ಪೆಟಾ ನಿಷೇಧಕ್ಕೆ ಆಗ್ರಹಿಸಿದ ಮಕ್ಕಳ ರಕ್ಷಣಾ ಸಮಿತಿ

Posted By:
Subscribe to Oneindia Kannada

ಚೆನ್ನೈ, ಫೆಬ್ರವರಿ 03: ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟು ನಿಷೇಧಿಸಬೇಕೆಂದು ಎಂದು ಪಟ್ಟುಹಿಡಿದಿರುವ ಪೆಟಾಗೆ ಪೆಟ್ಟು ಕೊಡಲು ತಮಿಳುನಾಡಿನ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿ ಮುಂದಾಗಿದೆ. ಪ್ರಾಣಿ ರಕ್ಷಣೆ ಹೆಸರಿನಲ್ಲಿ ಪೆಟಾ ವೆಬ್ ಸೈಟ್ ತುಂಬಾ ಅರೆನಗ್ನ ಚಿತ್ರಗಳು, ಅಶ್ಲೀಲ ಚಿತ್ರಗಳು ತುಂಬಿವೆ ಎಂದು ಸಮಿತಿ ದೂರಿದ್ದು, ಪೆಟಾ ನಿಷೇಧಕ್ಕಾಗಿ ಆಗ್ರಹಿಸಿದೆ.

ತಮಿಳುನಾಡಿನ ಮಕ್ಕಳ ಹಕ್ಕು ರಕ್ಷಣಾ ಘಟಕವು ಪೆಟಾ ವೆಬ್‌ಸೈಟ್‍ನಲ್ಲಿ ಅಶ್ಲೀಲ ಎಂದೆನಿಸುವ ವಿಷಯಗಳು ಇವೆ. ಸೆಲೆಬ್ರಿಟಿಗಳು ನಗ್ನತೆ ಪ್ರದರ್ಶಿಸುತ್ತಿರುವ ಫೋಟೊಗಳನ್ನು ಪ್ರದರ್ಶಿಸುವ ಮೂಲಕ ಪೆಟಾದ ವೆಬ್‍ಸೈಟ್ ಭಾರತದ ಕಾನೂನುಗಳನ್ನು ಉಲ್ಲಂಘಿಸಿದೆ ಎಂದು ಚೆನ್ನೈ ಮೂಲದ ಮಕ್ಕಳ ಹಕ್ಕು ರಕ್ಷಣಾ ಸಮಿತಿ ಕಾರ್ಯಕರ್ತ ಇನೋಚ್ ಮೋಸೆಸ್ ಆರೋಪಿಸಿದ್ದಾರೆ.[ಪೆಟಾದಿಂದ ಕಾಮಪ್ರಚೋದಕ ವೆಬ್ ಸೈಟ್]

TN child rights panel wants ban on PETA Know Why?

ನಗ್ನತೆ ಪ್ರದರ್ಶಿಸುವ ಫೋಟೊಗಳನ್ನು ಪೆಟಾ ವೆಬ್‍ಸೈಟ್ ಹೊಂದಿದ್ದು, ಇದು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಪ್ರಾಣಿಗಳ ರಕ್ಷಣೆ ಹೆಸರಿನಲ್ಲಿ ಬಾಲಿವುಡ್, ಹಾಲಿವುಡ್ ಸೆಲೆಬ್ರಿಟಿಗಳನ್ನು ಬಳಸಿಕೊಂಡು ನಗ್ನವಾಗಿ ಫೋಟೋಶೂಟ್ ಮಾಡಿಸಿ, ವೆಬ್ ಸೈಟ್ ಗೆ ಹಾಕಲಾಗುತ್ತಿದೆ. ಇದರಿಂದ ಮಕ್ಕಳ ಮೇಲೆ ದುಷ್ಪರಿಣಾಮ ಉಂಟಾಗಿದೆ ಎಂದು ಸಮಿತಿ ಸದಸ್ಯರು ಹೇಳಿದ್ದಾರೆ.[ಜಲ್ಲಿಕಟ್ಟು ಮಸೂದೆಗೆ ತಡೆ ನೀಡಲು ಸುಪ್ರಿಂ ನಕಾರ]

ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟು ನಿಷೇಧಿಸುವಂತೆ ಆಗ್ರಹಿಸಿ ಕಾನೂನು ಸಮರ ಸಾರಿರುವ ಪೆಟಾ ಸಂಸ್ಥೆಗೆ ಈಗ ಹೊಸ ತಲೆನೋವು ಶುರುವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Tamil Nadu’s child rights panel has recommended banning PETA’s website for allegedly showing sexually explicit content. People for Ethical Treatment of Animals (PETA) had campaigned for a controversial ban on Jallikattu
Please Wait while comments are loading...