ಕರುಣಾನಿಧಿ ಅಂತಿಮ ದರ್ಶನ ಮಾಡಿದ ರಜನೀಕಾಂತ್, ಪಳನೀಸ್ವಾಮಿ

Recommended Video

      ಕರುಣಾನಿಧಿ ಅಂತಿಮ ದರ್ಶನ ಮಾಡಿದ ರಜನೀಕಾಂತ್, ಪಳನೀಸ್ವಾಮಿ | Oneindia Kannada

      ಚೆನ್ನೈ, ಆಗಸ್ಟ್ 08: ನಿನ್ನೆ ಸಂಜೆ ದೈವಾಧೀನರಾದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಪಾರ್ಥಿವ ಶರೀರವನ್ನು ರಾಜಾಜಿ ಹಾಲ್‌ನಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದ್ದು, ತ.ನಾಡು ಪ್ತಸ್ತುತ ಮುಖ್ಯಮಂತ್ರಿ ಪಳನಿಸ್ವಾಮಿ ಹಾಗೂ ನಟ ರಜನೀಕಾಂತ್ ಮುಂಜಾನೇಯೇ ಅಂತಿಮ ದರ್ಶನ ಪಡೆದರು.

      ತ್ರಿವರ್ಣ ಧ್ವಜ ಹೊದಿಸಿದ ಕರುಣಾನಿಧಿ ಕಳೇಬರವನ್ನು ರಾಜಾಜಿ ಹಾಲ್‌ನಲ್ಲಿ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದ್ದು, ಮಧ್ಯರಾತ್ರಿಯಿಂದಲೂ ಇಲ್ಲಿ ಜನಸಾಗರವೇ ಏರ್ಪಟ್ಟಿದೆ. ತಮ್ಮ ಮೆಚ್ಚಿನ ನಾಯಕನನ್ನು ಕೊನೆಯ ಬಾರಿ ಕಾಣಲು ಸಹಸ್ರಾರು ಸಂಖ್ಯೆಯಲ್ಲಿ ಜನ ರಾರಾಜಿ ಹಾಲ್‌ನ ಮುಂದೆ ಜಮಾಯಿಸಿದ್ದಾರೆ.

      ಅಂತಿಮ ದರ್ಶನ ಪಡೆದು ಮಾತನಾಡಿದ ಮುಖ್ಯಮಂತ್ರಿ ಪಳನಿಸ್ವಾಮಿ, ಇದು ತಮಿಳುನಾಡಿಗೆ ಆದ ಭಾರಿ ನಷ್ಟ, ಕರುಣಾನಿಧಿ ಅವರ ಅಗಲಿಕೆಯ ದುಖಃವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ಸದಸ್ಯರಿಗೆ ಹಾಗೂ ಡಿಎಂಕೆ ಪಕ್ಷದ ಕಾರ್ಯಕರ್ತರಿಗೆ ಆ ದೇವರು ನೀಡಲಿ ಎಂದು ಅವರು ಹೇಳಿದ್ದಾರೆ.

      Tamilnadu CM Palaniswamy, actor Rajinikanth pay last respects to Karunanidhi

      ನಟ ರಜನೀಕಾಂತ್ ಸಹ ಇಂದು ಮುಂಜಾನೆಯೇ ಕರುಣಾನಿಧಿ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಅವರು ಕೆಲವು ದಿನಗಳ ಹಿಂದೆಯಷ್ಟೆ ಆಸ್ಪತ್ರೆಗೆ ಭೇಟಿ ನೀಡಿ ಕರುಣಾನಿಧಿ ಆರೋಗ್ಯ ವಿಚಾರಿಸಿದ್ದರು.

      ಕರುಣಾನಿಧಿ ಅವರ ಅಂತಿಮ ಸಂಸ್ಕಾರವನ್ನು ಮರೀನಾ ಬೀಚ್‌ನ ಅಣ್ಣಾ ಸ್ಮಾರಕದಲ್ಲಿ ಮಾಡಲು ಅವಕಾಶ ನೀಡಬೇಕೆಂದು ಡಿಎಂಕೆ ನಾಯಕರು ನಿನ್ನೆ ತಡ ರಾತ್ರಿ ಕೋರ್ಟ್‌ ಮೆಟ್ಟಿಲೇರಿದ್ದರು.

      Tamilnadu CM Palaniswamy, actor Rajinikanth pay last respects to Karunanidhi

      ರಾತ್ರಿ 10.30ಕ್ಕೆ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ ಇಂದು ಬೆಳಿಗ್ಗೆ 8 ಗಂಟೆಗೆ ವಿಚಾರಣೆಯನ್ನು ಮುಂದೂಡಿದೆ. ಇನ್ನು ಕೆಲವೇ ಗಂಟೆಗಳಲ್ಲಿ ವಿವಾದ ಬಗೆಹರಿಯಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+