ವೀಡಿಯೊ: ನಾಯಿಯನ್ನು ರಸ್ತೆ ದಾಟಿಸಲು ವಾಹನಗಳನ್ನು ತಡೆದ ಪೊಲೀಸ್

ಚೆನ್ನೈ, ಮೇ 28: ಸಾಮಾನ್ಯವಾಗಿ ವಿಐಪಿಗಳು ಬರುವಾಗ ಪೊಲೀಸರು ಟ್ರಾಫಿಕ್ ಕ್ಲೀಯರ್ ಮಾಡುವುದಿದೆ. ಇದರಿಂದ ಎಷ್ಟೋ ಸಲ ಜನರು ತೊಂದರೆ ಕೂಡಾ ಅನುಭವಿಸಿದ್ದಾರೆ. ಇನ್ನು ಕೆಲವು ಬಾರಿ ವೃದ್ಧರು, ವಿಶೇಷ ಚೇತನರು ಬಂದಾಗ ವಾಹನಗಳನ್ನು ತಡೆದು ಟ್ರಾಫಿಕ್ ಪೊಲೀಸರು ಸಹಾಯ ಮಾಡುವುದಿದೆ.

ಆದರೆ ಚೆನ್ನೈನ ಈ ಪೊಲೀಸ್ ಪೇದೆ ಇನ್ನೂ ವಿಶೇಷ. ನಾಯಿ ದಾಟಲು ಇವರು ರಸ್ತೆಯಲ್ಲಿ ವಾಗನಗಳನ್ನಿ ನಿಲ್ಲಿಸಿದ್ದಾರೆ. ನಾಯಿ ರಸ್ತೆ ದಾಟಿದ ನಂತರ ವಾಹನ ತೆರಳಲು ಅನುವು ಮಾಡಿಕೊಟ್ಟಿದ್ದಾರೆ. ಪೊಲೀಸ್ ಪೇದೆ ವಾಹನ ನಿಲ್ಲಿಸುತ್ತಿದ್ದಂತೆ ನಾಯಿ ರಸ್ತೆ ದಾಟಿ ಓಡಿ ಹೋಗಿದೆ.

Video: Dog wants to cross the road, Traffic police stops vehicle to help

ನಾಯಿಗೆ ರಸ್ತೆ ದಾಟಬೇಕಾಗಿದೆ ಎಂದು ಪೊಲೀಸ್ ಅದು ಹೇಗೆ ಅರ್ಥ ಮಾಡಿಕೊಂಡನೋ ಗೊತ್ತಿಲ್ಲ. ಪೊಲೀಸ್ ವಾಹನ ನಿಲ್ಲಿಸುತ್ತಾನೆ ಎಂದು ನಾಯಿಗೆ ಹೇಗೆ ತಿಳಿಯಿತು ಎನ್ನುವುದೂ ಗೊತ್ತಿಲ್ಲ. ಆದರೆ ಪೊಲೀಸ್ ವಾಹನ ನಿಲ್ಲಿಸುವವರೆಗೆ ಕಾದು, ವಾಹನ ನಿಲ್ಲುತ್ತಿದ್ದಂತೆ ಶಿಸ್ತಾಗಿ ನಾಯಿ ರಸ್ತೆ ದಾಟಿದೆ.

ಈ ಎಲ್ಲಾ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವೀಡಿಯೋವನ್ನು ಸಾರ್ವಜನಿಕರೊಬ್ಬರು ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದು ಭರ್ಜರಿ ಪ್ರತಿಕ್ರಿಯೆ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+