ಚಿಕ್ಕಬಳ್ಳಾಪುರ: ಬಿಜೆಪಿಗೆ ಆರಂಭಿಕ ಮುನ್ನಡೆ, ಹಿನ್ನಡೆಯಲ್ಲಿ ಮೊಯ್ಲಿ

ಚಿಕ್ಕಬಳ್ಳಾಪುರ, ಮೇ 23: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ ವೀರಪ್ಪ ಮೋಯ್ಲಿ ಅವರು ಬಿಜೆಪಿ ಅಭ್ಯರ್ಥಿ ವಿರುದ್ಧ ಹಿನ್ನಡೆ ಅನುಭವಿಸುತ್ತಿದ್ದಾರೆ.

ಅಂಚೆ ಮತ ಎಣಿಕೆ ಮತ್ತು ಎರಡು ಹಂತದ ಮತದಾನ ಮುಗಿಯುವ ವೇಳೆಗೆ ಬಚ್ಚೇಗೌಡ ಅವರು 26234 ಮತ ಗಳಿಸಿದ್ದರೆ, ವೀರಪ್ಪ ಮೊಯ್ಲಿ ಅವರು 19151 ಮತಗಳನ್ನು ಗಳಿಸಿದ್ದಾರೆ.

ಬಿಜೆಪಿಯ ಬಚ್ಚೇಗೌಡ ಅವರು 7083 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಕಳೆದ ಬಾರಿ ಸೋಲನುಭವಿಸಿರುವ ಬಚ್ಚೇಗೌಡ ಅವರು ಈ ಬಾರಿ ಗೆಲುವಿನ ಭರವಸೆ ವ್ಯಕ್ತಪಡಿಸಿದ್ದರು.

Chikkaballapura lok sabha election result 2019

ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ವೀರಪ್ಪ ಮೊಯ್ಲಿ ಅವರು ಕಳೆದ ಬಾರಿಗಿಂತ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದರು.

ಎರಡನೇ ಹಂತದ ಮತದಾನ ಅಂತ್ಯದ ವೇಳೆಗೆ ಬಚ್ಚೇಗೌಡರಿಗೆ 15000 ಮುನ್ನಡೆ ಸಾಧಿಸಿದ್ದಾರೆ. ಬಚ್ಚೇಗೌಡ ಅವರಿಗೆ 50,128 ಮತಬಂದಿದ್ದರೆ, ವೀರಪ್ಪ ಮೊಯ್ಲಿ ಅವರಿಗೆ 35,578 ಮತಗಳಿಸಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ 13 ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+