Veerappa Moily: ಹೆಚ್‍ಡಿಕೆ ಸಹವಾಸ ಮಾಡಿದರೆ ಉದ್ಧಾರ ಆಗಲ್ಲ: ಎಚ್‌ಡಿಕೆ ಅಧಿಕಾರಕ್ಕಾಗಿ ಯಾರ ಬಳಿ ಬೇಕಾದರೂ ಹೋಗುತ್ತಾರೆ- ಮೊಯ್ಲಿ
ಚಿಕ್ಕಬಳ್ಳಾಪುರ ಜನವರಿ 31: ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಅಧಿಕಾರಕ್ಕಾಗಿ ಯಾರ ಬಳಿಗಾದರೂ ಹೋಗುತ್ತಾರೆ. ಯಾರಿಗಾದರೂ ನಮಸ್ಕರಿಸುತ್ತಾರೆ. ಅವರನ್ನು ಒಪ್ಪಿಕೊಂಡವರು ಗುಂಡಿಗೆ ಬೀಳುವುದಂತು ಖಚಿತ ಏಕೆಂದರೆ ಕುಮಾರಸ್ವಾಮಿಯವರ ಸಹವಾಸ ಮಾಡಿದವರು ಯಾರೂ ಉದ್ಧಾರವಾದ ಇತಿಹಾಸ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿ ವ್ಯಂಗ್ಯವಾಡಿದ್ದಾರೆ.
ನಗರದ ಗುರುರಾಜ ಕಲ್ಯಾಣ ಮಂಟಪದಲ್ಲಿ ಯಲವಹಳ್ಳಿ ಎನ್.ರಮೇಶ್ ಏರ್ಪಡಿಸಿದ್ದ ಸಾಮೂಹಿಕ ಸೀಮಂತ ಕಾರ್ಯಕ್ರಮದಲ್ಲಿ ಭಾಗಿ ವೇಳೆ ಸುದ್ದಿಗಾರರ ಜತೆ ಅವರು ಮಾತನಾಡಿದರು.

ರಾಜ್ಯದಲ್ಲಿ ಮುಂಬರುವ ಲೋಕಸಭೆ ಚುನಾವಣೆ ಯಲ್ಲಿ ಕಾಂಗ್ರೆಸ್ ಅಧಿಕ ಸ್ಥಾನಗಳನ್ನು ಗಳಿಸುತ್ತದೆ. ಆದರೆ, ಇಷ್ಟೇ ಸ್ಥಾನ ಗಳಿಸುತ್ತದೆ ಎಂದು ಖಚಿತವಾಗಿ ಭವಿಷ್ಯ ಹೇಳುವುದಕ್ಕೆ ಬರಲ್ಲ. ರಾಜ್ಯದಲ್ಲಿ ಬಿಜೆಪಿ ಮತ್ತು ಜಾತ್ಯತೀತ ಜನತಾದಳ ಪಕ್ಷ ಚುನಾವಣೆ ರಾಜಕೀಯ ಹೊಂದಾಣಿಕೆ ಮಾಡಿಕೊಂಡಿರುವ ಬಗ್ಗೆ ಅಧಿಕಾರಕ್ಕಾಗಿ ಏನು ಬೇಕಾದರೂ ಅವರು ಮಾತ ನಾಡುತ್ತಾರೆ. ಆದರೆ, ಅವರಿಗೆ ನಷ್ಟವಾಗುವುದು ಖಚಿತ ಎಂದರು.
ನಾನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಎರಡು ಬಾರಿ ಪ್ರತಿನಿಧಿಸಿ ಕೇಂದ್ರದಲ್ಲಿ ಹಲವು ಖಾತೆಗಳನ್ನು ನಿಭಾಯಿಸಿದ್ದೇನೆ. ಮುಂಬರುವ 2024ರ ಚುನಾವಣೆಯಲ್ಲಿ ನನಗೆ ಟಿಕೆಟ್ ನೀಡಿ ಅವಕಾಶ ಮಾಡಿಕೊಟ್ಟರೆ ಕ್ಷೇತ್ರದ ಜನತೆ ನಾನು ಹಿಂದೆ ಮಾಡಿರುವ ಯೋಜನೆಗಳ ಜನಪರ ಕಾರಣ ದಿಂದ ನನ್ನನ್ನು ಬೆಂಬಲಿಸುವರು ಎಂದರು.
ಕುಮಾರಸ್ವಾಮಿಯವರ ತಂದೆಯವರ ಜೊತೆ ನಾನು ಚೆನ್ನಾಗಿ ಇದ್ದ ಕಾಲವೂ ಇದೆ. ಅದೇ ಪ್ರಕಾರ ಕಷ್ಟ ನಷ್ಟ ಅನುಭವಿಸಿದ್ದು ಇದೆ. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕುಮಾರಸ್ವಾಮಿ ಜೊತೆ ಬಹಳ ಜನ ಸ್ನೇಹ ಮಾಡಿದ್ರು, ಯಾರೂ ಉದ್ಧಾರ ಆಗಿಲ್ಲ. ಅವರ ಜೊತೆ ಸ್ನೇಹ ಮಾಡಿದವರು ಗುಂಡಿಗೆ ಬೀಳುತ್ತಾರೆ. ಬಿಜೆಪಿ (BJP) ಉದ್ಧಾರ ಆಗುವುದಾದರೆ ಆಗಲಿ ಎಂದಿದ್ದಾರೆ.
ವಿಶ್ವದ ಇತರ ಎಲ್ಲ ರಾಷ್ಟ್ರಗಳಲ್ಲಿ ರಾಜಕಾರಣದ ಮೇಲೆ ಧರ್ಮ ಪ್ರಭಾವ ಬೀರುವುದು ಕಡಿಮೆ ಆಗುತ್ತಿದೆ. ಆದರೆ ಭಾರತ ದೇಶದಲ್ಲಿ ದುರ ದೃಷ್ಟಾವಶಾತ್ ರಾಜಕಾರಣದ ಮೇಲೆ ಧರ್ಮದ ಪ್ರಭಾವ ಹೆಚ್ಚುತ್ತಿದೆ. ಇದು ಪ್ರಜಾ ಪ್ರಭುತ್ವಕ್ಕೆ ಮಾರಕ ಎಂದು ಹೇಳಿದರು.
ನರೇಂದ್ರ ಮೋದಿ ಅವರ ಉಪವಾಸದ ಬಗ್ಗೆ ನಾನು ಹೇಳಿರುವ ಹೇಳಿಕೆಯನ್ನು ತಿರುಚಿ ಪ್ರಚಾರ ಮಾಡಲಾಗುತ್ತಿದೆ. ಡಾಕ್ಟರ್‌ಗಳು ಹೇಳಿರುವುದನ್ನು ನಾನು ಹೇಳಿದ್ದೇನೆ ಹೊರತು ಮೋದಿ ಅವರು 11 ದಿನ ಮಾಡಿದ ಉಪವಾಸದ ಬಗ್ಗೆ ಪ್ರತಿಕ್ರಿಯೆ ನನ್ನ ಸ್ವಂತದಲ್ಲ ಎಂದರು. ನಿತೀಶ್ ಕುಮಾರ್ ಅವರು ಮಹಾ ಘಟಬಂಧನ್ ಇಂದ ದೂರವಾದ್ದರಿಂದ ಘಟಬಂಧನ್‌ಗೆ ಯಾವುದೇ ತೊಂದರೆ ಆಗುವುದಿಲ್ಲ ಅವರು ಇಂದಲ್ಲ ನಾಳೆ ಆದರೂ ಹೋಗುವವರೇ ಆಗಿದ್ದರು ಎಂದರು.











Click it and Unblock the Notifications