ನಂದಿಗಿರಿಧಾಮದಲ್ಲಿ ಪ್ರವಾಸಿಗರ ವಾಹನಗಳಿಗೆ ಮಿತಿ?

ಚಿಕ್ಕಬಳ್ಳಾಪುರ, ಅಕ್ಟೋಬರ್ 30 : ನಂದಿಗಿರಿಧಾಮಕ್ಕೆ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕೋವಿಡ್ ಸಂದರ್ಭದಲ್ಲಿ ಮಾರ್ಗಸೂಚಿ ಪಾಲನೆ ಮಾಡುವುದಕ್ಕೆ ಇದರಿಂದ ತೊಂದರೆಯಾಗಿದೆ. ವಾರಂತ್ಯದಲ್ಲಂತೂ ಸಾವಿರಾರು ಜನರು ಆಗಮಿಸುತ್ತಾರೆ.

ಕೋವಿಡ್ ಮಾರ್ಗಸೂಚಿ ಪಾಲನೆ ಮಾಡಲು ನಂದಿಗಿರಿಧಾಮಕ್ಕೆ ಬರುವ ವಾಹನಗಳಿಗೆ ಮಿತಿ ಹೇರಲು ಚಿಂತನೆ ನಡೆಸಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಮತ್ತು ಪೊಲೀಸರು ಈ ಕುರಿತು ಯೋಜನೆ ರೂಪಿಸುತ್ತಿದ್ದಾರೆ.

ನಂದಿಗಿರಿಧಾಮಕ್ಕೆ ಪ್ರವಾಸಿಗರ ಭೇಟಿಗೆ ಹಾಕಿದ್ದ ನಿರ್ಬಂಧ ತೆರವು ಮಾಡಲಾಗಿದೆ. ಪ್ರಸ್ತುತ ಮುಂಜಾನೆ 6 ಗಂಟೆಗೆ ಪ್ರವಾಸಿಗರ ಭೇಟಿಗೆ ಅವಕಾಶ ನೀಡಲಾಗಿದೆ. ಸಾವಿರಾರು ಜನರು ಸುರ್ಯೋದಯ ನೋಡಲು ಆಗಮಿಸುತ್ತಾರೆ.

Tourist Vehicles May Limit For Nandi Hills

ನಂದಿಗಿರಿಧಾಮಕ್ಕೆ ಬರುವ ವಾಹನಗಳಿಗೆ ಮಿತಿ ಹೇರಲು ಚಿಂತನೆ ನಡೆಸಲಾಗಿದೆ. ಇಂತಿಷ್ಟು ವಾಹನಗಳಿಗೆ ಮಾತ್ರ ಪ್ರವೇಶ ಎಂದು ನಿಯಮ ರೂಪಿಸಿ ಉಳಿದ ವಾಹನಗಳನ್ನು ವಾಪಸ್ ಕಳಿಸಲಾಗುತ್ತದೆ. ಇದರಿಂದಾಗಿ ಗಿರಧಾಮದಲ್ಲಿ ಜನರನ್ನು ಸಹ ನಿಯಂತ್ರಣ ಮಾಡಬಹುದು.

ನಂದಿಗಿರಿಧಾಮಕ್ಕೆ ಪ್ರತಿನಿತ್ಯ ನೂರಾರು ಪ್ರವಾಸಿಗರು ಆಗಮಿಸುತ್ತಾರೆ. ವಾರಂತ್ಯದಲ್ಲಿ ಸಾವಿರಾರು ಜನರು ಮುಂಜಾನೆಯೇ ಆಗಮಿಸುತ್ತಾರೆ. ಇದರಿಂದಾಗಿ ನಂದಿಬೆಟ್ಟದಲ್ಲಿ ಟ್ರಾಫಿಕ್ ಜಾಮ್, ಪಾರ್ಕಿಂಗ್ ಸಮಸ್ಯೆ ಉಂಟಾಗುತ್ತಿದೆ.

ವಾಹನಗಳಿಗೆ ನಿರ್ಬಂಧ ಹೇರಿದರೆ ಮೊದಲು ಬಂದ ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಈ ಮೂಲಕ ನಂದಿಗಿರಿಧಾಮದಲ್ಲಿ ಜನರದಟ್ಟಣೆಯನ್ನು ನಿಯಂತ್ರಿಸಬಹುದು ಎಂಬುದು ಜಿಲ್ಲಾಡಳಿತ ಯೋಜನೆಯಾಗಿದೆ.

ಕೋವಿಡ್ ಸಂದರ್ಭದಲ್ಲಿ ಸಾವಿರಾರು ಜನರು ಆಗಮಿಸುತ್ತಿದ್ದಾರೆ. ಸಾಮಾಜಿಕ ಅಂತರ ಕಾಪಾಡಿ, ಮಾಸ್ಕ್ ಧರಿಸಿ ಎಂದು ಪೊಲೀಸರು ಸೂಚನೆ ನೀಡಿದರೂ ಯಾರೂ ಸಹ ಅದನ್ನು ಪಾಲನೆ ಮಾಡುತ್ತಿಲ್ಲ.

ಗುರುವಾರದ ಮಾಹಿತಿಯಂತೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 42 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 11065. ಒಟ್ಟು ಸಕ್ರಿಯ ಪ್ರಕರಣಗಳು 429.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+