• search
 • Live TV
ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಕ್ಕಳ ದಿನಾಚರಣೆಯಂದೇ ಬಸ್ರಿಕಟ್ಟೆ ಶಾಲೆಗೆ ಬಂದ ಅಪರೂಪದ ಅತಿಥಿ!

By ಚಿಕ್ಕಮಗಳೂರು ಪ್ರತಿನಿಧಿ
|
   Children's Day 2018 : ಚಿಕ್ಕಮಗಳೂರಿನ ಬಸ್ರಿಕಟ್ಟೆ ಶಾಲೆಗೆ ಬಂದ್ರು ಅಪರೂಪದ ಅತಿಥಿ | Oneindia Kannada

   ಚಿಕ್ಕಮಗಳೂರು, ನವೆಂಬರ್.14: ಆ ಅತಿಥಿಗೆ ಬೆಳಗ್ಗೆ ಇಂದು ಬುಧವಾರ 'ಮಕ್ಕಳ ದಿನಾಚರಣೆ' ಎಂದು ತಿಳಿಯಿತು. ಕೂಡಲೇ ಅವರು ಕಾಡಿನಿಂದ ನಾಡಿಗೆ ಪ್ರಯಾಣ ಬೆಳೆಸಿದರು. ನಾಡಿಗೆ ಬಂದವರೇ ನೇರ ಶಾಲೆಯ ಆಟದ ಮೈದಾನದ ಬಳಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಹಾಜರಾದರು.

   ಆದರೆ ಕರೆಯದ ಬಂದ ಈ ಅತಿಥಿಯನ್ನು ನೋಡಿ ಶಾಲಾ ಸಿಬ್ಬಂದಿ, ಮಕ್ಕಳಿಗೆ ಆಶ್ಚರ್ಯವಾಯಿತು. ಯಾರು ಆ ಅತಿಥಿ? ಅವರು ಈ ಗ್ರಾಮಕ್ಕೆ ಬಂದ ಮೇಲೆ ಏನಾಯ್ತು. ಮುಂದೆ ಓದಿ, ನಿಮಗೆ ತಿಳಿಯುತ್ತದೆ.

   ಮಕ್ಕಳ ದಿನಾಚರಣೆ ವಿಶೇಷ: ಯೋಗ ಜಗತ್ತೇ ನಿಬ್ಬೆರಗಾಗುವಂತೆ ಮಾಡಿದ ಮೈಸೂರಿನ ಪೋರಿ

   ಮಕ್ಕಳ ದಿನಾಚರಣೆ ಪ್ರಯುಕ್ತ ಕಾಡಿನಿಂದ ನಾಡಿಗೆ ಹೊಸ ಅತಿಥಿಯೊಬ್ಬರು ಕೊಪ್ಪ ತಾಲೂಕಿನ ಬಸ್ರಿಕಟ್ಟೆ ಗ್ರಾಮಕ್ಕೆ ಆಗಮಿಸಿದ್ದಾರೆ. ಆ ಅತಿಥಿ ಯಾರು ಅಂತೀರಾ? ಅವರೇ ಕಾಡುಕೋಣ.

   ಘಟನೆಯ ವಿವರ:

   ಶ್ರೀ ಸದ್ಗುರು ಶಾಲೆಯ ಆಟದ ಮೈದಾನದಲ್ಲಿ ಇಂದು ಮಕ್ಕಳ ದಿನಾಚರಣೆ ಪ್ರಯುಕ್ತ ಕಾರ್ಯಕ್ರಮ ನಡೆಯುತ್ತಿತ್ತು. ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ತಕ್ಷಣ ಎಂಟ್ರಿ ಕೊಟ್ಟ ಕಾಡುಕೋಣವನ್ನು ಕಂಡ ಶಿಕ್ಷಕರಿಗೆ ಹಾಗೂ ಮಕ್ಕಳಿಗೆ ಸ್ವಲ್ಪ ಅಚ್ಚರಿ ಹಾಗೂ ಭಯವುಂಟಾಯಿತು.

   ವಿಶ್ವ ಮಕ್ಕಳ ದಿನದಂದು ಪಾಲಕರಿಗೆ ಒಂದು ಕಿವಿಮಾತು...

   ನಂತರ ಮಕ್ಕಳು ಹಿರಿಯರ ಜೊತೆಗೂಡಿ ಕಾಡುಕೋಣವನ್ನು ಓಡಿಸಲು ಯತ್ನಿಸಿದರು. ಆದರೆ ಅದು ಹೋಗದೆ ಮತ್ತೆ ಬಂದು ಅಲ್ಲೇ ನಿಲ್ಲುತ್ತಿತ್ತು. ಒಟ್ಟಿನಲ್ಲಿ ಕಾಡುಕೋಣ ಓಡಿಸಲು ಹೋದ ಮಕ್ಕಳು ಅದರಿಂದ ಸಾಕಷ್ಟು ಮನರಂಜನೆ ಪಡೆದುಕೊಂಡರು.

   ಅಂದಹಾಗೆ ಮಕ್ಕಳ ದಿನಾಚರಣೆಯಂದೇ ಕಾಡುಕೋಣ ಬಂದದ್ದು, ಮಕ್ಕಳು ಓಡಿಸಲು ಹೋಗಿ ಎಂಜಾಯ್ ಮಾಡಿದ್ದು ಎಲ್ಲವೂ ವಿಶೇಷವಾಗಿತ್ತು.

   English summary
   A rare guest came to the Basirikette village from the jungle to celebrate children's day!
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X