ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೋಗ ಹೀಗೂ ಮಾಡಬಹುದು, ವಿಜಯ್ ಕಾಂತ್ ಫನ್ನಿ ವಿಡಿಯೋ

By Mahesh
|
Google Oneindia Kannada News

ಚೆನ್ನೈ, ಜೂ.23: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ದಿನ ವಿವಿಧ ರೀತಿ ಆಸನಗಳನ್ನು ನೀವು ನೋಡಿರಬಹುದು. ವಿಶ್ವ ಯೋಗ ದಿನಾಚರಣೆ ಗಿನ್ನಿಸ್ ರೆಕಾರ್ಡ್ ಕೂಡಾ ಆಗಬಹುದು, ಅದರೆ, ತಮಿಳು ನಟ ಕಮ್ ರಾಜಕಾರಣಿ ವಿಜಯ್ ಕಾಂತ್ ರಂತೆ ಯೋಗ ಮಾಡಲು ಸಾಧ್ಯವಿಲ್ಲ ಬಿಡಿ.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಪ್ರಮುಖ ರಾಜಕಾರಣಿಗಳು ಯೋಗಾಭ್ಯಾಸ ಮಾಡಿದರು. ದಕ್ಷಿಣ ಭಾರತದಲ್ಲೂ ಯೋಗ ದಿನಾಚರಣೆ ಚೆನ್ನಾಗೇ ನಡೆಯಿತು. ಚೆನ್ನೈ ನಲ್ಲಿ ಮಾತ್ರ ದೇಶಿಯ ಮುರ್ಪೊಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಮುಖ್ಯಸ್ಥ ಕಮ್ ನಟ ವಿಜಯ್ ಕಾಂತ್ ಅವರು ಕೂಡಾ ಸಾರ್ವಜನಿಕವಾಗಿ ಯೋಗಾಭ್ಯಾಸ ಮಾಡಿದರು.

Vijaykanth

ಸುಮಾರು 100ಕ್ಕೂ ಅಧಿಕ ಕಾರ್ಯಕರ್ತರೊಡನೆ ಯೋಗಾಭ್ಯಾಸ ಮಾಡುವ ಸಾಹಸಕ್ಕೆ ಕೈ ಹಾಕಿದ ಕ್ಯಾಪ್ಟನ್ ವಿಜಯ್ ಕಾಂತ್ ಅವರಿಗೆ ಯುವ ಕಾರ್ಯಕರ್ತರೇ ಗುರುಗಳಾಗಿದ್ದರು. ಅದರೆ, ಗುರುಗಳು ಹೇಳಿದ ಮಾತುಗಳು ಅನುಸರಿಸಲು ವಿಫಲರಾದ ಕ್ಯಾಪ್ಟನ್ ಮಾಡಿದ ಭಂಗಿಗಳಿಗೆ ಹೆಸರಿಡುವುದು ಕಷ್ಟ.

ಕೊನೆಗೆ ಅನುಲೋಮ, ವಿಲೋಮ ಎನ್ನುತ್ತಾ ಪ್ರಾಣಾಯಾಮ ಮಾಡಲು ಸಿದ್ದರಾದ ಕ್ಯಾಪ್ಟನ್ ಗೆ ಯಾವ ಬೆರಳು ಬಳಸಬೇಕು ಎಂಬುದು ತಿಳಿಯದೆ ಕನ್ ಫ್ಯೂಸ್ ಆದರು.

ಅಂತಿಮವಾಗಿ ಯೋಗದ ಬಗ್ಗೆ ಮಾತನಾಡಿದ 62 ವರ್ಷ ವಯಸ್ಸಿನ ವಿಜಯ್ ಕಾಂತ್, ಎಲ್ಲರೂ ಯೋಗ ಮಾಡಬೇಕು ಇದರಿಂದ ಶಾಂತಿ, ಆರೋಗ್ಯ ಸಿಗುತ್ತಾದೆ. ನಾನು 108 ಪದ್ಮಾಸನ ನಿರಂತರವಾಗಿ ಮಾಡುತ್ತಿದ್ದೆ. ಹೀಗಾಗಿ ಈಗಲೂ ನಾನು ಫಿಟ್ ಆಗಿದ್ದೇನೆ ಎಂದಿದ್ದಾರೆ. ಅದರೆ, ಏಳು ನಿಮಿಷಗಳ ವಿಡಿಯೋ ನೋಡಿದರೆ ವಿಜಯ್ ಕಾಂತ್ ಯೋಗಾಭ್ಯಾಸ ನಗು ತರಿಸದೇ ಇರದು.

English summary
First International Day of Yoga observed on June 21 worldwide. In Tamil Nadu, Desiya Murpokku Dravida Kazhagam (DMDK) chief Vijayakanth became a laughing stock, with his hilarious attempt at performing yoga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X