Chikkaballapur Lok Sabha Election: ಲೋಕಸಭಾ ಚುನಾವಣೆಗೆ ಸಕಲ ಸಿದ್ದತೆ: ಜಿಲ್ಲಾಧಿಕಾರಿ ಪಿಎನ್ ರವೀಂದ್ರ

ಚಿಕ್ಕಬಳ್ಳಾಪುರ ಮಾರ್ಚ್ 18: 2024ರ ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆ ನಡೆಸಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಚುನಾವಣಾ ನೀತಿ ಸಂಹಿತೆಯ ಪಾಲನೆಗೆ ಅಗತ್ಯ ತುರ್ತು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪಿ.ಎನ್.ರವೀಂದ್ರ ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ "ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿ ಕುರಿತು" ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆ ವ್ಯಾಪ್ತಿಯಲ್ಲಿ 08 ವಿಧಾನಸಭಾ ಕ್ಷೇತ್ರಗಳು ಬರಲಿದ್ದು, ಈ ಕ್ಷೇತ್ರಗಳಿಂದ ಪ್ರಸ್ತುತ ಒಟ್ಟು 19,66,067 ಮತದಾರರಿದ್ದು, ಈ ಪೈಕಿ 9,76,436 ಪುರುಷರು, 9,89,369 ಮಹಿಳೆಯರು ಹಾಗೂ 262 ತೃತೀಯ ಲಿಂಗಿ ಮತದಾರರಿದ್ದು, ಅವರೆಲ್ಲರಿಗೂ ಚುನಾವಣಾ ಗುರುತಿನ ಚೀಟಿಯನ್ನು ವಿತರಿಸಲಾಗಿರುತ್ತದೆ. ಅಲ್ಲದೇ ಮಾರ್ಚ್ 25 ರೊಳಗೆ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ನೋಂದಣಿಯಾಗುವ ಮತದಾರರಿಗೂ ಸಹ ಮತದಾನಕ್ಕೆ ಅವಕಾಶವಿರುತ್ತದೆ ಎಂದು ಮಾಹಿತಿ ನೀಡಿದರು.

All preparedness for Lok Sabha election in chikkaballapura Said District Collector PN Ravindra

ಕ್ಷೇತ್ರದಲ್ಲಿ 85 ವರ್ಷಕ್ಕೂ ಮೇಲ್ಪಟ್ಟ 18,809 ಮತದಾರರು ಹಾಗೂ ವಿಕಲಚೇತನ 26559 ಮತದಾರರಿದ್ದು, ಅವರೆಲ್ಲರ ಮಾಹಿತಿಯನ್ನು ಪಡೆದು ಇಚ್ಚಿಸಿದವರಿಗೆ ಮನೆ ಮತದಾನಕ್ಕೂ ಸಹ ಅವಕಾಶ ಕಲ್ಪಿಸಲಾಗುವುದು. ಮತದಾನ ಮಾಡಲು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಮತಗಟ್ಟೆಗಳನ್ನು ಸಿದ್ದಪಡಿಸಿಕೊಂಡು ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿರುತ್ತದೆ. ಈ ಪೈಕಿ 44 ಅತೀ ಸೂಕ್ಷ್ಮ (Vulnerable PS) ಹಾಗೂ 382 ಸೂಕ್ಷ್ಮ(Critical PS) ಮತಗಟ್ಟೆಗಳನ್ನು ಗುರುತಿಸಲಾಗಿದೆ. 2,326 ಮತಗಟ್ಟೆಗಳ ಪೈಕಿ ಶೇ. 50 ರಷ್ಟು ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಸೌಲಭ್ಯವನ್ನು ಮಾಡಲಾಗುತ್ತದೆ ಎಂದು ತಿಳಿಸಿದರು.

ಚುನಾವಣಾ ಕರ್ತವ್ಯಗಳಿಗೆ ಯಾವುದೇ ಅಡೆತಡೆಯಾಗದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ತರಬೇತಿ ನೀಡಿ ನಿಯೋಜಿಸಲಾಗಿದೆ. ಪ್ರಸ್ತುತ ಒಟ್ಟು 14,880 ಸಿಬ್ಬಂದಿಯನ್ನು ನಿಯೋಜಿಸಿದ್ದು, ಈ ಪೈಕಿ 196 ಸೆಕ್ಟರ್ ಅಧಿಕಾರಿಗಳು, ತಲಾ 2557 ಪಿ.ಆರ್.ಓಗಳು, ಎ.ಪಿ.ಆರ್.ಓ, ಪಿ.ಓ-1, ಪಿ.ಓ-2 ಹಾಗೂ ಡಿ ಗ್ರೂಪ್ ಸಿಬ್ಬಂದಿಯನ್ನು ಮೀಸಲಿಡಲಾಗಿದೆ. ಅಗತ್ಯಕ್ಕೆ ತಕ್ಕಷ್ಟು ವಿದ್ಯುನ್ಮಾನ ಮತಯಂತ್ರಗಳನ್ನು ಸಹ ಸಿದ್ದಪಡಿಸಿಕೊಳ್ಳಲಾಗಿದೆ ಎಂದರು.

ಚುನಾವಣಾ ಸಂದರ್ಭದಲ್ಲಿ ಯಾವುದೇ ಅಭ್ಯರ್ಥಿಗಳು ಮತದಾರರಿಗೆ ಆಮಿಷ ವೊಡ್ಡುವ ವಸ್ತುಗಳನ್ನು ವಿತರಿಸುವುದು ಕಂಡುಬಂದಲ್ಲಿ ಕೂಡಲೆ ಸಾರ್ವಜನಿಕರು cVIGIL App ಮುಖಾಂತರ ದೂರು ಸಲ್ಲಿಸಿದರೆ 100 ನಿಮಿಷಗಳ ಒಳಗಡೆ ಕ್ರಮವಹಿಸಲಾಗುವುದು. ಅಲ್ಲದೆ ಚುನಾವಣೆಗೆ ಸಂಬಂಧಿಸಿದ ಮಾಹಿತಿ ಹಾಗೂ ಮತದಾರರ ನೋಂದಣಿಗೆ ಸಂಬಂಧಿಸಿದಂತೆ Voter helpline ಮೂಲಕ ಸಂಪರ್ಕಿಸಬಹುದು. ಜೊತೆಗೆ ಟೋಲ್ ಫ್ರೀ ನಂ. 1950 ಕರೆ ಮಾಡಿ ತಿಳಿಸಬಹುದು. ಚುನಾವಣೆಗೆ ಸಂಬಂಧ ಪಟ್ಟಂತೆ ಸಭೆ ಸಮಾರಂಭ, ಮೆರವಣಿಗೆ ಇನ್ನಿತರ ಅನುಮತಿಗೆ ಏಕಗವಾಕ್ಷಿ ಪದ್ದತಿ ಮೂಲಕ ಕ್ರಮವಹಿಸಲಾಗಿದ್ದು, Suvidha App ಮುಖಾಂತರ ಅನುಮತಿಗೆ ಅರ್ಜಿ ಸಲ್ಲಿಸಬಹುದು. ವಿಶೇಷ ಚೇತನರು ಮನೆ ಮತದಾನಕ್ಕಾಗಿ Saksham App ಮೂಲಕ ನೋಂದಣಿಯಾಗಬಹುದು ಎಂದು ತಿಳಿಸಿದರು.

All preparedness for Lok Sabha election in chikkaballapura Said District Collector PN Ravindra

ಚೆಕ್ ಪೋಸ್ಟ್ ಗಳು

ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 37 ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದ್ದು, ಅಕ್ರಮ ಹಣ, ಮದ್ಯ, ಬಹುಮಾನ ನೀಡುವ ವಸ್ತುಗಳು ಸೇರಿದಂತೆ ಎಲ್ಲಾ ಅಕ್ರಮ ಸಾಗಾಟವನ್ನು ತಡೆಗಟ್ಟಲು ಇಂದಿನಿಂದಲೆ ಚೆಕ್ ಪೋಸ್ಟ್ ಗಳು ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ. ಎಲ್ಲಾ ಚೆಕ್ ಪೋಸ್ಟ್ ಗಳಿಗೆ 3 ಪಾಳಿಗಳಲ್ಲಿ ಅಧಿಕಾರಿಗಳನ್ನು ಮತ್ತು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿರುತ್ತದೆ ಈ ಎಲ್ಲಾ ಕಾರ್ಯಗಳನ್ನು ನಿಗಾಯಿಡಲು ಸಿಸಿ ಕ್ಯಾಮೇರಗಳನ್ನು ಅಳವಡಿಸಲಾಗುತ್ತಿದೆ ಎಂದರು.

ಮಾದರಿ ನೀತಿ ಸಂಹಿತೆ

ಮಾದರಿ ನೀತಿ ಸಂಹಿತೆಯು ಈ ತಕ್ಷಣದಿಂದ ಕ್ಷೇತ್ರದಾದ್ಯಂತ ಜಾರಿಯಲ್ಲಿರುತ್ತದೆ. 24 ಗಂಟೆಯೊಳಗೆ ಸರ್ಕಾರಿ ಅಧೀನದಲ್ಲಿರುವ ಸರ್ಕಾರಿ ಕಟ್ಟಡಗಳಲ್ಲಿ, 48 ಗಂಟೆಯೊಳಗೆ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ 72 ಗಂಟೆಗಳೊಳಗೆ ಖಾಸಗಿ ಸ್ಥಳಗಳಲ್ಲಿರುವ ಎಲ್ಲಾ ಜಾಹೀರಾತು, ಬಿತ್ತಿಚಿತ್ರಗಳು, ಬಂಟಿಂಗ್, ಬ್ಯಾನರ್ಸ್, ಪೋಸ್ಟರ್ ಗಳನ್ನು ತೆರವುಗೊಳಿಸಬೇಕು. 24 ಗಂಟೆಯೊಳಗೆ ಸರ್ಕಾರಿ ಕಚೇರಿಗಳ ಸಾಮಾಜಿಕ ಜಾಲತಾಣಗಳಲ್ಲಿರುವ ಎಲ್ಲಾ ಜನ ಪ್ರತಿನಿಧಿಗಳ ವಿವರ ಮತ್ತು ರಾಜಕೀಯ ವ್ಯಕ್ತಿಗಳ ಭಾವಚಿತ್ರಗಳನ್ನು ತೆರವುಗೊಳಿಸಲು ಕ್ರಮವಹಿಸಲು ಈಗಾಗಲೇ ಸೂಚನೆ ನಿಡಲಾಗಿದೆ ಎಂದು ತಿಳಿಸಿದರು.

ಚುನಾವಣಾ ವೇಳಾಪಟ್ಟಿ

ಅಧಿಸೂಚನೆ ಹೊರಡಿಸುವ ದಿನಾಂಕ ಮಾರ್ಚ್ 28, ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 04, ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ ಏಪ್ರಿಲ್ 05, ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ ಏಪ್ರಿಲ್ 08 ಮತ್ತು ಮತದಾನ ನಡೆಯುವ ದಿನಾಂಕ ಏಪ್ರಿಲ್ 26, ಮತ ಎಣಿಕೆ ದಿನಾಂಕ ಜೂನ್ 04 ಹಾಗೂ ಚುನಾವಣೆ ಮುಕ್ತಾಯಗೊಳ್ಳುವ ದಿನಾಂಕ ಜೂನ್ 6 ಆಗಿರುತ್ತದೆ. ಒಟ್ಟಾರೆ ಮುಕ್ತ ನ್ಯಾಯ ಸಮ್ಮತ, ಪಾರದರ್ಶಕ ಚುನಾವಣೆ ನಡೆಸಲು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಮಸ್ತ ನಾಗರೀಕರು ಮಾದರಿ ನೀತಿ ಸಂಹಿತೆ ಪಾಲಿಸುವ ಮೂಲಕ ಸಹಕರಿಸಬೇಕು. ಈ ಹಿಂದಿಗಿಂತಲು ಮತದಾನದ ಪ್ರಮಾಣ ಅಧಿಕವಾಗಲು ಚುನಾವನಾ ಮತದಾನದಲ್ಲಿ ತಾವೆಲ್ಲರೂ ಸಕ್ರೀಯವಾಗಿ ಭಾಗವಹಿಸಬೇಕೆಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ.ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್, ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಚುನಾವಣಾ ತಹಸೀಲ್ದಾರ್ ಮುನಿಶಾಮಿರೆಡ್ಡಿ ಹಾಗೂ ಇತರರು ಇದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+