ವೈರಲ್; ಲಾಕ್‌ಡೌನ್‌ ನಡುವೆ ವಿಮಾನದಲ್ಲಿ ಮದುವೆಯಾಗಿ ಸುದ್ದಿಯಾದ ಜೋಡಿ

ಚೆನ್ನೈ, ಮೇ 24: ತಮಿಳುನಾಡಿನಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮೇ 31ರವರೆಗೂ ಲಾಕ್‌ಡೌನ್ ವಿಸ್ತರಿಸಲಾಗಿದೆ. ಸಂಪೂರ್ಣ ಲಾಕ್‌ಡೌನ್ ಇದ್ದರೂ, ವಾರದಲ್ಲಿ ಒಂದು ದಿನ ರಿಯಾಯಿತಿ ನೀಡಿ, ವೀಕೆಂಡ್‌ನಲ್ಲಿ ರಾತ್ರಿ 9 ಗಂಟೆವರೆಗೂ ಅಂಗಡಿಗಳಿಗೆ ಅನುಮತಿ ನೀಡಲಾಗಿದೆ.

ಈ ನಡುವೆ ಮೇ 23ರಂದು ವಿಮಾನದಲ್ಲಿ ಮದುವೆಯಾಗುವ ಮೂಲಕ ತಮಿಳುನಾಡಿನ ಜೋಡಿ ಸುದ್ದಿಯಾಗಿದೆ. ರಾಕೇಶ್ ಹಾಗೂ ದೀಕ್ಷನಾ ಮಧುರೈ-ತೂತುಕುಡಿ ವಿಮಾನದಲ್ಲಿ ತಮ್ಮ ಆತ್ಮೀಯ ಸ್ನೇಹಿತರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಮಧುರೈ ಮೂಲದ ಈ ಜೋಡಿ ಸ್ಪೈಸ್‌ ಜೆಟ್ ವಿಮಾನವನ್ನು ಬಾಡಿಗೆಗೆ ಪಡೆದುಕೊಂಡು ವಿಮಾನದಲ್ಲೇ ಮದುವೆಯಾಗಿದೆ. 130 ಅತಿಥಿಗಳು ಭಾಗವಹಿಸಿದ್ದು, ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದೀಕ್ಷನಾ ಹಾಗೂ ರಾಕೇಶ್ ಕಳೆದ ವಾರವೇ ಖಾಸಗಿ ಸಮಾರಂಭ ಏರ್ಪಡಿಸಿ ಮದುವೆಯಾಗಿದ್ದರು. ಆದರೆ ರಾಜ್ಯದಲ್ಲಿ ಒಂದು ದಿನ ಲಾಕ್‌ಡೌನ್ ವಿನಾಯಿತಿ ಘೋಷಿಸುತ್ತಿದ್ದಂತೆಯೇ ವಿಮಾನದಲ್ಲಿ ಮದುವೆಯಾಗುವ ಯೋಜನೆ ರೂಪಿಸಿದ್ದಾರೆ. ತಮ್ಮ ಮದುವೆ ದಿನವನ್ನು ಸ್ಮರಣೀಯವಾಗಿಸಿಕೊಳ್ಳಲು "ವಿಮಾನ ವಿವಾಹ" ಮಾಡಿಕೊಂಡಿರುವುದಾಗಿ ಹೇಳಿದ್ದಾರೆ.

Viral News Tamil Nadu Couple Married On Airplane During Lockdown

ವಿಮಾನದಲ್ಲಿದ್ದ ಎಲ್ಲಾ 130 ಮಂದಿ ತಮ್ಮ ಸಂಬಂಧಿಗಳಾಗಿದ್ದು, ಎಲ್ಲರೂ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಂಡಿದ್ದೇವೆ. ಎಲ್ಲರ ವರದಿಯೂ ನೆಗೆಟಿವ್ ಬಂದಿದೆ ಎಂದು ಹೇಳಿದ್ದಾರೆ.

ಆದರೆ ವಿಮಾನ ಸಿಬ್ಬಂದಿಗೆ ಮದುವೆಯ ಮಾಹಿತಿ ಇರಲಿಲ್ಲ ಎಂದು ವಿಮಾನ ನಿಲ್ದಾಣ ನಿರ್ದೇಶಕ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಡಿಸಿಜಿಐ ಸ್ಪೈಸ್ ಜೆಟ್‌ನಿಂದ ವರದಿ ಕೇಳಿದ್ದು, ಕೊರೊನಾ ನಿಯಮ ಉಲ್ಲಂಘನೆ ಕುರಿತು ತನಿಖೆಗೆ ಮುಂದಾಗಿದೆ.

Viral News Tamil Nadu Couple Married On Airplane During Lockdown

ಶುಕ್ರವಾರ ತಮಿಳುನಾಡಿನಲ್ಲಿ 36 ಸಾವಿರ ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಲಾಕ್ಡೌನ್ ವಿಸ್ತರಣೆ ಮಾಡಲಾಗಿತ್ತು. ಹೊಸ ಮಾರ್ಗಸೂಚಿಗಳನ್ನು ಹೊರಡಿಸಲಾಗಿತ್ತು.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+