ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಂಬದಹಳ್ಳಿಯಲ್ಲಿ ಜಾದು ಕಾರ್ಯಕ್ರಮ: ಮೌಢ್ಯದ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ನವೆಂಬರ್‌, 10: ಚಿಕ್ಕಮಗಳೂರು ತಾಲೂಕಿನ ದಂಬದಹಳ್ಳಿಯ ಸರಸ್ವತಿ ವಿದ್ಯಾಪೀಠದಲ್ಲಿ ವಿಜ್ಞಾನ ಮತ್ತು ತರ್ಕವನ್ನು ಒಳಗೊಂಡ ಜಾದೂ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತೂ. ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯ ನಡೆಯಿತು.

ಜಾದೂಗಾರ ಜಾನ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆದಿದ್ದು, ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಹೊಸ ಅನುಭವದೊಂದಿಗೆ ತಂತ್ರ, ಮಂತ್ರದಂತಹ ಮೌಢ್ಯಗಳ ಮೂಲಕ ಜನರನ್ನು ಹೇಗೆ ವಂಚಿಸಲಾಗುತ್ತಿದೆ ಎಂಬುದನ್ನು ಸರಳ ಜಾದುವಿನ ಮೂಲಕ ತಿಳಿಸಿಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲ ಡಿ.ಆರ್.ಹೇಮ್ ಕುಮಾರ್ ಮಾತನಾಡಿ, ಚಾರ್ಲ್ಸ್‌ ಡಾರ್ವಿನ್‌ನ ವಿಕಸನ ನಿಯಮದ ಪ್ರಕಾರ ಶೂನ್ಯದಿಂದ ಯಾವುದೇ ವಸ್ತುಗಳನ್ನು ಸೃಷ್ಟಿಸಲು, ಲಯಗೊಳಿಸಲು ಸಾಧ್ಯವಿಲ್ಲ. ಜಾದೂ ವಿಜ್ಞಾನ ಮತ್ತು ತಾರ್ಕಿಕತೆಯ ನಡುವೆ ನಯವಾದ ತಿಳಿವಳಿಕೆ ಇದೆ ಎಂದು ಅಭಿಪ್ರಾಯವನ್ನು ವ್ಯಕ್ಯಪಡಿಸಿದರು.

4 ವರ್ಷಗಳ ಬಳಿಕ ಚಿಕ್ಕಮಗಳೂರು ನಗರಕ್ಕೆ ದತ್ತಾತ್ರೇಯ ವಿಗ್ರಹ4 ವರ್ಷಗಳ ಬಳಿಕ ಚಿಕ್ಕಮಗಳೂರು ನಗರಕ್ಕೆ ದತ್ತಾತ್ರೇಯ ವಿಗ್ರಹ

ಮೌಢ್ಯತೆ ಹೋಗಲಾಡಿಸಲು ಕಾರ್ಯಕ್ರಮ

ನಂತರ ವಿದ್ಯಾರ್ಥಿ ಪೋಷಕ ಶಿವಕುಮಾರ್ ಮಾತನಾಡಿ, ಮಕ್ಕಳ ಜ್ಞಾನದ ಪ್ರಗತಿಗಾಗಿ ಹೊಸ ಹೊಸ ವೈಜ್ಞಾನಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಶಿಕ್ಷಣ ಕಲಿಸುತ್ತಿರುವುದು ನಮಗೆ ಸಂತೋಷವಾಗುತ್ತಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಮೂಢ ನಂಬಿಕೆಗಳನ್ನು ದೂರವಾಗಿಸಲು ಸಾಧ್ಯವಾಗುತ್ತದೆ. ವಿಜ್ಞಾನದ ಈ ಯುಗದಲ್ಲೂ ನಮ್ಮ ಜನರು ಮೌಢ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಳ್ಳಿ ಹಳ್ಳಿಯಲ್ಲೂ ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸಿದರೆ ಜನರ ಬದುಕು ಹಸನಾದಂತಾಗುತ್ತದೆ. ಮೌಢ್ಯದ ಹೆಸರಿನಲ್ಲಿ ಅನೇಕ ಜೀವಗಳನ್ನು ಬಲಿ ಕೊಟ್ಟಿರುವುದನ್ನು ಮಾಧ್ಯಮಗಳಲ್ಲಿ ನೋಡಿ ನಮಗೆ ನಡುಕ ಹುಟ್ಟುತ್ತದೆ. ವೈಯಕ್ತಿಕವಾಗಿ ಈ ಕಾರ್ಯಕ್ರಮ ಮೂಢನಂಬಿಕೆಯಿಂದ ದೂರ ಇರಿ ಎನ್ನುವ ಸಂದೇಶವನ್ನು ನೀಡಿದೆ ಎಂದು ಸಂತೋಷವನ್ನು ವ್ಯಕ್ಯಪಡಿಸಿದರು.

Awareness among students about superstition in Dambadahalli

ಜಿಲ್ಲೆಗೆ ಮರಳಿದ ದತ್ತಾತ್ರೇಯ ಸ್ವಾಮಿ ವಿಗ್ರಹ

ನಾಲ್ಕು ವರ್ಷಗಳ ಬಳಿಕ ದತ್ತಾತ್ರೇಯ ಸ್ವಾಮಿ ವಿಗ್ರಹ ಚಿಕ್ಕಮಗಳೂರು ನಗರಕ್ಕೆ ಮರಳಿ ಬಂದಿದೆ. ಪೊಲೀಸರು ವಶಪಡಿಸಿಕೊಂಡಿದ್ದ ಕಡೂರು ತಾಲೂಕಿನ ದೇವನೂರಿನ ಕಾಳಿ ಮಠದಲ್ಲಿದ್ದ ವಿಗ್ರಹವನ್ನು ಪೊಲೀಸರ ಭದ್ರತೆಯಲ್ಲಿಯೇ ವಾಪಸ್‌ ತರಲಾಗಿದೆ. ಭಕ್ತರೊಬ್ಬರು ಅಪರೂಪ ಹಾಗೂ ಸುಂದರ ಮೂರ್ತಿಯನ್ನು ಪೀಠಕ್ಕೆ ಕೊಡುಗೆಯಾಗಿ ನೀಡಿದ್ದರು. ಈ ದತ್ತಾತ್ರೇಯ ಸ್ವಾಮಿ ವಿಗ್ರಹವನ್ನು ಈ ಹಿಂದೆ ದತ್ತಮಾಲಾ ಅಭಿಯಾನದ ಶೋಭಯಾತ್ರೆಯಲ್ಲಿ ಮೆರವಣಿಗೆಗೆ ತೆಗೆದುಕೊಂಡು ಹೋಗಲು ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ. ಈ ವಿಗ್ರಹವನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಆದರೆ, ಈ ಬಾರಿ ದತ್ತಮಾಲಾ ಅಭಿಯಾನದ ಶೋಭಾಯಾತ್ರೆಯಲ್ಲಿ ಈ ದತ್ತಾತ್ರೇಯ ಸ್ವಾಮಿಯ ವಿಗ್ರಹವನ್ನು ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಲು ಶ್ರೀರಾಮಸೇನೆ ನಿರ್ಧರಿಸಿದೆ. ಶೋಭಾಯಾತ್ರೆಯಲ್ಲಿ ಮೆರವಣಿಗೆ ಮಾಡಲು ಕಡೂರು ತಾಲೂಕು ದೇವನೂರಿನ ಕಾಳಿ ಮಠದಲ್ಲಿದ್ದ ವಿಗ್ರಹವನ್ನು ಶ್ರೀರಾಮಸೇನೆ ಕಾರ್ಯಕರ್ತರು ಚಿಕ್ಕಮಗಳೂರು ನಗರಕ್ಕೆ ತಂದಿದ್ದಾರೆ. ಈ ವೇಳೆ ದತ್ತಾತ್ರೇಯ ಸ್ವಾಮಿ ವಿಗ್ರಹಕ್ಕೆ ಪೊಲೀಸರು ಭದ್ರತೆ ನೀಡಿದ್ದರು. ಪೊಲೀಸರ ಭದ್ರತೆಯಲ್ಲಿ ದತ್ತಾತ್ರೇಯ ಸ್ವಾಮಿಯ ವಿಗ್ರಹವನ್ನು ಚಿಕ್ಕಮಗಳೂರು ನಗರಕ್ಕೆ ತರಲಾಗಿದೆ.

ದಲಿತರು ಬಿಜೆಪಿ ಹೃದಯದಲ್ಲಿದ್ದಾರೆ: ಶಾಸಕ ಸಿ.ಟಿ ರವಿದಲಿತರು ಬಿಜೆಪಿ ಹೃದಯದಲ್ಲಿದ್ದಾರೆ: ಶಾಸಕ ಸಿ.ಟಿ ರವಿ

ದತ್ತ ಮಾಲೆ ಧರಿಸಿದ ಕಾರ್ಯಕರ್ತರು

ಎರಡು ದಿನದ ಹಿಂದೆ ರಾಜ್ಯಾದ್ಯಂತ ಶ್ರೀರಾಮಸೇನೆ ಕಾರ್ಯಕರ್ತರು ದತ್ತ ಮಾಲೆ ಧರಿಸಿದ್ದಾರೆ. ಎಂಟು ದಿನಗಳ ವೃತದ ಬಳಿಕ ಇದೇ ನವೆಂಬರ್ 13ರಂದು ಚಿಕ್ಕಮಗಳೂರು ನಗರದಲ್ಲಿ ಶೋಭಾಯಾತ್ರೆ ಮಾಡಿ ದತ್ತಾತ್ರೇಯ ಸ್ವಾಮಿಯ ವಿಗ್ರಹವನ್ನು ಮೆರವಣಿಗೆ ಮಾಡಿ ದತ್ತಪಾದುಕೆ ದರ್ಶನ ಪಡೆಯಲಿದ್ದಾರೆ. ಎಂಟು ಸಾವಿರಕ್ಕೂ ಅಧಿಕ ದತ್ತ ಭಕ್ತರು ರಾಜ್ಯದ ವಿವಿಧ ಭಾಗದಿಂದ ಆಗಮಿಸುವ ನಿರೀಕ್ಷೆ ಇದೆ.

Awareness among students about superstition in Dambadahalli

ಶ್ರೀರಾಮ ಸೇನೆಯಿಂದ ದತ್ತಮಾಲೆ ಅಭಿಯಾನ

ಈ ಬಾರಿ ಗುರು ದತ್ತಾತ್ರೇಯ ಪೀಠದಲ್ಲಿ ಶ್ರೀರಾಮ ಸೇನೆ ವತಿಯಿಂದ ದತ್ತಮಾಲೆ ಅಭಿಯಾನ ನಡೆಯುತ್ತಿರುವ ಹಿನ್ನೆಲೆಯಲ್ಲಿ ನವೆಂಬರ್ 13ರ ಬೆಳಗ್ಗೆ 6ರಿಂದ ನವೆಂಬರ್‌14ರ ಬೆಳಗ್ಗೆ 10 ಗಂಟೆವರೆಗೆ ಪ್ರವಾಸಿಗರ ಪ್ರವೇಶ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ದತ್ತಪೀಠ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ನಿರ್ಬಂಧ ಹೇರಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಶ್ರೀರಾಮ ಸೇನೆ ಕಾರ್ಯಕರ್ತರು ದತ್ತಮಾಲೆ ಧಾರಣೆ ಮಾಡಿಕೊಂಡು ನವೆಂಬರ್ 13ರಂದು ಶ್ರೀಗುರು ದತ್ತಾತ್ರೇಯ ಪೀಠಕ್ಕೆ ಆಗಮಿಸಲಿದ್ದಾರೆ. ಇನ್ನು ಈ ಬಾರಿ ಹೋಮ ಮಂಟಪದಲ್ಲಿ ಹೋಮ ಮಾಡಲ್ಲ ಎಂದು ಭಜರಂಗದಳ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ. ವರ್ಷಗಳ ಹಿಂದೆ ಹೇಗೆ ತುಳಸಿಕಟ್ಟೆ ಇದ್ದ ಜಾಗದಲ್ಲಿ ಹೋಮ ನಡೆಯುತ್ತಿತ್ತೋ ಅದೇ ಜಾಗದಲ್ಲಿ ಈ ವರ್ಷ ಹೋಮ ಮಾಡುತ್ತೇವೆ. ಹೋಮ ಮಂಟಪ ಅಪವಿತ್ರವಾಗಿದೆ, ಆ ಜಾಗದಲ್ಲಿ ಹೋಮ ಮಾಡಲ್ಲ ಎಂದು ಭಜರಂಗದಳ ಈಗಾಗಲೇ ಜಿಲ್ಲಾಡಳಿತಕ್ಕೆ ತಿಳಿಸಿದೆ.

English summary
Awareness students about superstition in Dambadahalli Saraswathi vidyapeeta of Chikkamagaluru taluk, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X