• search
  • Live TV
ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನವವಿವಾಹಿತ ಕತ್ತು ಕೊಯ್ದುಕೊಂಡು ಆತ್ಮಹತ್ಯೆ: ಕಾರಣ ನಿಗೂಢ

|

ಚಿಕ್ಕಬಳ್ಳಾಪುರ, ಜನವರಿ 21: ನವವಿವಾಹಿತನೊಬ್ಬ ಕತ್ತುಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಚಾಕವೇಲು ಗ್ರಾಮದಲ್ಲಿ ಘಟನೆ ನಡೆದಿದ್ದು, ಕಾರಣ ಮಾತ್ರ ನಿಗೂಢವಾಗಿದೆ. ನಾಗರಾಜು(25) ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತ. ಳೆದ ಐದು ತಿಂಗಳ ಹಿಂದೆಯಷ್ಟೇ ನಾಗರಾಜ್ ಇದೇ ಗ್ರಾಮದ ವಿಜಯಲಕ್ಷ್ಮಿ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದನು.

ಮೂರನೇ ಹೆಂಡತಿಗೆ ಥಳಿಸಿ ನಾಲ್ಕನೇ ಮದುವೆಗೆ ರೆಡಿಯಾದ ಭೂಪ!

ವೃತ್ತಿಯಲ್ಲಿ ಪೈಂಟರ್ ಆಗಿದ್ದ ನಾಗರಾಜ್ ಮದುವೆಯಾದ ನಂತರ ನೆರೆ ರಾಜ್ಯ ಆಂಧ್ರದ ಕದಿರಿ ಬಳಿ ಪೈಂಟಿಂಗ್ ಕೆಲಸ ಮಾಡಿಕೊಂಡು ಅಲ್ಲಿಯೇ ವಾಸವಾಗಿದ್ದನು.

ಮನೆಯಲ್ಲಿದ್ದ ನಾಗರಾಜ್ ಮನೆಯ ಒಳಭಾಗದಿಂದ ಬಾಗಿಲು ಹಾಕಿಕೊಂಡು ತನ್ನ ಕತ್ತನ್ನು ತಾನೇ ಕೊಯ್ದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ರಕ್ತದ ಮಡುವಿನಲ್ಲಿ ನಾಗರಾಜ್ ಪತ್ತೆಯಾಗಿದ್ದು, ಘಟನೆ ಕಂಡ ಸಂಬಂಧಿಕರು ಶಾಕ್ ಆಗಿದ್ದಾರೆ. ಕೊಲೆಯೂ ಆಗಿರಬಹುದು ಎಂದು ಅಂದಾಜಿಸಲಾಗುತ್ತಿದೆ.

ಚೇಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಇತ್ತೀಚಿಗೆ ಮೃತ ನಾಗರಾಜ್ ತನ್ನ ಮನಸ್ಸಿಗೆ ಯಾಕೋ ಬೇಜಾರಾಗುತ್ತಿದೆ ತಾನು ಸಾಯುವುದಾಗಿ ಸಂಬಂಧಿಕರ ಬಳಿ ಆಗಾಗ ಹೇಳಿಕೊಳ್ಳುತ್ತಿದ್ದನು ಎನ್ನಲಾಗಿದೆ.

English summary
Newly Married man From Chikkaballapur Commit Suicide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X