Get Updates
Get notified of breaking news, exclusive insights, and must-see stories!

ಚಿಕ್ಕಬಳ್ಳಾಪುರ ಆದಿಯೋಗಿ ಕೇಂದ್ರದಲ್ಲಿ ನಂದಿ, ತ್ರಿಶೂಲ ಪ್ರತಿಷ್ಠಾಪನೆ: ಮಕರ ಸಂಕ್ರಾಂತಿ ಹಬ್ಬದಂದು ಹರಿದು ಬಂತು ಭಕ್ತರು ಸಾಗರ

ಚಿಕ್ಕಬಳ್ಳಾಪುರ ಜನವರಿ 16: ಮಕರ ಸಂಕ್ರಾಂತಿ ಹಬ್ಬದಂದು ಸದ್ಗುರು ನೇತೃತ್ವದಲ್ಲಿ ಈಶ ಫೌಂಡೇಷನ್‌ ಆದಿಯೋಗಿ ಧ್ಯಾನ ಕೇಂದ್ರದಲ್ಲಿ 21 ಅಡಿಗಳ ನಂದಿ ಮತ್ತು 54 ಅಡಿಯ ಮಹಾ ತ್ರಿಶೂಲವನ್ನು ಪ್ರತಿಷ್ಠಾಪಿಸಲಾಯಿತು.

ಇಲ್ಲಿ 112 ಅಡಿ ಎತ್ತರದ ಆದಿಯೋಗಿಯ ಪ್ರತಿಮೆ ಕಳೆದ ವರ್ಷ ಮಕರ ಸಂಕ್ರಾಂತಿಯಂದೇ ಲೋಕಾರ್ಪಣೆಗೊಳ್ಳುವ ಮೂಲಕ ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಕೇಂದ್ರವು ತಲೆ ಎತ್ತಿದ್ದು, ಬಳಿಕ ನಾಗಮಂಟಪ, ಯೋಗೇಶ್ವರ ಲಿಂಗ ಸ್ಥಾಪಿಸಲಾಗಿದೆ. ಈಗ ಸಾವಿರಾರು ಮಂದಿ ಭಕ್ತರ ಸಮ್ಮುಖದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳೊಂದಿಗೆ ನಂದಿ ಮತ್ತು ಮಹಾಶೂಲವನ್ನು ಪ್ರತಿಷ್ಠಾಪಿಸಲಾಗಿದ್ದು ಮುಂಬರುವ ದಿನಗಳಲ್ಲಿ ಲಿಂಗ ಭೈರವಿ ದೇವಿ, ನವಗ್ರಹ ಮಂಟಪ ಮತ್ತು ಯೋಗ ಸಭಾಂಗಣಗಳೊಂದಿಗೆ ಎರಡು ತೀರ್ಥಕುಂಡಗಳು ಸ್ಥಾಪನೆಯಾಗಲಿವೆ.

Installation of Nandi, Mahasula at Adiyogi Kendra, Chikkaballapur

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಸದ್ಗುರು, ಪ್ರತಿಯೊಂದು ಶಿವನ ದೇವಾಲಯದ ಹೊರಗೆ ಸಾಂಕೇತಿಕವಾಗಿ ನಂದಿಯನ್ನು ಕಾಣಬಹುದು. ಇದು ಅವಿರತ ತಾಳ್ಮೆ, ಧ್ಯಾನಸ್ಥ ಸ್ಥಿತಿಯಲ್ಲಿ ಕಾಯುವಿಕೆಯ ಸಂಕೇತ. ಈ ಗುಣವನ್ನು ಭಾರತೀಯ ಸಂಸ್ಕೃತಿಯಲ್ಲಿ ಶ್ರೇಷ್ಠವಾದುದೆಂದು ಪರಿಗಣಿಸಲಾಗಿದೆ ಎಂದರು.

ಸಾಮಾನ್ಯವಾಗಿ ಜನರು ಧ್ಯಾನವನ್ನು ಒಂದು ಚಟುವಟಿಕೆಯಷ್ಟೇ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಇದರ ಬದಲಿಗೆ ಪ್ರಾರ್ಥನೆಯು ಆಂತರಿಕವಾಗಿ ಅಡಕವಾಗಿರುವ ದೇವರೊಂದಿಗೆ ಮಾತನಾಡುವ ಒಂದು ಮಹಾಪ್ರಯತ್ನ. ಮನಸ್ಸಿನಲ್ಲಿನ ಪ್ರತಿಜ್ಞೆಗಳು, ನಿರೀಕ್ಷೆಗಳು ಸೇರಿದಂತೆ ವಿಚಾರಗಳನ್ನು ನಿವೇದಿಸಿಕೊಳ್ಳುವಂತಹುದು. ಅಸ್ತಿತ್ವವನ್ನು, ಸೃಷ್ಟಿಯ ಅಂತಿಮ ಸ್ವರೂಪವನ್ನು ಆಲಿಸಲು ಸಿದ್ಧರಾಗುವುದು ಎಂದು ತಿಳಿಸಿದರು.

Installation of Nandi, Mahasula at Adiyogi Kendra, Chikkaballapur

ರಾಮಲಲ್ಲಾ ಪ್ರತಿಷ್ಠಾಪನೆಗೆ ಈಗ ಹೋಗಲ್ಲ ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನಾ ಪೂಜಾ ಕಾರ್ಯಕ್ರಮಕ್ಕೆ ಆಹ್ವಾನ ರಾತ್ರಿ 8.30 ನಿಗದಿಯಾಗಿದೆ. ಇದರಲ್ಲಿ 12 ಸಾವಿರ ಭಕ್ತರು ಭಾಗವಹಿಸಲಿದ್ದಾರೆ. ಆದ್ದರಿಂದ ಆ ದಿನದಂದು ನಾನು ಭಾರತದಲ್ಲಿರುವುದಿಲ್ಲ. ಅಯೋಧ್ಯೆಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಸದ್ಗುರು ತಿಳಿಸಿದರು.

ಹೆಚ್ಚಿನ ಜನಸಂದಣಿ 'ಹಬ್ಬದ ವಿಶೇಷ ದಿನದಂದು ದೇಶದ ವಿವಿಧ ಭಾಗಗಳಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಆದಿಯೋಗಿಯ ದರ್ಶನ ಪಡೆದರು. ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ವೀಕ್ಷಿಸಿ ಖುಷಿಪಟ್ಟರು. ನಂದಿ ಮತ್ತು ತ್ರಿಶೂಲಕ್ಕೆ ಎಣ್ಣೆ, ಅರಿಶಿನ ಕುಂಕುಮ ಸೇರಿದಂತೆ ಪೂಜಾ ಸಾಮಗ್ರಿಗಳನ್ನು ಸಮರ್ಪಿಸಿ, ಹರಕೆಯನ್ನು ಹೊತ್ತರು.

ಕಲಾ ಪ್ರದರ್ಶನ

ಸದ್ಗುರು ಸ್ವತಃ ಗಾಯನದ ಮೂಲಕ ಗಮನ ಸೆಳೆದರು. ಶಿವನಾಗಿ ಬಂದ ಲಿಂಗೇಶ್ವರ, ಮಾದೇಶ್ವರ ಹಾಡನ್ನು ಸುಶ್ರಾವ್ಯವಾಗಿ ಹಾಡಿದರು. ಪ್ರಥಮ ಬಾರಿಗೆ ಮಾದೇಶ್ವರ ತಂಡದಿಂದ ಕಂಸಾಳೆ ನೃತ್ಯ ಪ್ರದರ್ಶನವು ಸಾಂಸ್ಕೃತಿಕ ಸಂಜೆಯ ವೈಭವಕ್ಕೆ ಮತ್ತಷ್ಟು ಕಳೆ ತಂದಿತು. ಆದಿಯೋಗಿಗೆ ದೀಪಗಳೊಂದಿಗೆ ಸಾಮೂಹಿಕ ನೃತ್ಯದ ಮೂಲಕ ಮಂಗಳಾರತಿ ಎತ್ತಲಾಯಿತು. ದೈನಂದಿನ ಆದಿಯೋಗಿ ದಿವ್ಯ ದರ್ಶನದ ಜತೆಗೆ ವರ್ಣರಂಜಿತ ಧ್ವನಿ ಮತ್ತು ಬೆಳಕಿನ ವಿಶೇಷ ಲೇಸರ್ ಪ್ರದರ್ಶನಕ್ಕೆ ಹಲವರು ಮೂಕವಿಸ್ಮಿತರಾದರು.

ಒಂದು ವಾರ ಸಂಕ್ರಾಂತಿ ಜಾತ್ರೆ

ಈಶ ಫೌಂಡೇಷನ್ ಕಾಮಗಾರಿ ಪೂರ್ಣಗೊಂಡ ಬಳಿಕ ಒಂದು ವಾರ ಸಂಕ್ರಾಂತಿ ಜಾತ್ರೆ ನಡೆಸಲಾಗುತ್ತದೆ. ಪ್ರತಿದಿನ ಯೋಗ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮ ಕೈಗೊಳ್ಳಲಾಗುತ್ತದೆ ಎಂದು ಸದ್ಗುರು ತಿಳಿಸಿದರು. ಆದಿಯೋಗಿ ಧ್ಯಾನ ಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ

ಅವರು, ಈಗಾಗಲೇ ಆಧ್ಯಾತ್ಮಿಕ ತಾಣದಲ್ಲಿ ಬಿರುಸಿನ ಚಟುವಟಿಕೆ ನಡೆಯುತ್ತಿದೆ. ಇಲ್ಲಿ ಯಾಗ ಶಾಲೆಯೂ ನಿರ್ಮಾಣವಾಗಲಿದೆ ಎಂದರು. ಕಾವೇರಿ ನದಿ ಅಂದೋಲನ, ಗಿಡ ನೆಡಿ ಮತ್ತು ಮಣ್ಣು ಸಂರಕ್ಷಿಸಿ ಅಭಿಯಾನಗಳು ಯಶಸ್ವಿಯಾಗಿ ನಡೆದಿವೆ. ಬರಡು ಭೂಮಿಯು ಹಸಿರಾದಾಗ ನದಿಮೂಲಗಳು ಉಳಿಯಲು ಸಾಧ್ಯವಾಗುತ್ತದೆ. ಈಗಾಗಲೇ ಫೌಂಡೇಷನ್‌ನಿಂದ 9.50 ಕೋಟಿ ಸಸಿಗಳನ್ನು ನೆಡಲಾಗಿದೆ. ಇವುಗಳ ಬೆಳವಣಿಗೆಯ ಬಗ್ಗೆ ಇಸ್ರೋ ಸಂಸ್ಥೆಯ ಮೂಲಕ ನಿಗಾ ವಹಿಸಿ, ಮಾಹಿತಿ ಪಡೆಯಲಾಗಿದೆ ಎಂದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+