Chikkaballapur: ರಸ್ತೆಗೆ ಚಾಚಿದ ಗಿಡಗಳಿಂದಾಗಿ ಸಂಚಾರಕ್ಕೆ ಅಡ್ಡಿ: ಅಪಘಾತಗಳ ತಾಣವಾದ ಕೆರೆ!
ಚಿಕ್ಕಬಳ್ಳಾಪುರ ಡಿಸೆಂಬರ್ 5: ಗುಡಿಬಂಡೆ-ಪೆರೇಸಂದ್ರ ಮೂಲಕ ಚಿಕ್ಕಬಳ್ಳಾಪುರ ತಾಲೂಕು ಮತ್ತು ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು ಪ್ರತಿನಿತ್ಯ ಸಾವಿರಾರು ವಾಹನಗಳು ಇದೇ ರಸ್ತೆಯಲ್ಲಿ ಸಂಚಾರ ನಡೆಸುತ್ತವೆ. ರಸ್ತೆಯ ಇಕ್ಕೆಲಗಳಲ್ಲಿ ಗಿಡ ಗಂಟೆಗಳು ಬೆಳೆದು ರಸ್ತೆಯ ಎರಡು ಬದಿ ಚಾಚಿ ಕೊಂಡಿರುವುದರಿಂದ ರಸ್ತೆಯ ತಿರುವುಗಳಲ್ಲಿ ಎದುರುಗಡೆ ಬರುವ ವಾಹನಗಳು ಕಾಣಿಸದೆ ಹಲವು ಅಪಘಾತಗಳಾಗಿದ್ದು ವಾಹನ ಸವಾರರು ಪ್ರತಿನಿತ್ಯ ತೊಂದರೆ ಅನುಭವಿಸುವಂತಾಗಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ ಹೋಬಳಿಯ ಕಮ್ಮಗುಟ್ಟಹಳ್ಳಿ ಗ್ರಾ.ಪಂ ವ್ಯಾಪ್ತಿಯ ಬೊಮ್ಮಗಾನಹಳ್ಳಿ ಹಾಗೂ ರೇಣುಮಾಕಲಹಳ್ಳಿ ಗ್ರಾಮಗಳ ನಡುವಿನ ಹೊಸಕೆರೆಯ ಏರಿ ಅಪಘಾತಗಳ ತಾಣವಾಗಿ ಮಾರ್ಪಟ್ಟಿದ್ದು ಇದಕ್ಕೇಲ್ಲ ಕಾರಣ ರಸ್ತೆ ಬದಿಯಲ್ಲಿ ಬೆಳೆದು ನಿಂತಿರುವ ಗಿಡಗಂಟಿ ಗಳು ಎದರು ಬಂದಿಯಿಂದ ಬರುವ ವಾಹನಗಳು ಕಾಣಿಸದೆ ಪ್ರಾಣವನ್ನು ಅಂಗೈನಲ್ಲಿಟ್ಟುಕೊಂಡು ಸಂಚರಿಸಿದರು ಅಪಾಯ ತಪ್ಪಿದ್ದಲ್ಲ ಎಂಬ ಪರಿಸ್ಥಿತಿ ಉದ್ಭವಿಸಿದೆ.

ಪಾದಚಾರಿ ರಸ್ತೆ ದಾಟಿದ ಗಿಡಗಂಟಿಗಳು :
ಜಾಲಿ ಗಿಡಗಳು, ಕಾಡು ಜಾತಿಯ ಗಿಡ ಗಂಟಿಗಳು ಬೆಳೆದು ರಸ್ತೆಗೆ ಚಾಚಿ ಕೊಂಡಿವೆ. ಬೈಕ್‌ಗಳಲ್ಲಿ ಸಂಚರಿಸುವ ಸವಾರರಿಗೆ ಮುಳ್ಳುಗಳು ಕೈಕಾಲು, ಮುಖಕ್ಕೆ ತಾಗಿ ಗಾಯಗಳನ್ನು ಮಾಡಿಕೊಂಡಿರುವ ನಿದರ್ಶನ ವಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಜಂಗಲ್ ತೆರವುಗೊಳಿಸುವಂತೆ ಅಗ್ರಹಿಸಿದ್ದಾರೆ.
ರಸ್ತೆ ಬದಿ ಪ್ರಪಾತ, ತಡೆಗೋಡೆಗೆ ಆಗ್ರಹ:
ಪಿಜಿ ರಸ್ತೆಯ ಬೊಮ್ಮಗಾನಹಳ್ಳಿ ಬಳಿಯ ಮೋರಿ ಪಕ್ಕ ದೊಡ್ಡ ಪ್ರಪಾತವಿದ್ದು, ವಾಹನಗಳ ಸವಾರರು ಆತಂಕದಲ್ಲಿ ಸಂಚರಿಸುವಂತಾಗಿದ್ದು, ತಡೆಗೋಡೆ ನಿರ್ಮಿಸುವಂತೆ ಕಳೆದ 2 ವರ್ಷಗಳಿಂದ ಒತ್ತಾಯಿಸಿದ್ದರೆ. ಈ ರಸ್ತೆಯಲ್ಲಿ ಚಲಿಸುವ ವಾಹನಗಳು ಸ್ವಲ್ಪ ಯಾಮಾರಿದರು ಸಹ ರಸ್ತೆ ಬದಿಯಲ್ಲೇ ಇರುವ ಸುಮಾರು 15 ಅಡಿ ಆಳದ ಪ್ರಪಾತದಲ್ಲಿ ಬೀಳಲಿವೆ.

ತಿರುವುಗಳಲ್ಲಿ ಕಾಣಿಸದ ಫಲಕಗಳು:
ರಸ್ತೆ ಬದಿ ಬೆಳೆದು ನಿಂತಿರುವ ಬೃಹದಾಕಾರದ ಮರಗಳಿಂದ ತಿರುವುಗಳಿರುವ ಕಡೆ ಅಳವಡಿಸಿರುವ ಎಚ್ಚರಿಕೆ ಫಲಕಗಳಾಗಲಿ, ರಸ್ತೆಯಲ್ಲಿ ಸಂಚರಿಸುವ ವಾಹನಗಳಾಗಲಿ ತೀರಾ ಹತ್ತಿರಕ್ಕೆ ಬರುವ ತನಕ ಕಾಣಿಸುವುದಿಲ್ಲ ಹಾಗಾಗಿ ಮರಗಿಡಗಳನ್ನು ತೆರವು ಗೊಳಿಸಿ ನಾಮಫಲಕಗಳು ಕಾಣಿಸುವಂತೆ ಮಾಡಬೇಕೆನ್ನುವುದು ವಾಹನ ಸವಾರರ ಕಳಕಳಿಯಾಗಿದೆ.
ಚರಂಡಿಗಳ ನಿರ್ಮಾಣವಿಲ್ಲ :
ನೂತನವಾಗಿ ನಿರ್ಮಾಣ ಮಾಡಿರುವ ರಸ್ತೆಯ ಎರಡು ಬದಿ ನೀರು ಸರಾಗವಾಗಿ ಹರಿದುಹೋಗಲು ಕಾಲುವೆಗಳನ್ನು ಹಾಗೂ ಗ್ರಾಮಗಳಲ್ಲಿ ಚರಂಡಿಗಳನ್ನು ನಿರ್ಮಾಣ ಮಾಡದ ಕಾರಣ ರಸ್ತೆಯಲ್ಲಿ ಬೀಳುವ ನೀರು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿ ಮಾಡುತ್ತಿದ್ದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಗ್ರಾಮಸ್ಥರು ಸಮಸ್ಯೆ ಅನುಭವಿಸುವಂತೆ ಆಗಿದೆ ಎಂಬ ಆರೋಪ ವ್ಯಕ್ತವಾಗಿದೆ.
ರೇಣುಮಾಕಲಹಳ್ಳಿ ಹಾಗೂ ಬೊಮ್ಮಗಾನಹಳ್ಳಿ ನಡುವೆ ಬರುವ ಹೊಸಕೆರೆ ಕಟ್ಟೆಯ ಎರಡು ಬದಿ ವಿವಿಧ ಗಿಡ ಗಂಟಿಗಳು ಮುಗಿಲೆತ್ತರ ಬೆಳೆದು ನಿಂತಿದ್ದು ರಸ್ತೆಯ ತಡೆಗೋಡೆಗಳು ಕಾಣಿಸದಂತಾಗಿದ್ದು, ಹೊಸದಾಗಿ ರಸ್ತೆ ಅಭಿವೃದ್ಧಿ ಪಡಿಸಿದ ಗುತ್ತಿಗೆದಾರರ ಗಮನಕ್ಕೆ ತಂದರೆ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಅನುಮತಿ ಕೊಡಿಸಿದರೆ ನಾವು ತೇರವುಗೊಳಿಸುತ್ತೆವೆಂಬ ಉತ್ತರ ನೀಡುತ್ತಿದ್ದು ವಾಹನ ಸಂಚಾರ ಕಷ್ಟಕರವಾಗಿದೆ. ಸಂಬಂಧಪಟ್ಟ ಅಧಿಕಾರಿಗಲು ಕೂಡಲೇ ಕ್ರಮ ತೆಗೆದುಕೊಂಡು ಗಿಡಗಂಟೆಗಳನ್ನು ತೆರವುಗೊಳಿಸಲಿ.
ಶಿವರಾಜ್, ವಾಹನ ಸವಾರ
ಗ್ರಾಮಗಳಲ್ಲಿರುವ ಮೋರಿಗಳ ಬಳಿ ತಡೆಗೋಡೆ ನಿರ್ಮಾಣ ಮಾಡಿಲ್ಲ, ಗ್ರಾಮಗಲ್ಲಿ ರಸ್ತೆ ನಿರ್ಮಿಸಿದ ಸಂದರ್ಭದಲ್ಲಿ ನೀರು ಹರಿದು ಹೋಗಲು ರಸ್ತೆ ಪಕ್ಕ ಚರಂಡಿಗಳನ್ನು ನಿರ್ಮಾಣ ಮಾಡಿಲ್ಲ ಇದರಿಂದ ರಸ್ತೆ ಪಕ್ಕ ಸಂಚಾರಿಸುವಾಗ ಒಂದು ಅಡಿ ರಸ್ತೆ ಬಿಟ್ಟು ವಾಹನ ಪಕ್ಕಕ್ಕೆ ಹೋದರು ಹತ್ತು ಇಪ್ಪತ್ತು ಅಡಿ ಆಳ ಹೊಂದಿರುವ ಪ್ರತಾಪಕ್ಕೆ ವಾಹನಗಳು ಬೀಳುವುದು ಗ್ಯಾರೆಂಟಿ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ












Click it and Unblock the Notifications