Basavaraj Bommai Road Show: ಕಡೂರಿನಲ್ಲಿ ಸಿಎಂಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ ವ್ಯಕ್ತಿ
ಚಿಕ್ಕಮಗಳೂರು, ಏಪ್ರಿಲ್, 24: ವಿಧಾನಸಭೆ ಚುನಾವಣೆ ಹಿನ್ನೆಲೆ ಈಗಾಗಲೇ ಎಲ್ಲಾ ರಾಜಕಾರಣಿಗಳು ಮತದಾರರನ್ನು ಸೆಳೆಯಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅಲ್ಲದೆ ರೋಡ್ ಶೋಗಳ ಮೂಲಕ ಅಬ್ಬರದ ಪ್ರಚಾರಕ್ಕೂ ಇಳಿದಿದ್ದಾರೆ. ಇದೇ ರೀತಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಭಾನುವಾರ ರಾತ್ರಿ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ರೋಡ್ ಶೋ ಮಾಡುವ ವೇಳೆ ಅವರಿಗೆ ವ್ಯಕ್ತಿಯೊಬ್ಬರು ಅವಾಚ್ಯ ಶಬ್ಧಗಳಿಂದ ನಿಂಧಿಸಿದ ಘಟನೆ ನಡೆದಿದೆ.
ಬಸವರಾಜ ಬೊಮ್ಮಾಯಿ ಅವರು ರೋಡ್ ಶೋ ಮಾಡುವ ವೇಳೆ "ಯಾವನೋ ಸಿಎಂ, ಅವನಿಗೇಕೆ ಕಾಯಬೇಕು ಎಂದು ಕಡೂರಿನಲ್ಲಿ ವ್ಯಕ್ತಿಯೊಬ್ಬ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾನೆ. ಪೊಲೀಸರು ಎಷ್ಟೇ ಸಮಾಧಾನ ಮಾಡಿದರೂ ಬಗ್ಗದ ಆ ವ್ಯಕ್ತಿ ಸಿಎಂ ಆದರೆ ಏನು, ಅವನಿಗೇಕೆ ಕಾಯಬೇಕು," ಎಂದು ಏಕವಚನದಲ್ಲಿ ಮತ್ತೆ ಮತ್ತೆ ಅವಾಶ್ಚ್ಯಾ ಶಬ್ಧಗಳಿಂದ ನಿಂಧಿಸಿದ್ದಾನೆ.

ನಂತರ ರೊಚ್ಚಿಗೆದ್ದ ಜನ ಸಿಎಂ ಬಸವರಾಜ ಬೊಮ್ಮಾಯಿಗೆ ಬೈದಿದ್ದ ವ್ಯಕ್ತಿಗೆ ಕ್ಲಾಸ್ ತೆಗೆದುಕೊಂಡ ಘಟನೆಯೂ ನಡೆದಿದೆ. ಬಳಿಕ ಆತನನನ್ನು ಪೊಲೀಸರೇ ಜೀಪಿನಲ್ಲಿ ತುಂಬಿಕೊಂಡು ಹೋಗಿದ್ದಾರೆ. ಆಗ ಪ್ರಚಾರದ ಗಾಡಿಯಿಂದ ಹೊರಬಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜನರತ್ತ ಕೈ ಬೀಸಿದ್ದಾರೆ.
ಇದೇ ವೇಳೆ ಜನರು ಸಿಎಂ ನೋಡಲು ಮುಗಿಬಿದ್ದ ಘಟನೆಯೂ ನಡೆದಿದೆ. ಅಲ್ಲದೆ ಕಡೂರು ಪಟ್ಟಣದ ಕದಂಬ ಸರ್ಕಲ್ ಬಳಿಯಿರುವ ಬಿಜೆಪಿ ಅಭ್ಯರ್ಥಿ ಬೆಳ್ಳಿ ಪ್ರಕಾಶ್ ನಿವಾಸಕ್ಕೆ ಸಿಎಂ ಭೇಟಿ ನೀಡಿದ್ದು, ಅಲ್ಲಿಯೇ ಊಟ ಮುಗಿಸಿದ ನಂತರ ದಾವಣಗೆರೆಗೆ ಪ್ರಯಾಣ ಮಾಡಿದ್ದಾರೆ. ಹೀಗೆ ನಿಗದಿಯಾಗಿದ್ದ ರೋಡ್ ಶೋ ಮುಗಿದ ಹಿನ್ನೆಲೆ, ಮತ್ತೊಮ್ಮೆ ಬೆಳ್ಳಿ ಪ್ರಕಾಶ್ ಎಂದು ಕಾರ್ಯಕರ್ತರು
ಘೋಷಣೆ ಕೂಗಿದ್ದಾರೆ.












Click it and Unblock the Notifications