Get Updates
Get notified of breaking news, exclusive insights, and must-see stories!

ಜಯಲಲಿತಾ ಅವರ ಸ್ಥಿತಿ ಗಂಭೀರ: ಅಪೋಲೋ ಆಸ್ಪತ್ರೆ

ಜಯಲಲಿತಾ ಅವರ ಸ್ಥಿತಿ ಗಂಭೀರವಾಗಿದ್ದು, ಕೃತಕ ಉಸಿರಾಟ ಸಾಧನದ ನೆರವಿನಿಂದ ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ಅಪೋಲೋ ಆಸ್ಪತ್ರೆ ವಕ್ತಾರರು ಹೇಳಿದ್ದಾರೆ.

ಚೆನ್ನೈ, ಡಿಸೆಂಬರ್ 05: ತಮಿಳುನಾಡಿನ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಆರೋಗ್ಯದ ಬಗ್ಗೆ ಅಪೋಲೋ ಆಸ್ಪತ್ರೆ ಸೋಮವಾರ ಮಧ್ಯಾಹ್ನ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ.

ಜಯಲಲಿತಾ ಅವರ ಸ್ಥಿತಿ ಗಂಭೀರವಾಗಿದ್ದು, ಕೃತಕ ಉಸಿರಾಟ ಸಾಧನದ ನೆರವಿನಿಂದ ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ಅಪೋಲೋ ಆಸ್ಪತ್ರೆ ವಕ್ತಾರರು ಹೇಳಿದ್ದಾರೆ.

Jayalalithaa continues to be very critical says Apollo Hospital

ಕಳೆದ 74 ದಿನಗಳಿಂದ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಸಿಎಂ ಜಯಲಲಿತಾ ಅವರಿಗೆ ಭಾನುವಾರ ಸಂಜೆ ಹೃದಯಾಘಾತವಾಗಿದ್ದು, ಐಸಿಯುನಲ್ಲಿ ತಜ್ಞ ವೈದ್ಯರು ಆರೈಕೆ ಮಾಡುತ್ತಿದ್ದಾರೆ, ಕೃತಕ ಉಸಿರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.[ಜಯಾ ಹೃದಯ ಲಬ್ ಡಬ್ ಎನ್ನಲು ಕೃತಕ ಸಾಧನ ಬಳಕೆ]

ಜತೆಗೆ ECMO ಹಾಗೂ ಇನ್ನಿತರ ಜೀವ ಸಂರಕ್ಷಕ ವ್ಯವಸ್ಥೆ ಕಲ್ಪಿಸಲಾಗಿದೆ. ಲಂಡನ್ನಿನ ವೈದ್ಯ ರಿಚರ್ಡ್ ಹಾಗೂ ಏಮ್ಸ್ ವೈದ್ಯರ ಜತೆ ಸಮಾಲೋಚನೆ ನಡೆಸಲಾಗುತ್ತಿದೆ.


ದೆಹಲಿಯ ಏಮ್ಸ್ ನಿಂದ ನಾಲ್ಕು ಮಂದಿ ತಜ್ಞ ವೈದ್ಯರ ತಂಡ ನಿರಂತರವಾಗಿ ಅಪೋಲೋ ಆಸ್ಪತ್ರೆ ಜತೆ ಸಂಪರ್ಕದಲ್ಲಿದೆ ಎಂದು ಡಾ. ಪ್ರತಾಪ್ ರೆಡ್ಡಿ ಹೇಳಿದ್ದಾರೆ.[ಜಯಾ LIVE : ಮತ್ತೊಂದು ಶಸ್ತ್ರಚಿಕಿತ್ಸೆ ಬಲು ಕಷ್ಟ ಅಂತಿದ್ದಾರೆ ವೈದ್ಯರು]

ಜಯಲಲಿತಾ ಅವರಿಗೆ ಭಾನುವಾರ ಸಂಜೆ ಹೃದಯಾಘಾತವಾದ ಬಳಿಕ ರಾತ್ರಿಯೇ ಆಂಜಿಯೋಪ್ಲಾಸ್ಟಿ ಸರ್ಜರಿ ಮಾಡಲಾಗಿದೆ.68 ವರ್ಷ ವಯಸ್ಸಿನ ಜಯಲಲಿತಾ ಅವರ ಹೃದಯ ಬಡಿತ ಸುಸ್ಥಿತಿಯಲ್ಲಿಡಲು extracorporeal membrane ಸಾಧಕವನ್ನು ಬಳಸಲಾಗಿದೆ.

ಸೋಮವಾರದಂದು ECMO ಇನ್ನಿತರ ಜೀವ ಸಂರಕ್ಷಕ ಸಾಧನಗಳನ್ನು ಉಪಯೋಗಿಸಿ, ಹೃದಯ ಹಾಗೂ ಶ್ವಾಸಕೋಶ ಸಮಸ್ಥಿತಿಯಲ್ಲಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಅಪೋಲೋ ಆಸ್ಪತ್ರೆ ವೈದ್ಯರು ಹೇಳಿದ್ದಾರೆ ಎಂದು ಎಐಎಡಿಎಂಕೆ ವಕ್ತಾರೆ ಸರಸ್ವತಿ ಸ್ಪಷ್ಟಪಡಿಸಿದ್ದಾರೆ. [ಮಾರಕ ಶನಿ ತೊಂದರೆಯಿಂದ 'ಅಮ್ಮ' ತಪ್ಪಿಸಿಕೊಳ್ಳೋದು ಕಷ್ಟಕಷ್ಟ!]

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+