ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹವಾಲ್ದಾರ್ ಪಳನಿ ಕುಟುಂಬಕ್ಕೆ ಪರಿಹಾರ, ಒಬ್ಬರಿಗೆ ಸರ್ಕಾರಿ ಉದ್ಯೋಗ

|
Google Oneindia Kannada News

ಚೆನ್ನೈ, ಜೂನ್ 17 : ಭಾರತ ಮತ್ತು ಚೀನಾ ಸೈನಿಕರ ನಡುವಿನ ಘರ್ಷಣೆಯಲ್ಲಿ ತಮಿಳುನಾಡಿನ ಹವಾಲ್ದಾರ್ ಪಳನಿ ಸಹ ಹುತಾತ್ಮರಾಗಿದ್ದಾರೆ. ರಾಜ್ಯ ಸರ್ಕಾರ ಅವರ ಕುಟುಂಬಕ್ಕೆ 20 ಲಕ್ಷ ಪರಿಹಾರ ಘೋಷಣೆ ಮಾಡಿದೆ.

Recommended Video

ಕಷ್ಟ ಪಟ್ಟು ಕಟ್ಟಿಸಿದ ಮನೆಗೆ ಕಾಲಿಡಲು ಸಾಧ್ಯವಾಗಲಿಲ್ಲ ಹುತಾತ್ಮ ಯೋಧ ಪಳನಿ | K Palani | Indian Soldier

ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಹವಾಲ್ದಾರ್ ಪಳನಿ (40) ಸಾವಿಗೆ ಸಂತಾಪ ಸೂಚಿಸಿದ್ದಾರೆ. ಹುತಾತ್ಮ ಯೋಧನ ಕುಟುಂಬಕ್ಕೆ ರಾಜ್ಯ ಸರ್ಕಾರದ ಪರವಾಗಿ ಪರಿಹಾರ ಘೋಷಣೆ ಮಾಡಿದ್ದಾರೆ.

Breaking: ಚೀನಾ-ಭಾರತ ಸಂಘರ್ಷ: ಚೀನಾ ಕಮಾಂಡಿಂಗ್ ಅಧಿಕಾರಿ ಹತ್ಯೆ Breaking: ಚೀನಾ-ಭಾರತ ಸಂಘರ್ಷ: ಚೀನಾ ಕಮಾಂಡಿಂಗ್ ಅಧಿಕಾರಿ ಹತ್ಯೆ

ಹವಾಲ್ದಾರ್ ಪಳನಿ ರಾಮನಾಥಪುರಂ ಜಿಲ್ಲೆಯ ಕಡುಕಲೂರು ಗ್ರಾಮದ ನಿವಾಸಿ. 22 ವರ್ಷಗಳಿಂದ ಅವರು ಸೇನೆಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ಪಳನಿ ಅವರಿಗೆ ಇಬ್ಬರು ಮಕ್ಕಳಿದ್ದು, ಕುಟುಂಬದ ಒಬ್ಬರು ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡುವ ಭರವಸೆ ನೀಡಲಾಗಿದೆ.

ಭಾರತ-ಚೀನಾ ಘರ್ಷಣೆ: ಚೈನೀಸ್ ಸೈನಿಕರ ಸಾವಿನ ಲೆಕ್ಕ ನೀಡಿದ ಯುಎಸ್ಭಾರತ-ಚೀನಾ ಘರ್ಷಣೆ: ಚೈನೀಸ್ ಸೈನಿಕರ ಸಾವಿನ ಲೆಕ್ಕ ನೀಡಿದ ಯುಎಸ್

20 Lakh Composition For Havaldar K Palani Family

ಪಳನಿ ಅವರ ಪುತ್ರ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಪುತ್ರಿ 3ನೇ ತರಗತಿ. ಪಳನಿ ಅವರ ಪತ್ನಿ ಪದವೀಧರೆಯಾಗಿದ್ದು, ರಾಮನಾಥಪುರಂ ಜಿಲ್ಲೆಯ ಕಾಲೇಜಿನಲ್ಲಿ ಗುಮಾಸ್ತೆಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.

ಭಾರತ-ಚೀನಾ ಗಡಿ ಉದ್ವಿಗ್ನತೆ ಹಿಂದಿನ ರೋಚಕ ಇತಿಹಾಸ! ಭಾರತ-ಚೀನಾ ಗಡಿ ಉದ್ವಿಗ್ನತೆ ಹಿಂದಿನ ರೋಚಕ ಇತಿಹಾಸ!

"ರಾಜಸ್ಥಾನದಿಂದ ಅಧಿಕಾರಿಯೊಬ್ಬರು ಕರೆ ಮಾಡಿ ಪಳನಿ ಮೃತಪಟ್ಟ ಬಗ್ಗೆ ಮಾಹಿತಿ ನೀಡಿದರು. ಈ ವರ್ಷದ ಜನವರಿಯಲ್ಲಿ ಪಳನಿ ಮನೆಗೆ ಬಂದಿದ್ದರು. ಕುಟುಂಬ ಅವರ ಮೇಲೆಯೇ ಅವಲಂಬಿತವಾಗಿತ್ತು" ಎಂದು ಮಾವ ನಾಚಿಯಪ್ಪನ್ ಹೇಳಿದ್ದಾರೆ.

ಲಡಾಖ್‌ನ ಪೂರ್ವ ಭಾಗದ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ನಡೆದಿತ್ತು. 20 ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ ಎಂಬ ಮಾಹಿತಿ ಇದೆ. ಪಳನಿ ಅವರ ಪಾರ್ಥಿವ ಶರೀರ ಇನ್ನೂ ಸ್ವಗ್ರಾಮಕ್ಕೆ ಆಗಮಿಸಬೇಕಿದೆ.

English summary
Tamil Nadu Government announced 20 lakh composition and government job for family member of Havaldar K. Palani who martyred in clash at Galwan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X