ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಪತ್ತೆಯಾಗಿದ್ದ ಡೊರ್ನಿಯರ್ ವಿಮಾನ ಶನಿವಾರ ಪತ್ತೆ

By ಒನ್ಇಂಡಿಯಾ ಡಿಫೆನ್ಸ್ ಪ್ರತಿನಿಧಿ
|
Google Oneindia Kannada News

ಚೆನ್ನೈ, ಜೂ. 13 : ಸೋಮವಾರ ನಾಪತ್ತೆಯಾಗಿದ್ದ ಭಾರತೀಯ ಕರಾವಳಿ ಪಡೆಯ ಡೊರ್ನಿಯರ್ ವಿಮಾನ ಶನಿವಾರ ಪತ್ತೆಯಾಗಿದೆ ಎಂದು ಇಂಡಿಯನ್ ಕೋಸ್ಟ್ ಗಾರ್ಡ್ ಅಧಿಕಾರಿಗಳು ಹೇಳಿದ್ದಾರೆ. ನಾಪತ್ತೆಯಾಗಿದ್ದ ವಿಮಾನದ ಸೋನಾರ್ ಲೊಕೇಷನ್ ಬೀಕನ್ ನಿಂದ ತಡೆತಡೆದು ಪ್ರಸರಣ ಬರುತ್ತಿದೆ ಎಂದು ಐಎನ್ಎಸ್ ಸಂಧ್ಯಕ್ ಪತ್ತೆ ಹಚ್ಚಿದೆ.

ಕಳೆದ 110 ಗಂಟೆಗಳಿಂದ ಐಎನ್ಎಸ್ ಸಂಧ್ಯಕ್ ಸೇರಿದಂತೆ ನೌಕಾದಳದ ಅತ್ಯಾಧುನಿಕ ಸಲಕರಣೆಗಳಿದ್ದ ಹಲವಾರು ಹಡಗುಗಳು ಡೊರ್ನಿಯರ್ ಪತ್ತೆಯಲ್ಲಿ ತೊಡಗಿದ್ದವು. ಯಾವ ಸ್ಥಳದಲ್ಲಿ ನಾಪತ್ತೆಯಾಗಿದ್ದ ವಿಮಾನ ಏರ್ ಟ್ರಾಫಿಕ್ ರಾಡಾರ್‌ನ ನಿಯಂತ್ರಣ ಕಳೆದುಕೊಂಡಿತ್ತೋ ಅದೇ ಸ್ಥಳದಲ್ಲಿ ಡೊರ್ನಿಯರ್ ವಿಮಾನ ಪತ್ತೆಯಾಗಿದೆ.

Transmission detected from missing Dornier?

ಈ ಸ್ಥಳದಲ್ಲಿ ಹಲವು ಬಣ್ಣಗಳುಳ್ಳ ತೈಲದ ವೃತ್ತಗಳು ಕಂಡುಬಂದಿದ್ದು, ತೈಲದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಭಾರತೀಯ ಸಾಗರ ತಂತ್ರಜ್ಞಾನ ಸಂಸ್ಥೆ ಕೂಡ ತನ್ನ ಸಂಶೋಧನಾ ನೌಕೆಯನ್ನು ಈ ಜಾಕಕ್ಕೆ ಕಳುಹಿಸಿದೆ.

ಪತ್ತೆ ಕಾರ್ಯದಲ್ಲಿ ಐಸಿಜಿ ಸಾರಂಗ್, ಅಮೇಯಾ, ಅಭೀಕ್, ರಾಜ್ ತರಂಗ್, ಸಿ-415, ಐಸಿ-119, ಐಸಿ-120, ಐಎನ್ಎಸ್ ಖುಕ್ರಿ, ಚೆಟ್ಲಟ್, ಕೋರಾದಿವ್ ಮತ್ತು ಕಾರ್ನಿಕೋಬಾರ್ ತೊಡಗಿಕೊಂಡಿವೆ. ಸೋಮವಾರ ನಾಪತ್ತೆಯಾಗಿದ್ದ ವಿಮಾನದಲ್ಲಿ ಮೂವರು ಜನರಿದ್ದರು.

English summary
The Indian Coast Guard officials said on Saturday that INS Sandhyak, undertaking sub-surface search for the missing Dornier, has detected intermittent transmission of 37.5 Khz, likely to be from the Sonar Locator Beacon (SLB) of the aircraft. An official said that for the past 110 hours various naval and ICG assets have been conducting non-stop search operations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X