ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕಬಳ್ಳಾಪುರ: ಕ್ಷಯ ಮುಕ್ತಕ್ಕೆ 12 ಗ್ರಾಮ ಪಂಚಾಯಿತಿಗಳ ಆಯ್ಕೆ

|
Google Oneindia Kannada News

ಚಿಕ್ಕಬಳ್ಳಾಪುರ, ಸೆ.27 : ಜಿಲ್ಲೆಯನ್ನು 2025 ರ ವೇಳೆಗೆ ಕ್ಷಯ ರೋಗ ಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲಾ ಮಟ್ಟದ ಅಧಿಕಾರಿಗಳು ಪಣ ತೊಡಬೇಕು. ಕ್ಷಯ ರೋಗದಿಂದ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಪೌಷ್ಠಿಕ ಆಹಾರ ಹಾಗೂ ಆರ್ಥಿಕ ಬೆಂಬಲ ನೀಡಿ ಎಂದು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಆದೇಶಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ಕೇಂದ್ರ ಸಹಯೋಗದಲ್ಲಿ ನಡೆದ "ಕ್ಷಯ ನಿರ್ಮೂಲನಾ ಜಿಲ್ಲಾ ಅಂತರ್ ಇಲಾಖೆಯ ಸಮನ್ವಯ ಸಭೆ"ಯಲ್ಲಿ ಮಾತನಾಡಿದ್ದಾರೆ.

ಉತ್ತರದ ರಾಜ್ಯಗಳಂತೆ ಕರ್ನಾಟಕವೂ ಕೋಮು ಪ್ರಯೋಗಾಲಯವಾಗುತ್ತಿದೆ: ಪಿಣರಾಯಿ ವಿಜಯನ್ಉತ್ತರದ ರಾಜ್ಯಗಳಂತೆ ಕರ್ನಾಟಕವೂ ಕೋಮು ಪ್ರಯೋಗಾಲಯವಾಗುತ್ತಿದೆ: ಪಿಣರಾಯಿ ವಿಜಯನ್

"ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 2025 ರ ವೇಳೆಗೆ ಕ್ಷಯ ರೋಗ ಮುಕ್ತ ಭಾರತ ನಿರ್ಮಾಣದ ಗುರಿ ಹೊಂದಿವೆ. 2022 ನೇ ಸಾಲಿನ ಆಗಸ್ಟ್ ಅಂತ್ಯಕ್ಕೆ ಜಿಲ್ಲೆಯಲ್ಲಿ ಸುಮಾರು 800 ಕ್ಷಯ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ 10 ಕ್ಷಯ ರೋಗಿಗಳನ್ನು "ನಿಕ್ಷಯ್ ಮಿತ್ರ" ಅಡಿ ದತ್ತು ಪಡೆದಿದ್ದೇನೆ. ಹಾಗೇಯೇ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಇತರ ಸರ್ಕಾರಿ ಅಧಿಕಾರಿಗಳು ಸಹ ಕನಿಷ್ಠ ಒಬ್ಬ ಕ್ಷಯರೋಗಿಯನ್ನು ದತ್ತು ಪಡೆದುಕೊಂಡು ಅಗತ್ಯ ಸವಲತ್ತುಗಳನ್ನು ನೀಡಬೇಕು" ಎಂದು ಸೂಚಿಸಿದ್ದಾರೆ.

ಯಾರು“ನಿಕ್ಷಯ್ ಮಿತ್ರ’ರಾಗಿ ನೊಂದಾಯಿಸಿಕೊಳ್ಳಬಹುದು?

ಯಾರು“ನಿಕ್ಷಯ್ ಮಿತ್ರ’ರಾಗಿ ನೊಂದಾಯಿಸಿಕೊಳ್ಳಬಹುದು?

2025 ರ ವೇಳೆಗೆ ಭಾರತವನ್ನು ಕ್ಷಯ ಮುಕ್ತವನ್ನಾಗಿಸುವ ಮಹತ್ತರ ಉದ್ದೇಶವನ್ನು ಸರ್ಕಾರ ಹೊಂದಿದೆ. ಈ ಅಭಿಯಾನದಡಿಯಲ್ಲಿ ಚಿಕಿತ್ಸೆಯನ್ನು ಕ್ಷಯರೋಗಿಯನ್ನು ದತ್ತು ಪಡೆದುಕೊಂಡು ಅವರಿಗೆ ಅಗತ್ಯವಾದ ಪೌಷ್ಠಿಕ ಆಹಾರ, ಆರೋಗ್ಯ ಚಿಕಿತ್ಸೆ ಮತ್ತು ಮನೋಸ್ಥೈರ್ಯ, ಕೌಶಲ್ಯ ತರಬೇತಿ ನೀಡಬಹುದು. ಯಾವುದೇ ಸಂಘ ಸಂಸ್ಥೆಗಳು, ವ್ಯಾಪಾರಿಗಳು, ಜನಪ್ರತಿನಿಧಿಗಳು, ಅಧಿಕಾರಿಗಳು, ಸಮಾಜ ಸೇವಕರು ಇತರೆ ಯಾವುದೇ ಖಾಸಗಿ ವ್ಯಕ್ತಿಗಳು ಕನಿಷ್ಠ 1 ರಿಂದ 3 ವರ್ಷಗಳ ಅವಧಿಗೆ "ನಿಕ್ಷಯ್ ಮಿತ್ರ'ರಾಗಿ ನೋಂದಾಯಿಸಿಕೊಂಡು ಪೌಷ್ಟಿಕ ಆಹಾರವನ್ನು ವಿತರಿಸಬಹುದು.

ಜೊತೆಗೆ ರೋಗಿಯನ್ನು ನೇರವಾಗಿ ಸಂಪರ್ಕಿಸಿ ಅವರಿಗೆ ಅಗತ್ಯವಾಗಿರುವ ಮೂಲ ಸೌಕರ್ಯಗಳನ್ನು ಸಹ ಒದಗಿಸಬಹುದು. ಜೊತೆಗೆ ಸರ್ಕಾರದ ವತಿಯಿಂದ ನೋಂದಣಿಗೊಂಡ ಪ್ರತಿ ಕ್ಷಯ ರೋಗಿಗೆ ಚಿಕಿತ್ಸೆ ಪೂರ್ಣವಾಗುವವರೆಗೆ, ಪ್ರತಿ ತಿಂಗಳು 500 ರೂಪಾಯಿಯನ್ನು ರೋಗಿಯ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತಿದೆ ಎಂದಿದ್ದಾರೆ.

12 ಕ್ಷಯ ಮುಕ್ತ ಗ್ರಾಮ ಪಂಚಾಯಿತಿಗಳ ಆಯ್ಕೆ

12 ಕ್ಷಯ ಮುಕ್ತ ಗ್ರಾಮ ಪಂಚಾಯಿತಿಗಳ ಆಯ್ಕೆ

"2025 ರ ವೇಳೆಗೆ ಕ್ಷಯಮುಕ್ತ ಗ್ರಾಮ ಪಂಚಾಯಿತಿಗಳನ್ನಾಗಿಸಲು ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ 12 ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಲಾಗಿದೆ. ಈ ಪೈಕಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಮಂಚನಬಲೇ, ಆಗಲಗುರ್ಕಿ, ಚಿಂತಾಮಣಿ ತಾಲ್ಲೂಕಿನ ಕೋನಂಪಲ್ಲಿ, ಕಾಗತಿ, ಗೌರಿಬಿದನೂರಿನ ಮಂಚೇನಹಳ್ಳಿ, ಹುಡಗೂರು, ಬಾಗೇಪಲ್ಲಿ ತಾಲ್ಲೂಕಿನ ಪರಗೋಡು, ದೇವರ ಗುಡಿಪಲ್ಲಿ, ಶಿಡ್ಲಘಟ್ಟ ತಾಲ್ಲೂಕಿನ ದೊಡ್ಡತೇಕಹಳ್ಳಿ, ಸಾದಲಿ, ಹಾಗೂ ಗುಡಿಬಂಡೆ ತಾಲ್ಲೂಕಿನ ಬೀಚ್ ಗಾನಹಳ್ಳಿ, ತಿರುಮಣಿ ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ.

ಕ್ಷಯ ರೋಗದ ಕುರಿತು ಶಾಲಾ ಕಾಲೇಜುಗಳಲ್ಲಿ ಅರಿವು ಮೂಡಿಸಿ

ಕ್ಷಯ ರೋಗದ ಕುರಿತು ಶಾಲಾ ಕಾಲೇಜುಗಳಲ್ಲಿ ಅರಿವು ಮೂಡಿಸಿ

"ಕ್ಷಯ ರೋಗವನ್ನು ಪ್ರಾಥಮಿಕ ಹಂತದಲ್ಲಿಯೇ ನಿರ್ಮೂಲನೆ ಮಾಡಬೇಕು. ರೋಗ ಲಕ್ಷಣ ಕಂಡು ಬಂದಲ್ಲಿ ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ಹೋಗಿ ತಪಾಸಣೆಗೊಳಪಟ್ಟು ಸಕಾಲಕ್ಕೆ ಆರೋಗ್ಯದ ಚಿಕಿತ್ಸೆ ಪಡೆದುಕೊಳ್ಳಬೇಕು. ರಾಜ್ಯದಲ್ಲಿ ಕ್ಷಯ ಪರೀಕ್ಷೆ ಮಾಡುವ ಇಗ್ರಾ ಕೇಂದ್ರ (ಐ.ಜಿ.ಆರ್.ಎ) ಗಳನ್ನು ಮೂರು ಜಿಲ್ಲೆಗಳಲ್ಲಿ ಮಾತ್ರ ತೆರೆದಿದ್ದು, ಈ ಪೈಕಿ ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಸ್ಪತ್ರೆಯಲ್ಲಿ ಸ್ಥಾಪನೆಯಾಗಿರುವ ಇಗ್ರಾ ಕೇಂದ್ರವು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ. ಕ್ಷಯರೋಗ ಲಕ್ಷಣ ಕಂಡು ಬಂದವರು ಕೂಡಲೇ ಇಲ್ಲಿ ಉಚಿತವಾಗಿ ತಪಾಸಣೆ ಮಾಡಿಸಿಕೊಳ್ಳಬಹುದು. ಈ ಪರೀಕ್ಷೆಗೆ ಖಾಸಗಿ ಕೇಂದ್ರಗಳಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ದರವನ್ನು ನಿಗದಿ ಮಾಡಿರುತ್ತಾರೆ. ಆದರೆ ಜಿಲ್ಲಾಸ್ಪತ್ರೆಯಲ್ಲಿ ಸಂಪೂರ್ಣ ಉಚಿತವಾಗಿರುತ್ತದೆ" ಎಂದಿದ್ದಾರೆ.

ಆಶಾ ಕಾರ್ಯಕರ್ತೆಯರು, ಸಮುದಾಯ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಭೇಟಿ ಕೊಟ್ಟು ಕ್ಷಯ ರೋಗದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಜೊತೆಗೆ ಪ್ರಾಥಮಿಕ ಹಂತದಲ್ಲಿ ಶಾಲಾ-ಕಾಲೇಜುಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚು ಅರಿವು ಮೂಡಿಸಬೇಕು. ಈ ನಿಟ್ಟಿನಲ್ಲಿ ತಮ್ಮ ಅಧೀನ ಅಧಿಕಾರಿ ಮತ್ತು ಸಿಬ್ಬಂದಿಗೆ ಸೂಚಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಸೂಚನೆ ನೀಡಿದ್ದಾರೆ.

ರೋಗದಿಂದ ಗುಣಮುಖರಾದವರು ಕ್ಷಯರೋಗ ಚಾಂಪಿಯನ್ಸ್!

ರೋಗದಿಂದ ಗುಣಮುಖರಾದವರು ಕ್ಷಯರೋಗ ಚಾಂಪಿಯನ್ಸ್!

ಕ್ಷಯರೋಗದ ವಿರುದ್ಧ ಹೋರಾಡಿ ರೋಗಮುಕ್ತರಾದವರನ್ನು "ಕ್ಷಯರೋಗ ಚಾಂಪಿಯನ್ಸ್" ಎಂದು ಗುರುತಿಸಿ ಸನ್ಮಾನಿಸಲಾಯಿತು. ಸನ್ಮಾನಿತ ವ್ಯಕ್ತಿಯು "ನಿಕ್ಷಯ ಮಿತ್ರ"ದ ಮೂಲಕ ಇಬ್ಬರು ಕ್ಷಯ ರೋಗಿಗಳನ್ನು ದತ್ತು ಪಡೆದಿದ್ದಾರೆ. ಈ ವೇಳೆ ಜಿಲ್ಲಾಧಿಕಾರಿಗಳು ಕ್ಷಯರೋಗಿಗಳಿಗೆ ಪೌಷ್ಠಿಕ ಆಹಾರ, ದಿನಸಿಯ ಕಿಟ್‌ ಅನ್ನು ವಿತರಿಸಿದ್ದಾರೆ.

ಈ ಸಂದರ್ಭದಲ್ಲಿ ಕ್ಷಯರೋಗ ನಿರ್ಮೂಲನೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಆರೋಗ್ಯ ಇಲಾಖೆ ಮತ್ತು ಪಶುಪಾಲನ ಇಲಾಖೆಯಿಂದ ಹೊರತಂದಿರುವ ಕರಪತ್ರ, ಭಿತ್ತಿಪತ್ರಗಳನ್ನು ಜಿಲ್ಲಾಧಿಕಾರಿಗಳು ಬಿಡುಗಡೆಗೊಳಿಸಿದ್ದಾರೆ.

ಕ್ಷಯರೋಗದ ಲಕ್ಷಣಗಳು

ಕ್ಷಯರೋಗದ ರೋಗ ಲಕ್ಷಣಗಳೆಂದರೆ ದೇಹದಲ್ಲಿ ನಿಶ್ಯಕ್ತಿ, ಎದೆನೋವು, ಕೆಮ್ಮಿದಾಗ ರಕ್ತ ಬರುವುದು, ಮೈ ನಡುಕ, ಹಸಿವಾಗದಿರುವುದು, 2 ವಾರಕ್ಕಿಂತ ಹೆಚ್ಚು ಕೆಮ್ಮು, ಜ್ವರ, ಸಂಜೆ/ರಾತ್ರಿ ಮೈ ಬೆವರುವಿಕೆ ಹಾಗೂ ತೂಕ ಕಡಿಮೆಯಾಗುವುದು ಸೇರಿವೆ.

English summary
Chikkaballapur; 12 gram panchayats Selected for tuberculosis free says DC N.M. Nagaraj. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X