಜಲಾಶಯದ ಒಳಹರಿವು ಹೆಚ್ಚಳ; ನೀರಿನ ಮಟ್ಟ ಎಷ್ಟಿದೆ ತಿಳಿಯಿರಿ
Bhadra Dam: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇದೀಗ ಮುಂಹಾರು ಚುರುಕು ಪಡೆದಿದೆ. ಪರಿಣಾಮ ಹಲವೆಡೆ ಕೆರೆ-ಕಟ್ಟೆ, ನದಿಗಳು ಅಪಾಯದ ಮಟ್ಟದಲ್ಲಿ ತುಂಬಿ ಹರಿಯುತ್ತಿವೆ. ಅಲ್ಲದೆ, ಕೆಲ ಡ್ಯಾಂಗಳಿಗೂ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಹಾಗಾದರೆ ಇಂದು (ಜೂನ್ 17) ಭದ್ರಾ ಜಲಾಶಯದ ನೀರಿನ ಮಟ್ಟ ಎಷ್ಟಿದೆ ಎನ್ನುವ ಮಾಹಿತಿಯನ್ನು ಅಂಕಿಅಂಶಗಳ ಸಹಿತ ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕೆಲ ದಿನಗಳಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂಗಾರು ಆರ್ಭಟ ಶುರು ಮಾಡಿದೆ. ಭಾರೀ ಮಳೆ ಹಿನ್ನೆಲೆ ಭದ್ರಾ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ತುಸು ಹೆಚ್ಚಾಗಿದೆ. ಹೀಗೆ ವರುಣಾರ್ಭಟ ಮುಂದುವರೆದರೆ, ಮತ್ತಷ್ಟು ಒಳಹರಿವು ಹೆಚ್ಚಳ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಭದ್ರಾ ಜಲಾಶಯಕ್ಕೆ ಜೂನ್ 17 ಮಂಗಳವಾರ ಬೆಳಗ್ಗೆ ವೇಳೆಗೆ ಒಳ ಹರಿವು 6,999 ಕ್ಯೂಸೆಕ್‌ನಷ್ಟಿದೆ. ಮೇ ತಿಂಗಳ ಕೊನೆಯಲ್ಲಿ ಸತತವಾಗಿ ಸುರಿದ ಮಳೆಯಿಂದ ಒಳ ಹರಿವು 8,000 ಕ್ಯೂಸೆಕ್ ದಾಟಿತ್ತು. ಆದರೆ, ಮತ್ತೆ ಕಡಿಮೆ ಆಗಿದ್ದು, ಇದೀಗ ಮತ್ತೆ ಭಾರೀ ಮಳೆ ಮುಂದುವರೆದ ಪರಿಣಾಮ ನಿಧಾನಗತಿಯಲ್ಲಿ ಹೆಚ್ಚಳ ಆಗುತ್ತಲಿದೆ. ಹವಾಮಾನ ಇಲಾಖೆ ಪ್ರಕಾರ, ಮುಂದಿನ ಹಲವು ದಿನಗಳವರೆಗೂ ಮಳೆ ಮತ್ತಷ್ಟು ಚುರುಕು ಪಡೆಯಲಿದ್ದು, ಒಳಹರಿವು ಹೆಚ್ಚಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಜಲಾಶಯದ ಪ್ರಸ್ತುತ ನೀರಿನ ಮಟ್ಟ: ಭದ್ರಾ ಡ್ಯಾನ ಇದೀಗ ಪ್ರಸ್ತುತ ನೀರಿನ ಮಟ್ಟ 145.5 ಅಡಿ ಇದ್ದು, ಒಳ ಹರಿವು 6,999 ಕ್ಯೂಸೆಕ್ ಇದೆ. ಕಳೆದ ವರ್ಷ ಇದೇ ದಿನ 118.11 ಅಡಿ ಇತ್ತು. ಕಳೆದ ವಾರ ಬಿಡುವು ನೀಡಿದ್ದ ಮಳೆ ಈ ವಾರ ಮತ್ತೆ ಆರ್ಭಟಿಸಲಿದೆ ಎಂದು ಹವಾಮಾನ ಇಲಖೆಯಿಂದ ಮುನ್ಸೂಚನೆ ಇದೆ.
ಭದ್ರಾ ಜಲಾಶಯದ ನೀರಿನ ಮಟ್ಟ
* ಗರಿಷ್ಠ ಮಟ್ಟ - 186 ಅಡಿ
* ಇಂದಿನ ಮಟ್ಟ - 145.5 ಅಡಿ
* ಒಳ ಹರಿವು - 6,999 ಕ್ಯೂಸೆಕ್
* ಹೊರ ಹರಿವು - 1,270 ಕ್ಯೂಸೆಕ್
* ಕಳೆದ ವರ್ಷ ಈ ದಿನ ನೀರಿನ ಮಟ್ಟ - 118.11ಅಡಿ
* ಕಳೆದ ವರ್ಷ ಈ ದಿನದ ಒಳಹರಿವು - 551 ಕ್ಯೂಸೆಕ್
ಕಳೆದ ವರ್ಷ ಜೂನ್ ಆರಂಭದಲ್ಲೇ ಮುಂಗಾರು ಎಂಟ್ರಿ ಕೊಟ್ಟು ಭಾರೀ ಮಳೆ ಸುರಿದ ಪರಿಣಾಮ ಬಹುತೇಕ ಜಿಲ್ಲೆಗಳಲ್ಲಿ ಕೆರೆ-ಕಟ್ಟೆಗಳು, ನದಿಗಳು ಪ್ರಮುಖ ಜಲಾಶಯಗಳು ತುಂಬಿ ಹರಿದಿದ್ದವು. ಅಲ್ಲದೆ, ದೊಡ್ಡ ಅವಾಂತರಗಳು ಸಹ ಸೃಷ್ಟಿಯಾಗಿದ್ದವು. ಮತ್ತೊಂದೆಡೆ ಮಳೆ ರೈತರ ಮುಖದಲ್ಲಿ ಮಂದಹಾಸ ಮೂಡಿಸಿತ್ತು. ಇನ್ನೂ ಈ ವರ್ಷ 2025ರಲ್ಲಿ ಅವಧಿಗೂ ಮುನ್ನ ಮೇ ಕೊನೆಯಲ್ಲಿ ಮುಂಗಾರು ಎಂಟ್ರಿ ಕೊಟ್ಟಿದ್ದು, ಇದೀಗ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ.
ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರೆದು ದೊಡ್ಡ ದೊಡ್ಡ ಅವಾಂತರಗಳೇ ಸೃಷ್ಟಿಯಾಗಿವೆ. ಈಗಲೇ ಹಿಂಗೆ..ಇನ್ನೂ ಮುಂದಿನ ದಿನಗಳಲ್ಲಿ ಏನೇನು ಗತಿ ಕಾದಿದೆಯೋ ಎನ್ನುವ ಆತಂಕ ಜನರಲ್ಲಿ ಮೂಡಿದೆ. ಕೆಲವು ಜಿಲ್ಲೆಗಳಲ್ಲಿ ಬಿಟ್ಟುಬಿಡದೇ ಸುರಿಯುತ್ತಿರುವ ಮಳೆಯಿಂದ ಮುಂಜಾಗ್ರತಾ ಕ್ರಮವಾಗಿ ಮಕ್ಕಳ ಹಿತದೃಷ್ಟಿಯಿಂದ ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ಜಿಲ್ಲಾಡಳಿತಗಳು ರಜೆ ಘೋಷಣೆ ಮಾಡಿವೆ.












Click it and Unblock the Notifications