ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಇಲ್ಲವೇ ಇಲ್ಲ, ಕಾಂಗ್ರೆಸ್ಸೇ ಎಲ್ಲ.!

ಕರ್ನಾಟಕ ವಿಧಾನಸಭೆ ಚುನಾವಣೆ 2018 ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಐದು ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ತೀವ್ರ ಕುತೂಹಲ ಮೂಡಿಸಿದ್ದ ಚಿಂತಾಮಣಿ ಕ್ಷೇತ್ರ ಮಾತ್ರ ಜೆಡಿಎಸ್ ಪಾಲಾಗಿದೆ.

2013 ರ ಚುನಾವಣೆಯಲ್ಲಿ ಚಿಂತಾಮಣಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಡಾ.ಎಂ.ಸಿ.ಸುಧಾಕರ್ ಕೂದಲೆಳೆ ಅಂತರದಲ್ಲಿ ಸೋಲು ಅನುಭವಿಸಿದ್ದರು. ಈ ಬಾರಿ ಆದರೂ ಡಾ.ಎಂ.ಸಿ.ಸುಧಾಕರ್ ಗೆಲ್ಲಬಹುದು ಎಂದು ಊಹಿಸಲಾಗಿತ್ತು.

ಆದ್ರೆ, ಕಳೆದ ಬಾರಿ ಗೆಲುವಿನ ನಗೆ ಬೀರಿದ್ದ ಜೆ.ಕೆ.ಕೃಷ್ಣಾರೆಡ್ಡಿ ಅವರೇ ಈ ಬಾರಿಯೂ ವಿಜಯ ಪತಾಕೆ ಹಾರಿಸಿದ್ದಾರೆ. ಇನ್ನೂ ಗೌರಿಬಿದನೂರು, ಬಾಗೇಪಲ್ಲಿ, ಚಿಕ್ಕಬಳ್ಳಾಪುರ ಹಾಗೂ ಶಿಡ್ಲಘಟ್ಟ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ.

Karnataka Election Results 2018: Chikkaballapur District winners and losers

ಇಂಟ್ರೆಸ್ಟಿಂಗ್ ವಿಷಯ ಅಂದ್ರೆ, ಕಳೆದ ಬಾರಿಯೂ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಡ್ರೆಸ್ ಗೆ ಇರಲಿಲ್ಲ.ಈ ಬಾರಿಯೂ ಅದೇ ಮುಂದುವರೆದಿದೆ.

ಚಿಕ್ಕಬಳ್ಳಾಪುರ ಜಿಲ್ಲೆ ವಿಧಾನಸಭೆ ಕ್ಷೇತ್ರಗಳಲ್ಲಿ ಗೆದ್ದವರು, ಸೋತವರ ವಿವರ ಹೀಗಿದೆ:

ಕ್ಷೇತ್ರ ಗೆದ್ದವರು ಪಕ್ಷ ಗಳಿಸಿದ ಮತಗಳು ಸೋತವರು ಪಕ್ಷ ಗಳಿಸಿದ ಮತಗಳು
ಗೌರಿಬಿದನೂರು ಎನ್.ಎಚ್.ಶಿವಶಂಕರ ರೆಡ್ಡಿ ಕಾಂಗ್ರೆಸ್ 69000 ಸಿ.ಆರ್.ನರಸಿಂಹಮೂರ್ತಿ ಜೆಡಿಎಸ್ 59832
ಬಾಗೇಪಲ್ಲಿ ಎಸ್.ಎನ್.ಸುಬ್ಬರೆಡ್ಡಿ ಕಾಂಗ್ರೆಸ್ 65710 ಜಿ.ವಿ.ಶ್ರೀರಾಮರೆಡ್ಡಿ ಭಾರತೀಯ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸಿಸ್ಟ್) 51697
ಚಿಕ್ಕಬಳ್ಳಾಪುರ ಡಾ.ಕೆ.ಸುಧಾಕರ್ ಕಾಂಗ್ರೆಸ್ 82006 ಕೆ.ಪಿ.ಬಚ್ಚೇಗೌಡ ಜೆಡಿಎಸ್ 51575
ಶಿಡ್ಲಘಟ್ಟ ವಿ.ಮುನಿಯಪ್ಪ ಕಾಂಗ್ರೆಸ್ 76240 ಬಿ.ಎನ್.ರವಿಕುಮಾರ್ ಜೆಡಿಎಸ್ 66531
ಚಿಂತಾಮಣಿ ಜೆ.ಕೆ.ಕೃಷ್ಣಾರೆಡ್ಡಿ ಜೆಡಿಎಸ್ 87753 ಡಾ.ಎಂ.ಸಿ.ಸುಧಾಕರ್ ಭಾರತೀಯ ಪ್ರಜಾ ಪಕ್ಷ 82080
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+