ವಿಡಿಯೋ; ಶಾಲೆ ಆರಂಭ, ವಿದ್ಯಾರ್ಥಿಗಳಿಗೆ ಸ್ವಾಗತ ಕೋರಿದ ಆನೆ
ಚೆನ್ನೈ, ನವೆಂಬರ್ 02; ಕೋವಿಡ್ ಪರಿಸ್ಥಿತಿ ಬಳಿಕ ಮೊದಲ ಬಾರಿಗೆ ತಮಿಳುನಾಡು ಸರ್ಕಾರ ಶಾಲೆಗಳ ಪುನರಾರಂಭ ಮಾಡಿದೆ. 19 ತಿಂಗಳ ಬಳಿಕ 1 ರಿಂದ 8ನೇ ತರಗತಿ ವಿದ್ಯಾರ್ಥಿಗಳು ಸೋಮವಾರ ಶಾಲೆಗಳಿಗೆ ಆಗಮಿಸಿದ್ದಾರೆ.
ರಾಜ್ಯದ ವಿವಿಧ ಭಾಗದಲ್ಲಿ ಶಾಲೆಗಳಲ್ಲಿ ಮಕ್ಕಳನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಆರತಿ ಬೆಳಗಿ, ಸಿಹಿ ತಿಂಡಿಕೊಟ್ಟು ಶಿಕ್ಷಕರು, ಶಾಲೆಯ ಆಡಳಿತ ಮಂಡಳಿ ಸದಸ್ಯರು ಮಕ್ಕಳನ್ನು ಬರಮಾಡಿಕೊಂಡರು. ಮಕ್ಕಳು ಸಹ ಸಂತಸದಿಂದಲೇ ಶಾಲೆಗಳಿಗೆ ಆಗಮಿಸಿದರು.
ಶಿವಗಂಗಾದಲ್ಲಿ ಶಾಲೆಗೆ ಆಗಮಿಸಿದ ಮಕ್ಕಳಿಗೆ ಅಚ್ಚರಿ ಕಾದಿತ್ತು. ಶಾಲೆಗೆ ಆಗಮಿಸುವ ಮಕ್ಕಳನ್ನು ಆನೆ ಸ್ವಾಗತಿಸುತ್ತಿತ್ತು. ಇದು ಅರಿಮುಗು ಷಣ್ಮಗನಾಥ ದೇವಾಲಯದ ಆನೆಯಾಗಿದೆ. ಮಕ್ಕಳನ್ನು ಸ್ವಾಗತಿಸಲು ಆನೆಯನ್ನು ಶಾಲೆಗೆ ಕರೆಸಲಾಗಿತ್ತು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶಿಕ್ಷಕರು ಮಕ್ಕಳಿಗೆ ಸಿಹಿ ತಿಂಡಿಗಳನ್ನು ಕೊಟ್ಟು, ವಾದ್ಯಗಳೊಂದಿಗೆ ಶಾಲೆಗೆ ಸ್ವಾಗತಿಸಿದರು. ಆಗ ಆನೆ ಪಕ್ಕದಲ್ಲಿಯೇ ನಿಂತು ಸೊಂಡಿಲು ಬೀಸುತ್ತಾ ಮಕ್ಕಳನ್ನು ಬರಮಾಡಿಕೊಂಡಿತು. ಶಾಲೆಯ ಆವರಣದಲ್ಲಿ ಆನೆಯನ್ನು ಕಂಡ ಮಕ್ಕಳು ಸಹ ಸಂತಸಗೊಂಡರು.
ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ 2020ರ ಮಾರ್ಚ್‌ನಲ್ಲಿ ಶಾಲೆಗಳನ್ನು ಮುಚ್ಚಲಾಗಿತ್ತು. ನವೆಂಬರ್ 1ರಿಂದ ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿತ್ತು. ಕೋವಿಡ್ ಮಾರ್ಗಸೂಚಿಗಳ ಅನ್ವಯ ಶಾಲೆಗಳಲ್ಲಿ ತರಗತಿಗಳನ್ನು ಆರಂಭಿಸಲಾಗಿದೆ.
ದೇಶದಲ್ಲಿ ಕೋವಿಡ್ ಪರಿಸ್ಥಿತಿ ಹತೋಟಿಯಲ್ಲಿದೆ. ವಿವಿಧ ರಾಜ್ಯಗಳಲ್ಲಿ ಶಾಲೆಗಳನ್ನು ಆರಂಭಿಸಲಾಗಿದೆ. ನವೆಂಬರ್ 1ರಂದು ದೇಶದಲ್ಲಿ 12,514 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ.
ಮಕ್ಕಳಿಗೆ ಸ್ವಾಗತ ಕೋರಿದ ಆನೆ
#WATCH | As schools in Sivaganga, Tamil Nadu reopened yesterday, students from classes 1 to 8 received a warm welcome by an elephant from Arulmigu Shanmuganathan temple. pic.twitter.com/8Uok60VoD2
— ANI (@ANI) November 1, 2021












Click it and Unblock the Notifications