• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಡಿಎಂಕೆ ಯುವ ಘಟಕ ಕಾರ್ಯದರ್ಶಿಯಾಗಿ ಉದಯನಿಧಿ ಸ್ಟಾಲಿನ್ ನೇಮಕ

|

ಚೆನ್ನೈ, ಜುಲೈ 4: ನಟ- ನಿರ್ಮಾಪಕ ಉದಯನಿಧಿ ಸ್ಟಾಲಿನ್ ಅವರು ಡಿಎಂಕೆ ಯುವ ಘಟಕದ ಕಾರ್ಯದರ್ಶಿಯಾಗಿ ಗುರುವಾರ ನೇಮಕವಾಗಿದ್ದಾರೆ. ಡಿಎಂಕೆ ಅಧ್ಯಕ್ಷರಾದ ಎಂ.ಕೆ.ಸ್ಟಾಲಿನ್ ಅವರ ಮಗ, ನಲವತ್ತೊಂದು ವರ್ಷದ ಉದಯನಿಧಿ ಅವರು ಮಾಜಿ ಶಾಸಕರಾದ ವೆಲ್ಲಕೋವಿಲ್ ಎಂ.ಪಿ.ಸ್ವಾಮಿನಾಥನ್ ನಿರ್ವಹಣೆ ಮಾಡುತ್ತಿದ್ದ ಈ ಹುದ್ದೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

ಡಿಎಂಕೆ ಸೇರಿದ ಟಿಟಿವಿ ದಿನಕರನ್ ಆಪ್ತ ತಮಿಳ್ ಸೆಲ್ವನ್

ಸ್ವಾಮಿನಾಥನ್ ಅವರನ್ನು ಬಿಡುಗಡೆ ಮಾಡಿ, ಉದಯನಿಧಿ ಅವರನ್ನು ನೇಮಿಸಲಾಗಿದೆ ಎಂದು ಡಿಎಂಕೆ ಪ್ರಧಾನ ಕಾರ್ಯದರ್ಶಿ ಕೆ.ಆನ್ಬಳಗನ್ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಂದ ಹಾಗೆ ಡಿಎಂಕೆ ಯುವ ಘಟಕದ ಕಾರ್ಯದರ್ಶಿಯಾಗಿ ಮೂರು ದಶಕಗಳ ಕಾಲ ಸ್ಟಾಲಿನ್ ಕಾರ್ಯ ನಿರ್ವಹಿಸಿದ್ದರು.

ಉದಯನಿಧಿ ಸ್ಟಾಲಿನ್ ತಮಿಳಿನ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಜತೆಗೆ ಸಿನಿಮಾ ನಿರ್ಮಾಣ ಕೂಡ ಮಾಡಿದ್ದಾರೆ. ಮೂರು ವರ್ಷದ ಹಿಂದಷ್ಟೇ ಅವರು ಪೂರ್ಣ ಪ್ರಮಾಣದಲ್ಲಿ ರಾಜಕೀಯ ಪ್ರವೇಶ ಮಾಡಿದ್ದಾರೆ. ಸದ್ಯಕ್ಕೆ ಉದಯನಿಧಿ ಅವರು ಡಿಎಂಕೆಗೆ ಸೇರಿದ ಮುರಸೋಳಿ ಟ್ರಸ್ಟ್ ನ ಕಾರ್ಯ ನಿರ್ವಾಹಕ ನಿರ್ದೇಶಕರಾಗಿದ್ದಾರೆ.

English summary
Udayanidhi Stalin appointed as DMK youth wing secretary on Thursday. Udayanidhi actor and producer of Tamil movies. Currently managing director of Murusoli trust.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X