ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಡ್ಜ್‌ನಲ್ಲಿ ಎಸಿ ಬ್ಲಾಸ್ಟ್‌, ಕೂದಲೆಳೆ ಅಂತರದಲ್ಲಿ ಎಲ್ಲರೂ ಪಾರು

|
Google Oneindia Kannada News

ಚಿಕ್ಕಮಗಳೂರು, ಏ.22: ಲಾಡ್ಜ್‌ ಒಂದರಲ್ಲಿ ಎಸಿ ಬ್ಲಾಸ್ಟ್‌ ಆಗಿದ್ದು ರೂಮಿನಲ್ಲಿರುವ ಎಲ್ಲಾ ವಸ್ತುಗಳು ಸುಟ್ಟಿ ಕರಕಲಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ರೂಮಿನಲ್ಲಿದ್ದ ಕಾಟ್, ಬೆಡ್ ಹಾಗೂ ಸೋಫಾ ಸೆಟ್ ಸುಟ್ಟು ಕರಕಲಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನ ಸಂಭವಿಸಿಲ್ಲ.ಶಬ್ಧ ಕೇಳುತ್ತಿದ್ದಂತೆಯೇ ಸಿಬ್ಬಂದಿ ಉಳಿದವರು ಲಾಡ್ಜ್‌ನಿಂದ ಓಡಿ ಹೋಗಿದ್ದಾರೆ. ಹಾಗಾಗಿ ಅವಗಢ ತಪ್ಪಿದಂತಾಗಿದೆ.

ನಗರದ ಐಜಿ ರಸ್ತೆಯಲ್ಲಿರುವ ಲೋಟಸ್ ಹೋಟಲ್‍ನ ರೂಂ ನಂಬರ್ 205ರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹೋಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಸಿಬ್ಬಂದಿ ಭಯದಿಂದ ಹೊರ ಓಡಿ ಬಂದಿದ್ದು, ತಕ್ಷಣ ಅಗ್ನಿಶಾಮಕ ದಳದವರಿಗೆ ಫೋನ್ ಮಾಡಿ ಮಾಹಿತಿ ನೀಡಲಾಗಿದೆ.

AC blast in Lodge at Chikkamagaluru

ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಹೋಟೆಲ್ ಮಾಲೀಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಗರದ ಬಹುತೇಕ ಹೋಟೆಲ್ ಮಾಲೀಕರು ಅಗ್ನಿ ಸುರಕ್ಷತಾ ಪತ್ರವನ್ನೇ ಪಡೆದಿಲ್ಲ ಎನ್ನುವುದು ಬಹಿರಂಗಗೊಂಡಿದೆ.

ಅಗ್ನಿ ದುರಂತವಾದರೆ ನಾವು ಜವಾಬ್ದಾರರಲ್ಲ, ಕೂಡಲೇ ಅಗ್ನಿ ಸುರಕ್ಷತಾ ಪತ್ರ ಪಡೆಯುವಂತೆ ಹೋಟೆಲ್ ಮಾಲೀಕರಿಗೆ ಮನವಿ ಮಾಡಿದ್ದಾರೆ.

English summary
AC blast in Lodge in Chikkamagaluru, lodge staff and all are save now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X