ಸಿದ್ದಾರ್ಥ ಬಗ್ಗೆ ಕೇಳಿದಾಗ 'ನೀರು ಕಾಣಿಸುತ್ತಿದೆ' ಎಂದಿದ್ದ ವಿನಯ್ ಗುರೂಜಿ

Recommended Video

      V G Siddhartha: ಸಿದ್ದಾರ್ಥ ಬಗ್ಗೆ ವಿನಯ್ ಗುರೂಜಿ ಮೊದಲೇ ಹೇಳಿದ್ದರಂತೆ | Oneindia Kannada

      ಚಿಕ್ಕಮಗಳೂರು, ಜುಲೈ 30: ಕೆಫೆ ಕಾಫಿ ಡೇ ಸಂಸ್ಥಾಪಕ, ಉದ್ಯಮಿ ವಿ. ಜಿ. ಸಿದ್ಧಾರ್ಥ ಅವರಿಗೆ ಅಪಾಯ ಎದುರಾಗಲಿದೆ ಎಂಬ ಮುನ್ಸೂಚನೆಯನ್ನು ಹರಿಹರಪುರದ ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ನೀಡಿದ್ದರು ಎಂಬ ವರದಿ ಬಂದಿದೆ.

      ವಿ. ಜಿ. ಸಿದ್ಧಾರ್ಥ ಅವರ ಬಗ್ಗೆ ಕೇಳಲು ಅವಧೂತ ವಿನಯ್​ಗುರೂಜಿಗೆ ಫೋನ್ ಕರೆ ಮಾಡಿದ್ದಾಗ, "ನೀರು ಕಾಣಿಸುತ್ತಿದೆ... ಅಪಾಯದಲ್ಲಿದ್ದಾರೆ... "ಎಂದು ಎಚ್ಚರಿಸಿದ್ದರು ಎನ್ನಲಾಗಿದೆ. ಎಸ್​. ಎಂ. ಕೃಷ್ಣ ಅವರ ಕುಟುಂಬದವರು ವಿನಯ್ ಅವರಲ್ಲಿ ನಂಬಿಕೆ ಇಟ್ಟುಕೊಂಡಿದ್ದು, ಆಗಾಗ ಫೋನ್ ಕರೆ ಮಾಡಿ ಮಾತನಾಡುತ್ತಿರುತ್ತಾರೆ ಎಂದು ತಿಳಿದು ಬಂದಿದೆ.

      ಸಿದ್ಧಾರ್ಥ ನಾಪತ್ತೆಯಾಗಿರುವ ಸಂಗತಿ ತಿಳಿದ ಕೂಡಲೆ ಎಸ್​. ಎಂ. ಕೃಷ್ಣ ಅವರ ಪತ್ನಿ ಪ್ರೇಮಾ ಕೃಷ್ಣ ಅವರು ನಿನ್ನೆ ರಾತ್ರಿ ವಿನಯ್ ಗುರೂಜಿ ಅವರಿಗೆ ಕರೆ ಮಾಡಿದ್ದರು, ಆಗ 'ನೀರು ಕಾಣಿಸುತ್ತಿದೆ.. ' ಎಂದಿದ್ದರಂತೆ. ಮಿಕ್ಕಂತೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಇದಲ್ಲದೆ, ಸಿದ್ದಾರ್ಥ ಅವರ ಪುತ್ರ ಅಮಾರ್ಥ್ಯ ಭಾನುವಾರಂದು ಭೇಟಿ ಮಾಡಿದಾಗ ಅಪಾಯದ ಬಗ್ಗೆ ಎಚ್ಚರಿಕೆ ನೀಡಿ, 'ನಿಮ್ಮ ತಂದೆಯನ್ನು ಚೆನ್ನಾಗಿ ನೋಡಿಕೊ, ತುಂಬಾ ಒತ್ತಡದಲ್ಲಿದ್ದಾರೆ, ಇಂಥ ಸಂದರ್ಭದಲ್ಲಿ ಜೊತೆಗಿರು' ಎಂದಿದ್ದರಂತೆ.

      Avadhoota Vinay Guruji alerted VG Siddhartha family

      ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರದಿಂದ ಐದು ಕಿ.ಮೀ. ದೂರದಲ್ಲಿರುವ ಗ್ರಾಮ ಗೌರಿಗದ್ದೆಯ ಸ್ವರ್ಣ ಪೀಠಿಕೇಶ್ವರಿ ದತ್ತಾಶ್ರಮ ಆಶ್ರಮದಲ್ಲಿ ವಾಸಿಸುವ 30 ವರ್ಷ ವಯಸ್ಸಿನ ವಿನಯ್ ಗುರೂಜಿ ಅವರಿಗೆ ಘಟಾನುಘಟಿ ರಾಜಕಾರಣಿಗಳು ಭಕ್ತರಾಗಿದ್ದಾರೆ. ಎಚ್.ಡಿ.ದೇವೇಗೌಡ, ಎಸ್ಎಂ ಕೃಷ್ಣ, ಎಚ್ ಡಿ ಕುಮಾರಸ್ವಾಮಿ, ಡಿಕೆ ಶಿವಕುಮಾರ್, ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ, ಸ್ಪೀಕರ್ ರಮೇಶ್ ಕುಮಾರ್ ಸೇರಿದಂತೆ ಹಲವಾರು ಗಣ್ಯರು ಭಕ್ತಗಣದಲ್ಲಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+