ಇನ್ಫಿ ಟೆಕ್ಕಿ ಸ್ವಾತಿ ಕೊಂದ ರಾಮ ಆತ್ಮಹತ್ಯೆಗೆ ಶರಣು

Posted By:
Subscribe to Oneindia Kannada

ಚೆನ್ನೈ, ಸೆ.18: ಇನ್ಫೋಸಿಸ್ ಉದ್ಯೋಗಿ ಸ್ವಾತಿ ಹತ್ಯೆ ಪ್ರಕರಣದ ಏಕೈಕ ಆರೋಪಿ ತಿರುನಲ್ವೇಲಿ ಮೂಲದ ರಾಮ್ ಕುಮಾರ್ ದುರಂತ ಸಾವನ್ನಪ್ಪಿದ್ದಾನೆ. ಇಲ್ಲಿನ ಪುಳಲ್ ಸೆರೆಮನೆಯಲ್ಲಿ ಲೈವ್ ವೈರ್ ಕಡಿದು ವಿದ್ಯುತ್ ಹರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಚೆನ್ನೈನ ನುಂಗಂಬಾಕ್ಕಂ ರೈಲು ನಿಲ್ದಾಣದಲ್ಲಿ ಜೂನ್ 24 ರಂದು ಸ್ವಾತಿ ಹತ್ಯೆ ನಡೆದಿತ್ತು. ಬಂಧಿತ ಆರೋಪಿ ರಾಮ ಕುಮಾರ್ (22) ಈ ಮುಂಚೆ ಕೂಡಾ ಆತ್ಮಹತ್ಯೆಗೆ ಯತ್ನಿಸಿದ್ದ. ಪೊಲೀಸರ ಕಣ್ಣಿಗೆ ಮೊದಲ ಬಾರಿಗೆ ಬಿದ್ದಾಗ ಕುತ್ತಿಗೆ ಕೊಯ್ದುಕೊಂಡು ಆತ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದ. ಆದರೆ, ಆಗ ಬದುಕುಳಿದಿದ್ದ. [ಹತ್ಯೆಯಾದ ಇನ್ಫಿ ಸ್ವಾತಿಗೆ ಮತ್ತೊಬ್ಬ ಕಪಾಳಮೋಕ್ಷ ಮಾಡಿದ್ದ!]

Ramkumar

ಆದರೆ, ಭಾನುವಾರದಂದು ರಾಮ್ ಕುಮಾರ್ ಮೈಮೇಲೆ ವಿದ್ಯುತ್ ಹರಿಸಿಕೊಂಡು ಕುಸಿದು ಬಿದ್ದಿದ್ದಾನೆ. ಪೊಲೀಸರು ತಕ್ಷಣವೇ ಸರ್ಕಾರಿ ರಾಯಪೇಟ್ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲು ಯತ್ನಿಸಿದ್ದಾರೆ. ಆದರೆ, ರಾಮ್ ಕುಮಾರ್ ನನ್ನು ಉಳಿಸಿಕೊಳ್ಳಲು ಆಗಲಿಲ್ಲ. ರಾಮ್ ಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸೋಮವಾರ(ಸೆಪ್ಟೆಂಬರ್ 19) ದಂದು ಕೋರ್ಟಿನಲ್ಲಿ ವಿಚಾರಣೆಗೆ ಬರಲು ನಿಗದಿಯಾಗಿದೆ.

ಮೀನಾಕ್ಷಿಪುರಂನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದ ರಾಮ್, ಜೂನ್ 24ರಂದು ಸ್ವಾತಿ ಕೆಲಸಕ್ಕೆ ಹೋಗಲು ರೈಲಿಗಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ಆಕೆಯನ್ನು ಹತ್ಯೆ ಮಾಡಿದ್ದ.

ರಾಮ ಕುಮಾರ್ ಬಂಧನಕ್ಕಾಗಿ 100 ಪೊಲೀಸರ ವಿಶೇಷ ತಂಡ ರಚನೆ ಮಾಡಲಾಗಿತ್ತು, ರೈಲ್ವೆ ಪೊಲೀಸರು, ಸೈಬರ್ ಕ್ರೈಂ ಪೊಲೀಸರು ಆರೋಪಿಯ ಬಂಧನಕ್ಕೆ ಸಹಕಾರ ನೀಡಿದರು. ಹಲವು ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು, ಜೂನ್ 25ರಂದು ರಾಮ ಕುಮಾರ್ ರೇಖಾ ಚಿತ್ರ ಬಿಡುಗಡೆ ಮಾಡಲಾಗಿತ್ತು. ಕೊನೆಗೆ ಜುಲೈ 1 ರಂದು ಆತನನ್ನು ಬಂಧಿಸಿ ಜೈಲಿಗೆ ಕಳಿಸಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Ramkumar, the lone accused in the Infosys techie Swathy murder case has committed in the Puzhal prison in Chennai this evening(September 18).
Please Wait while comments are loading...